ಅಷ್ಟಾಂಗ ಯೋಗ ಪರಿಪಾಲನೆ ನಿಮ್ಮಲ್ಲಿ ಬೆಳೆಸಿಕೊಳ್ಳಿ- ಶ್ರೀ ಕೃಷ್ಣಾಪುರ ಶ್ರೀ ಪಾದರು

ಶ್ರೀ ಕೃಷ್ಣ ಮಠದ ರಾಜಾಂಗಣದಲ್ಲಿ ಪರ್ಯಾಯ ಶ್ರೀ ಕೃಷ್ಣಾಪುರ ಮಠ,ಕರ್ನಾಟಕ ಯೋಗಾಸನ ಸ್ಪೋರ್ಟ್ಸ್ ಅಸೋಸಿಯೇಷನ್(ರಿ),ನಿರಂತರ ಯೋಗ ಕೇಂದ್ರ ಹಾಗೂ ಪತಂಜಲಿ ಯೋಗ ಸಮಿತಿ ಉಡುಪಿಯ ಸಹಭಾಗಿತ್ವದಲ್ಲಿ ಮೈಸೂರು ವಿಭಾಗದ ಸಭ್ ಜೂನಿಯರ್ ಬಾಲಕ ಬಾಲಕಿಯರ ಯೋಗಾಸನ ಸ್ಪರ್ಧೆ 2022.ಯ ಸಮಾರೋಪ ಸಮಾರಂಭದಲ್ಲಿ ಅಧ್ಯಕತೆ ವಹಿಸಿದ ಪರ್ಯಾಯ ಶ್ರೀ ಕ್ರಷ್ಣಾಪುರ ಮಠದ ಶ್ರೀ ಶ್ರೀ ವಿಧ್ಯಾಸಾಗರ ತೀರ್ಥ ಶ್ರೀ ಪಾದರು,ಅಷ್ಟಾಂಗ ಯೋಗದ ಯಮ,ನಿಯಮ,ಆಸನ,ಪ್ರಾಣಾಯಾಮ,ಪ್ರತ್ಯಾಹಾರ,ಧಾರಣ ಧ್ಯಾನ, ಸಮಾಧಿಯ ಎಂಟು ಹಂತವನ್ನು ಪ್ರತಿಯೊಬ್ಬರು ಅನುಭವಿಸಬೇಕೆಂದು ಸಮಸ್ತ ಯೋಗ ಪರಿವಾರಕ್ಕೆ ತಮ್ಮ ಅನುಗ್ರಹದ ನುಡಿಗಳೊಂದಿಗೆ ತಿಳಿಸಿದರು.ಮುಖ್ಯ ಅತಿಥಿಗಳಾಗಿ ಪತಂಜಲಿ ಯೋಗ ಸಮಿತಿ ಮಂಡಲ ಪ್ರಭಾರಿ ಶ್ರೀ ರಾಘವೇಂದ್ರ ರಾವ್,ಗೌರವಾಧ್ಯಕ್ಷರಾದ ಶ್ರೀ ಕೆ.ಶಿವರಾಮ ಶೆಟ್ಟಿ ಯವರು ಸ್ಪರ್ಧಾಳುಗಳವರಿಗೆ ಬಹುಮಾನ ವಿತರಣೆ ಮಾಡಿದರು.ಮೈಸೂರು ಜಿಲ್ಲೆಯ ರೇವನ್ಕರ್, ಉಡುಪಿ ಜಿಲ್ಲಾ ಯೋಗಾಸನ ಕ್ರೀಡೆಯ ಸಂಯೋಜಕರಾದ ಶ್ರೀ ಕೆ. ನರೇಂದ್ರ ಕಾಮತ್, ಹಾಗೂ ಶ್ರೀ ಕೆ.ರಾಘವೇಂದ್ರ ಭಟ್ ವೇದಿಕೆಯಲ್ಲಿ ಹಾಜರಿದ್ದರು. ಶ್ರೀ ಲಕ್ಷ್ಮಣ ಕಾಮತ್ ರವರು ಧನ್ಯವಾದ ನೀಡಿ, ಕಾರ್ಯದಶಿ ಶ್ರೀ ರಂಜಿತ್ ಕೆ.ಎಸ್ ಕಾರ್ಯಕ್ರಮ ನಿರೂಪಿಸಿದರು.

 
 
 
 
 
 
 
 
 
 
 

Leave a Reply