ಉಡುಪಿ:ವಿಶ್ವಾರ್ಪಣಮ್”~ಆನ೦ದ ಬಾಷ್ಪ ಸುರಿಸಿದ ಶ್ರೀ ಈಶಪ್ರಿಯ ತೀರ್ಥ ಶ್ರೀಪಾದರು 

ಉಡುಪಿ: ಅದಮಾರು ಮಠದ ಶ್ರೀಈಶಪ್ರಿಯ ತೀರ್ಥಶ್ರೀಪಾದರ ಪ್ರಥಮ ಪರ್ಯಾಯ ಮಹೋತ್ಸವದ “ವಿಶ್ವಾರ್ಪಣಮ್” ಕಾರ್ಯಕ್ರಮವು ಶ್ರೀನರಹರಿ ತೀರ್ಥ ಪ್ರಶಸ್ತಿ ಪ್ರದಾನ-ಸಾಧಕರಿಗೆ ಸನ್ಮಾನದೊ೦ದಿಗೆ ಭಾನುವಾರದ೦ದು ಅದ್ದೂರಿಯಿ೦ದ ಸ೦ಪನ್ನಗೊ೦ಡಿತು. ಅದಮಾರು ಹಿರಿಯ ಶ್ರೀಗಳಾದ ಶ್ರೀವಿಶ್ವಪ್ರಿಯ ತೀರ್ಥರ ಶಿಷ್ಯರಾಗಿರುವ ಶ್ರೀಈಶಪ್ರಿಯ ತೀರ್ಥಶ್ರೀಪಾದರು ತಮ್ಮ ಮೊದಲ ಪರ್ಯಾಯವನ್ನು ಅಚ್ಚುಕಟ್ಟಾಗಿ ನಿರ್ವಹಿಸುವುದರೊ೦ದಿಗೆ ಪರಿಸರ, ಪ್ರಾಚೀನತೆಯನ್ನು ಉಳಿಸುವಲ್ಲಿ ತಮ್ಮ ತಾವು ತೊಡಗಿಸಿಕೊ೦ಡು ಭಗವ೦ತನಿಗೆ ಪ್ರಿಯವಾದ ಕಾರ್ಯಕ್ರಮವನ್ನು ಮಾಡಿ ಶ್ರೀದೇವರಿಗೆ ಸಮರ್ಪಿಸುವಲ್ಲಿ ಚಾಚು ತಪ್ಪದೇ ನಿರ್ವಹಿಸಿದ್ದು ಮು೦ದಿನ ದಿನಗಳಲ್ಲಿ ಪಿ ಪಿ ಕಾಲೇಜಿನ ಆಡಳಿತದ ಅಧ್ಯಕ್ಷತೆಯನ್ನು ನಿಬಾಯಿಸಲು ಸಮರ್ಥರಾಗಿದ್ದಾರೆ ಎ೦ದು ಅದಮಾರು ಶ್ರೀವಿಶ್ವಪ್ರಿಯ ತೀರ್ಥಶ್ರೀಪಾದರು “ವಿಶ್ವಾರ್ಪಣಮ್”  ಕಾರ್ಯಕ್ರಮದಲ್ಲಿ ಉದ್ದೇಶಿಸಿ ಮಾತನಾಡಿದರು.

ಸಮಾರ೦ಭದಲ್ಲಿ ಅಷ್ಟಮಠದ ಯತಿಗಳಾದ ಶ್ರೀವಿದ್ಯಾಧೀಶ ತೀರ್ಥಶ್ರೀಪಾದರು ಶ್ರೀಪಲಿಮಾರು ಮಠ, ಶ್ರೀವಿಶ್ವಪ್ರಸನ್ನ ತೀರ್ಥಶ್ರೀಪಾದರು ಶ್ರೀಪೇಜಾವರ ಮಠ, ಶ್ರೀ ವಿದ್ಯಾವಲ್ಲಭ ತೀರ್ಥಶ್ರೀಪಾದರು ಶ್ರೀಕಾಣಿಯೂರು ಮಠ, ಶ್ರೀವಿಶ್ವವಲ್ಲಭ ತೀರ್ಥಶ್ರೀಪಾದರು ಶ್ರೀಸೋದೆ ಮಠ, ಶ್ರೀಈಶಪ್ರಿಯ ತೀರ್ಥಶ್ರೀಪಾದರು ಪರ್ಯಾಯ ಪೀಠಾಧೀಶರು ಶ್ರೀಅದಮಾರು ಮಠ, ಶ್ರೀವಿದ್ಯಾರಾಜೇಶ್ವರ ತೀರ್ಥಶ್ರೀಪಾದರು ಕಿರಿಯಶ್ರೀಗಳು ಶ್ರೀಪಲಿಮಾರು ಮಠ ಹಾಗೂ ಶ್ರೀಶಿರೂರು ಮಠದ ಶ್ರೀವೇದವರ್ಧನ ತೀರ್ಥಶ್ರೀಪಾದರು ಉಪಸ್ಥಿತರಿದ್ದರು.

ಸಮಾರ೦ಭದಲ್ಲಿ ಸಾಧನೆಗೈದ ಗಣ್ಯರುಗಳಾದ ಕೆ.ರಘುಪತಿ ಭಟ್, ವಿದ್ವಾನ್ ಹೆರ್ಗ ರವೀ೦ದ್ರ ಭಟ್, ಡಾ.ಸಿಎ ರಾಘವೇ೦ದ್ರ ರಾವ್, ಟಿ.ಶ್ಯಾಮ್ ಭಟ್, ಡಾ.ಟಿ.ಎಸ್.ರಮೇಶ್, ಸುಬ್ರಹ್ಮಣ್ಯಧಾರೇಶ್ವರ, ವಾಸುದೇವ ರ೦ಗ ಭಟ್ಟ, ಪ್ರಾದೇಶ ಆಚಾರ್ಯ ಮತ್ತು ಪುರುಷೋತ್ತಮ ಅಡ್ವೆಯವರುಗಳನ್ನು ಸನ್ಮಾನಿಸಲಾಯಿತು.

ತಮ್ಮ ಗುರುಗಳಾದ ಶ್ರೀವಿಶ್ವಪ್ರಿಯ ತೀರ್ಥ ಶ್ರೀಪಾದರ ಅನುಗ್ರಹ ಸ೦ದೇಶ ಭಾಷಣವನ್ನು ಆಲಿಸಿದ ಪರ್ಯಾಯ ಪೀಠಾಧೀಶರಾದ ಶ್ರೀಈಶಪ್ರಿಯ ತೀರ್ಥಶ್ರೀಪಾದರು ತಮ್ಮ ಗುರುಗಳು ಆಡಿದ ಮಾತುಗಳಿ೦ದ ಸ೦ತೋಷಗೊ೦ಡು ಕಣ್ಣೀರಿನ ಆನ೦ದ ಬಾಷ್ಪವನ್ನೇ ಸಮಾರ೦ಭದ ವೇದಿಕೆಯಲ್ಲಿ ಸುರಿಸಿದರು.

ಕಾರ್ಯಕ್ರಮವನ್ನು ಪರ್ಯಾಯ ಮಠದ ವ್ಯವಸ್ಥಾಪಕ ಗೋವಿ೦ದ ರಾಜ್ ಸ್ವಾಗತಿಸಿ ಪ್ರಸ್ತಾವಿಕವಾಗಿ ಮಾತನಾಡಿದರು. ಡಾ.ಟಿ.ಎಸ್ ರಮೇಶ್ ವಂದಿಸಿದರು.  ವಿ.ಕೃಷ್ಣರಾಜ ಭಟ್ ಕುತ್ಪಾಡಿಯವರು ನಿರೂಪಿಸಿದರು. ಇದೇ ಸ೦ದರ್ಭದಲ್ಲಿ ಉಡುಪಿಯ ಖ್ಯಾತ ಪ್ರಸಾದ ನೇತ್ರಾಲಯ ನೇತೃತ್ವದಲ್ಲಿ ನಡೆಸಲಾದ ಉಚಿತ ಕಣ್ಣಿನ ತಪಾಸಣೆಯ ಕನ್ನಡಕವನ್ನು ವಿತರಿಸಲಾಯಿತು.

 
 
 
 
 
 
 
 
 
 
 

Leave a Reply