Janardhan Kodavoor/ Team KaravaliXpress
25.6 C
Udupi
Saturday, December 3, 2022
Sathyanatha Stores Brahmavara

ಕೃಷ್ಣಪ್ರೇಮ ಪ್ರಶಸ್ತಿ ಪ್ರದಾನ ಕಾರ್ಯಕ್ರಮ

ನೃತ್ಯನಿಕೇತನ ಕೊಡವೂರು ಸಂಸ್ಥೆಯ ವತಿಯಿಂದ ನೀಡುತ್ತಿರುವ ನಾಲ್ಕನೇ ವರುಷದ “ಕೃಷ್ಣಪ್ರೇಮ” ಪ್ರಶಸ್ತಿ ಪ್ರದಾನ ಕಾರ್ಯಕ್ರಮ ದಿನಾಂಕ 19-11-2022 ಶನಿವಾರ ಸಂಜೆ 5-30 ಕ್ಕೆ ಕೊಡವೂರಿನ “ವಿಪ್ರಶ್ರೀ ಸಭಾಂಗಣದಲ್ಲಿ ನಡೆಯಲಿದೆ.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಿವಮೊಗ್ಗ ರಂಗಾಯಣದ ನಿರ್ದೇಶಕರಾದ ಶ್ರೀ ಸಂದೇಶ್ ಜವಳಿಯವರು ವಹಿಸಿಕೊಳ್ಳಲಿದ್ದಾರೆ.ಅತಿಥಿಗಳಾಗಿ ಉಡುಪಿಯ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಶ್ರೀಮತಿ ಪೂರ್ಣಿಮಾ, ಕರ್ನಾಟಕ ಕರಾವಳಿ ನೃತ್ಯಕಲಾಪರಿಷತ್ತಿನ ಅಧ್ಯಕ್ಷರಾದ ಶ್ರೀ ಯು.ಕೆ.ಪ್ರವೀಣ್,ಮತ್ತು ಉಡುಪಿಯ ಹಿರಿಯ ಉದ್ಯಮಿಗಳು ಮತ್ತು ಸಂಸ್ಕೃತಿ ವಿಶ್ವ ಪ್ರತಿಷ್ಠಾನದ ಗೌರವಾಧ್ಯಕ್ಷರಾದ ಶ್ರೀ ವಿಶ್ವನಾಥ್ ಶೆಣೈಯವರು ಬರಲಿದ್ದಾರೆ.ಈ ಬಾರಿಯ ಪ್ರಶಸ್ತಿಯನ್ನು ನೃತ್ಯದ ಸಾಧಕರುಗಳಾದ ನೃತ್ಯಗುರುಗಳೂ ಮತ್ತು ನಿವೃತ್ತಶಾಲಾ ಶಿಕ್ಷಕರೂ ಆಗಿರುವ ಕಮಲಾಕ್ಷ ಆಚಾರ್ ,ಪ್ರಖ್ಯಾತ ನೃತ್ಯ ಸಂಗೀತ ,ಮತ್ತು ಶಾಸ್ತ್ರೀಯ ಸಂಗೀತ ಕಲಾವಿದರಾಗಿರುವ ಬೆಂಗಳೂರಿನ ಶ್ರೀ ರಮೇಶ್ ಚಡಗ, ವೃತ್ತಿಯಲ್ಲಿ ಸಿವಿಲ್ ಇಂಜಿನಿಯರ್ ಮತ್ತು ಪ್ರವೃತ್ತಿಯಲ್ಲಿ ನೃತ್ಯವರ್ಣಾಲಂಕಾರ ಕಲಾವಿದರಾಗಿರುವ ಕೆ.ಹರೀಶ್ ಕುಮಾರ್ ಗುಂಡಿಬೈಲು,ಖ್ಯಾತ ನೃತ್ಯವಾದ್ಯಸಂಗೀತ ಮತ್ತು ಶಾಸ್ತ್ರೀಯ ಸಂಗೀತದ ಪಿಟೀಲು ಕಲಾವಿದೆಯಾಗಿರುವ ಶ್ರೀಮತಿ ಶರ್ಮಿಳಾ ಕೆ.ರಾವ್,ನೃತ್ಯ ಹಾಗೂ ನಾಟಕ ರಂಗದ ಖ್ಯಾತ ಬೆಳಕಿನ ವಿನ್ಯಾಸ ಕಲಾವಿದರಾಗಿರುವ ಶ್ರೀ ರಾಜು ಮಣಿಪಾಲ್ ರವರು ಪಡೆಯಲಿದ್ದಾರೆ. ಇದರೊಂದಿಗೆ ಈ ವರುಷದಿಂದ ಕೃಷ್ಣಮೂರ್ತಿ ಉಪಾಧ್ಯಾಯ ಮತ್ತು ರಾವ್ ಇಬ್ಬರ ಸ್ಮರಣಾರ್ಥನೀಡಲಿರುವ ಯಕ್ಷಗಾನ ಕಲಿಯುವ ವಿದ್ಯಾರ್ಥಿಗೆ ಕೊಡುವ ವಿದ್ಯಾರ್ಥಿ ವೇತನವನ್ನು ಕೆ.ಜಿ.ದೀಪ್ತ ಕಿದಿಯೂರು ಪಡೆಯಲಿದ್ದಾರೆ.ನೃತ್ಯನಿಕೇತನ ಕೊಡವೂರು ಕಲಾವಿದರಿಂದ ರವೀಂದ್ರನಾಥ ಠಾಗೋರ್ ವಿರಚಿತ ಶ್ರೀಮತಿ ಸುಧಾ ಆಡುಕಳ ಕನ್ನಡ ಅನುವಾದದ ಡಾ|| ಶ್ರೀಪಾದ ಭಟ್ ನಿರ್ದೇಶನದ ” ಚಿತ್ರಾ” ನೃತ್ಯ ನಾಟಕ ನಡೆಯಲಿದೆ

- Advertisement -

ಸಂಬಂಧಿತ ಸುದ್ದಿ

Leave a Reply

ಛಾಯಾಂಕಣ

ಇತ್ತೀಚಿನ ಸುದ್ದಿ

error: Content is protected !!