ಮಂಗಳೂರು: ಮಹಿಳಾ ವಲಸೆ ಕಾರ್ಮಿಕರ ನೋಂದಣಿಯೂ ಆಗಬೇಕು. ವಲಸೆ ಕಾರ್ಮಿಕರಾಗಿರುವ ಗರ್ಭಿಣಿ ಯರು, ಮಕ್ಕಳತ್ತ ವಿಶೇಷ ಗಮನಹರಿಸಿ ಅವರಿಗೆ ಬೇಕಾದ ಶೌಚಾಲಯ ವ್ಯವಸ್ಥೆ ಸೇರಿದಂತೆ ಮೂಲ ಸೌಕರ್ಯ ವನ್ನು ಒದಗಿಸಬೇಕು ಎಂದು ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯೆ ಶ್ಯಾಮಲಾ ಎಸ್.ಕುಂದರ್ ಹೇಳಿದರು.
ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಕಚೇರಿಯಲ್ಲಿ ಗುರುವಾರ ಅಧಿಕಾರಿಗಳ ಸಭೆ ನಡೆಯಿತು.ಈ ಸಂದರ್ಭದಲ್ಲಿ ಕಟ್ಟಡ ಕಾರ್ಮಿಕರು ಸವಲತ್ತು ವಂಚಿತರಾಗದಂತೆ ಕಾರ್ಮಿಕ ಇಲಾಖಾ ಅಧಿಕಾರಿಗಳು ನೋಡಿಕೊಳ್ಳಬೇಕು. ನೋಂದಣಿ ಕೂಡ ಕಡ್ಡಾಯವಾಗಬೇಕು ಎಂದು ಹೇಳಿದರು.
ಇನ್ನು ಬೇರೆ ಊರುಗಳಿಂದ ಕೆಲಸ ಅರಸಿ ವಲಸೆ ಬರುವ ಕಾರ್ಮಿಕರಿಗೆ ಕಾರ್ಮಿಕ ಇಲಾಖೆಯಡಿ ಸರಿಯಾದ ಸವಲತ್ತುಗಳು ಸಿಗುತ್ತಿಲ್ಲ ಎಂಬುದು ತಿಳಿದು ಬಂದಿದೆ. ಇಂತಹ ಸ್ಥಿತಿಯಲ್ಲಿರುವ ಈ ಕಾರ್ಮಿಕರಿಗೆ ಸವಲತ್ತುಗಳು ಸಿಗಲೆಬೇಕು ಎಂದರು. ಸದ್ಯ ದ.ಕ ಜಿಲ್ಲೆಯಲ್ಲಿ 40 ಸಾವಿರ ಕಟ್ಟಡ ಕಾರ್ಮಿಕರ ನೋಂದಾವಣೆಯಾಗಿದೆ ಎಂದು ಅಧಿಕಾರಿಗಳು ಈ ವೇಳೆ ತಿಳಿಸಿದರು.