ಕೃಷಿ ಮಾಹಿತಿ ಕಾರ್ಯಕ್ರಮ

ಕೃಷಿಯಲ್ಲಿ ವೈಜ್ಞಾನಿಕ ಪದ್ಧತಿಯನ್ನು ಅನುಸರಿಸಿದರೆ ಹೆಚ್ಚಿನ ಆದಾಯವನ್ನು ಗಳಿಸಬಹುದೆಂದು  ಉಡುಪಿ ಜಿಲ್ಲಾ ಕೃಷಿಕ ಸಂಘದ ಅಧ್ಯಕ್ಷ ರಾಮಕೃಷ್ಣ ಶರ್ಮ ಬಂಟಕಲ್ಲು ಅವರು ತಿಳಿಸಿದರು.

ಅವರು ಉಡುಪಿ ಜಿಲ್ಲಾ ಕೃಷಿಕ ಸಂಘ ಮತ್ತು ಶ್ರೀ ಶಾಸ್ತಾವು ಬ್ರಹ್ಮಲಿಂಗೇಶ್ವರ ಭಜನಾ ಮಂಡಳಿ ಸಹಯೋಗ ದೊಂದಿಗೆ ಶ್ರೀ ಶಾಸ್ತಾವು ಬ್ರಹ್ಮಲಿಂಗೇಶ್ವರ ದೇವಸ್ಥಾನ​,​ಪುನಾರು, ಬೆಳ್ಮಣ್ ಇಲ್ಲಿ ನಡೆದ ಮಲ್ಲಿಗೆ ಹಾಗೂ ಅಡಿಕೆ ಕೃಷಿಯ ಬಗ್ಗೆ ಮಾಹಿತಿ ಕಾರ್ಯಗಾರದಲ್ಲಿ ವೈಜ್ಞಾನಿಕ ಪದ್ಧತಿಯಲ್ಲಿ ಮಲ್ಲಿಗೆ ಕೃಷಿಯ ಬಗ್ಗೆ ಮಾಹಿತಿ ನೀಡಿದರು.

ಅಡಿಕೆ ಕೃಷಿಯ ಬಗ್ಗೆ ಪ್ರಗತಿಪರ ಕೃಷಿಕರು ಶ್ರೀ ಕುದಿ ಶ್ರೀನಿವಾಸ್ ಭಟ್ ಮಾಹಿತಿ ನೀಡಿದರು.  ಸಭಾಧ್ಯಕ್ಷತೆಯನ್ನು ಬೆಳ್ಮಣ್ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷರಾದ ಶ್ರೀ ನಿತ್ಯಾನಂದ ಶೆಟ್ಟಿಯವರು ವಹಿಸಿದ್ದರು. ಸಮಾರಂಭದ ಉದ್ಘಾಟನೆಯನ್ನು ಪುನಾರು ದೇವಸ್ಥಾನದ ಪ್ರಧಾನ ಅರ್ಚಕರಾದ ಶ್ರೀ ಅಶೋಕ್ ಉಡುಪರವರು ನೆರವೇರಿಸಿದರು.
ವೇದಿಕೆಯಲ್ಲಿ ಕಾರ್ಕಳ ಎಪಿಎಂಸಿ​​ ಅಧ್ಯಕ್ಷ​ ​ ಶ್ರೀ ಮೋಹನ್ ಶೆಟ್ಟಿ, ಭಜನಾ ಮಂಡಳಿ ಅಧ್ಯಕ್ಷರಾದ ಶ್ರೀ ದಿನೇಶ್ ಶೆಟ್ಟಿ ಉಪಸ್ಥಿತರಿದ್ದರು. ರಘುನಾಥ್ ನಾಯಕ್ ಪುನಾರು ರ್ಕಾರ್ಯಕ್ರಮ ನಿರೂಪಿಸಿದರು.​​
 
 
 
 
 
 
 
 
 
 
 

Leave a Reply