ಕೊಡವೂರು : ತುಳು ಲಿಪಿಯ ನಾಮಫಲಕ ಅನಾವರಣ, ಸನ್ಮಾನ

ಉಡುಪಿ : ತುಳುವರು ಹಿಂದಿನಿಂದಲೂ ಭಾಷೆಯ ವಿಚಾರದಲ್ಲಿ ತೋರಿದ ಹೃದಯ ವೈಶಾಲತೆಯೇ ನಮ್ಮ ತುಳು ಮಾತೃಭಾಷೆಯ ಬೆಳವಣಿಗೆ ಕುಂಠಿತಗೊಳ್ಳಲು ಕಾರಣವಾಯಿತು.ಈ ನಿಟ್ಟಿನಲ್ಲಿ ನಮ್ಮ ಸಂಸ್ಕೃತಿ,ಆಚಾರ ವಿಚಾರಗಳನ್ನು ಉಳಿಸಿ,ಬೆಳೆಸಲು ಪೂರಕವಾದ ಮಾತೃಭಾಷೆ ಬೆಳವಣಿಗೆಯ ಬಗ್ಗೆ ಮುಂದಿನ ದಿನಗಳಲ್ಲಿ ಹೆಚ್ಚಿನ ರೀತಿಯಲ್ಲಿ ಗಮನಹರಿಸಬೇಕು ಎಂದು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಸದಸ್ಯ ಡಾ.ಆಕಾಶ್ ರಾಜ್ ಜೈನ್ ಹೇಳಿದರು.

ಜೈ ತುಳುನಾಡ್ ಸಂಘಟನೆಯ ಉಡುಪಿ ಘಟಕದ ವತಿಯಿಂದ, ಸ್ಥಳೀಯ ವಿವಿಧ ಸಂಘ, ಸಂಸ್ಥೆಗಳ ಸಹಭಾಗಿತ್ವದಲ್ಲಿ ಕೊಡವೂರಿನ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ತುಳು ಲಿಪಿಯ ನಾಮಫಲಕ ಅನಾವರಣ,ಸಾಧಕರ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದರು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಖ್ಯಾತ ಸಾಹಿತಿ ಮಲ್ಪೆ ಬಾ.ಸಾಮಗ ಸಮಸ್ತ ತುಳುವರು ಒಂದೇ ಸೂರಿನಡಿಯಲ್ಲಿ ಸಂಘಟಿತರಾಗಿ ಉಗ್ರ ಹೋರಾಟವನ್ನು ನಡೆಸಿದಲ್ಲಿ ನಮ್ಮ ತುಳು ಭಾಷೆಗೆ ಸಂವಿಧಾನಾತ್ಮಕವಾಗಿ ಸಿಗಬೇಕಾದ ಸ್ಥಾನಮಾನ,ಅವಕಾಶಗಳು ಶೀಘ್ರವಾಗಿ ಲಭಿಸಬಲ್ಲದು ಎಂದರು.ಕಾರ್ಯಕ್ರಮದಲ್ಲಿ ತುಳು ಲಿಪಿ ಪರೀಕ್ಷೆಯಲ್ಲಿ ಇತ್ತೀಚೆಗೆ ಉತ್ತೀರ್ಣರಾದವರಿಗೆ ಪ್ರಮಾಣ ಪತ್ರ ನೀಡಿ ಗೌರವಿಸಲಾಯಿತು.

ಸ್ಥಳೀಯ ನಗರಸಭಾ ಸದಸ್ಯ ವಿಜಯ ಕೊಡವೂರು, ಸುಮನಸಾ ಕೊಡವೂರು ಇದರ ಅಧ್ಯಕ್ಷ ಪ್ರಕಾಶ್ ಜಿ.ಕೊಡವೂರು, ಪ್ರಸಿದ್ಧ ರಂಗಕರ್ಮಿ ಬಾಲಕೃಷ್ಣ ಕೊಡವೂರು, ಜೈ ತುಳುನಾಡ್ ಸಂಘಟನೆಯ ಪ್ರಧಾನ ಕಾರ್ಯದರ್ಶಿ ಸದಾಶಿವ ಮುದ್ರಾಡಿ,ಉಡುಪಿ ಘಟಕದ ಸಂಚಾಲಕ ರಾಜೇಶ್ ತುಳುವೆ,ಶಾಲಾ ಮುಖ್ಯ ಶಿಕ್ಷಕಿ ಪುಷ್ಪಾವತಿ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷೆ ಶೈಲಜಾ,ನಿವ್ರತ್ತ ಶಿಕ್ಷಕಿ ಮಲ್ಲಿಕಾ ದೇವಿ, ಯುವ ಮುಂದಾಳು ಪ್ರವೀಣ್ .ಜಿ.ಕೊಡವೂರು, ತುಳು ಲಿಪಿ ಶಿಕ್ಷಕಿಯರಾದ ಅಕ್ಷತಾ ಕುಲಾಲ್,ಸ್ವಾತಿ ಸುವರ್ಣ, ಶಿಲ್ಪಾ ಕೇಶವ್ ಉಪಸ್ಥಿತರಿದ್ದರು.

ಶರತ್ ಕೊಡವೂರು ಸ್ವಾಗತಿಸಿದರು,ಸತೀಶ್ ಕೊಡವೂರು ವಂದಿಸಿದರು. ಸುಷ್ಮಾ ದೇವಾಡಿಗ ನಿರೂಪಿಸಿದರು.

 
 
 
 
 
 
 
 
 
 
 

Leave a Reply