ಕುತ್ಪಾಡಿ ಆನಂದ ಗಾಣಿಗರ ಸ್ಮರಣಾರ್ಥ ಆನಂದೋತ್ಸವ -೨೦೨೨

ಉಡುಪಿ : ನಾಡಿನ ಪ್ರತಿಷ್ಠಿತ ರಂಗಭೂಮಿ ಸಂಸ್ಥೆ `ರಂಗಭೂಮಿ ಉಡುಪಿ’ ವತಿಯಿಂದ ಸಂಸ್ಥೆಯ ಸ್ಥಾಪಕರಲ್ಲೋರ್ವರಾದ ದಿ.ಕುತ್ಪಾಡಿ ಆನಂದ ಗಾಣಿಗರ ಸ್ಮರಣಾರ್ಥ `ಆನಂದೋತ್ಸವ -೨೦೨೨’ ಏ.೨೩ ಮತ್ತು ೨೪ರಂದು ಉಡುಪಿ ಎಂಜಿಎo ಕಾಲೇಜಿನ ಮುದ್ದಣ ಮಂಟಪದಲ್ಲಿ ನಡೆಯಲಿದೆ.
ಏ.೨೩ರಂದು ಸಂಜೆ ೫-೪೫ಕ್ಕೆ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಶಿಕ್ಷಣ ತಜ್ಞ, ಮಾಹೆ ಸಹ ಕುಲಾಧಿಪತಿ ಡಾ.ಎಚ್.ಎಸ್.ಬಲ್ಲಾಳ್ ಅವರಿಗೆ ತಲ್ಲೂರು ಗಿರಿಜಾ ಶಿವರಾಮ ಶೆಟ್ಟಿ `ಸಂಸ್ಕೃತಿ ಸಾಧಕ ಪ್ರಶಸ್ತಿ ‘ಯನ್ನು ಪ್ರದಾನ ಮಾಡಲಾಗುವುದು.
ಕಾರ್ಯಕ್ರಮವನ್ನು ನಾಡೋಜ ಡಾ.ಜಿ.ಶಂಕರ್ ಅವರು ಉದ್ಘಾಟಿಸುವರು. ಸಭಾಧ್ಯಕ್ಷತೆಯನ್ನು ಮಾಹೆಯ ನಿವೃತ್ತ ಉಪಕುಲಪತಿ ಡಾ.ಎಂ.ಎಸ್.ವಲಿಯತ್ತನ್ ವಹಿಸುವರು.ಮಣಿಪಾಲ ಕೆಎಂಸಿಯ ನಿವೃತ್ತ ಡೀನ್ ಡಾ.ಪಿಎಲ್‌ಎನ್ ರಾವ್, ಉಜ್ವಲ ಡೆವಲರ‍್ಸ್ನ ಪುರುಷೋತ್ತಮ ಪಿ. ಶೆಟ್ಟಿ, ಎಂಜಿಎo ಕಾಲೇಜಿನ ಪ್ರಿನ್ಸಿಪಾಲ್ ಡಾ.ದೇವಿದಾಸ ಎಸ್.ನಾಯ್ಕ್, ರಂಗಭೂಮಿ ಅಧ್ಯಕ್ಷ ಡಾ.ತಲ್ಲೂರು ಶಿವರಾಮ ಶೆಟ್ಟಿ ಉಪಸ್ಥಿತರಿರುವರು.
ಕರ್ನಾಟಕ ಯಕ್ಷಗಾನ ಅಕಾಡೆಮಿಯ ಮಾಜಿ ಅಧ್ಯಕ್ಷ ಪ್ರೊ.ಎಂ.ಎಲ್.ಸಾಮಗ ಅಭಿನಂದನಾ ಭಾಷಣ ಮಾಡಲಿದ್ದಾರೆ.
ಸಭಾ ಕಾರ್ಯಕ್ರಮದ ಬಳಿಕ ಚಿತ್ತಾರ ಬೆಂಗಳೂರು ಇವರಿಂದ `ನಾಯಿ ಕಳೆದಿದೆ ‘ ನಾಟಕ ಪ್ರದರ್ಶನಗೊಳ್ಳಲಿದೆ.
ಏ.೨೪ರಂದು ಸಂಜೆ ೫.೪೫ಕ್ಕೆ ಆನಂದೋತ್ಸವದ ಎರಡನೇ ದಿನದ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ರಂಗಭೂಮಿ ಉಡುಪಿ ಅಧ್ಯಕ್ಷ ಡಾ.ತಲ್ಲೂರು ಶಿವರಾಮ ಶೆಟ್ಟಿ ವಹಿಸುವರು. ಶಾಸಕ ಕೆ.ರಘುಪತಿ ಭಟ್, ತುಳುಕೂಟ ಉಡುಪಿ ಅಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ, ಉದ್ಯಮಿಗಳಾದ ನಾಗೇಶ್ ಹೆಗ್ಡೆ, ರತ್ನಾಕರ ಶೆಟ್ಟಿ ಮುಂಬಾಯಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಉಪನಿರ್ದೇಶಕಿ ಪೂರ್ಣಿಮಾ ಹಾಗೂ ರಂಗ ನಿರ್ದೇಶಕ ಮಂಜುನಾಥ ಬಡಿಗೇರ ಉಪಸ್ಥಿತರಿರುವರು.
ಸಭಾ ಕಾರ್ಯಕ್ರಮದ ಬಳಿಕ ರಂಗಭೂಮಿ ಉಡುಪಿ ಕಲಾವಿದರಿಂದ `ವಿಶಾಂಕೇ ‘ ನಾಟಕ ಪ್ರದರ್ಶನಗೊಳ್ಳಲಿದೆ.

ಡಾ.ಎಚ್.ಎಸ್.ಬಲ್ಲಾಳ್ ಅವರ ಕುರಿತು : ಡಾ. ಹೆಬ್ರಿ ಸುಭಾಸ್‌ಕೃಷ್ಣ ಬಲ್ಲಾಳ್ ಅವರು ವಿಕಿರಣಶಾಸ್ತç ತಜ್ಞರು. ಪ್ರಸ್ತುತ ಮಾಹೆಯ ಸಹಕುಲಾಧಿಪತಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಭಾರತೀಯ ವಾಣಿಜ್ಯಮಂಡಳಿಯ ಒಕ್ಕೂಟ (ಎಫ್‌ಐಸಿಸಿಐ) ವೈದ್ಯಕೀಯ ವಿಭಾಗದ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದಾರೆ. ಇವರ ಬಹುಮುಖ ಸಾಧನೆಗಳನ್ನು ಪರಿಗಣಿಸಿ ಮಾಹೆ, ರೋಟರಿ ಕ್ಲಬ್ ಮತ್ತು ಸಿಂಡಿಕೇಟ್ ಬ್ಯಾಂಕಿನ ಸಹಯೋಗದಲ್ಲಿ ನೀಡುವ ೨೦೦೮ನೇ ವಾರ್ಷಿಕ ಪ್ರಶಸ್ತಿಯನ್ನು ನೀಡಲಾಗಿತ್ತು. ಆರ್ಯಭಟ ಪ್ರಶಸ್ತಿ ಪುರಸ್ಕೃತರೂ ಹೌದು. ರಂಗಭೂಮಿ ಚಟುವಟಿಕೆಗಳಿಗೆ ಡಾ.ಬಲ್ಲಾಳ್ ಅವರ ಕೊಡುಗೆಯನ್ನು ಪರಿಗಣಿಸಿ ಈ ಸಾಲಿನ ತಲ್ಲೂರು ಗಿರಿಜಾ ಶಿವರಾಮ ಶೆಟ್ಟಿ `ಸಂಸ್ಕೃತಿ ಸಾಧಕ ಪ್ರಶಸ್ತಿ’ ನೀಡಲಾಗುತ್ತಿದೆ.

 
 
 
 
 
 
 
 
 
 
 

Leave a Reply