ಕೋಟಿ ಚೆನ್ನಯ್ಯ ಥೀಂ ಪಾರ್ಕ್ನಲ್ಲಿ ಮಾಸಿಕ ಕಾರ್ಯಕ್ರಮ ಉದ್ಘಾಟನೆ

ಉಡುಪಿ, ನವೆಂಬರ್ 19 (ಕವಾ): ಕಾರ್ಕಳ ತಾಲೂಕಿನ ಕೋಟಿ ಚೆನ್ನಯ ಥೀಂ ಪಾರ್ಕ್ ಅಭಿವೃದ್ಧಿ ಸಮಿತಿ ರಚನೆಯ ನಂತರ ಪ್ರತಿ ತಿಂಗಳು ಸಾಂಸ್ಕೃತಿಕ ಕಾರ್ಯಕ್ರಮ ಏರ್ಪಡಿಸುವಂತೆ ಇಂಧನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರು ಸೂಚಿಸಿದ ಹಿನ್ನೆಲೆ, ನವೆಂಬರ್ 26 ರಂದು ಸಂಜೆ 5.30 ಕ್ಕೆ ಕೋಟಿ ಚೆನ್ನಯ್ಯ ಥೀಂ ಪಾರ್ಕ್ನಲ್ಲಿ ಕಾರ್ಯ ಕ್ರಮದ ಉದ್ಘಾಟನೆ ಹಾಗೂ ಪ್ರಸಿದ್ಧ ಕಲಾವಿದರಿಂದ ರಾಮ ನಿರ್ಯಾಣ ಎಂಬ ಯಕ್ಷಗಾನ ತಾಳಮದ್ದಲೆ ಕಾರ್ಯಕ್ರಮ ನಡೆಯಲಿದೆ.

ಸಮಿತಿಯ ಹಿರಿಯ ಸದಸ್ಯ ಭಾಸ್ಕರ್ ಎಸ್.ಕೋಟ್ಯಾನ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ, ಯಕ್ಷ ರಂಗಾಯಣದ ನಿರ್ದೇಶಕ ಜೀವನ್ ರಾಂ ಸುಳ್ಯ, ಪುರಸಭಾ ಅಧ್ಯಕ್ಷೆ ಸುಮಾ ಕೇಶವ್, ಮುಖ್ಯಾಧಿ ಕಾರಿ ರೂಪಾ ಶೆಟ್ಟಿ, ನಿರ್ಮಿತಿ ಕೇಂದ್ರದ ಪವನ್, ಭರತ್ ಅಂಚನ್, ರೇವತಿ, ಅರಣ್ಯ ರಕ್ಷಕರಾದ ಪ್ರಕಾಶ್, ಸತೀಶ್ ಬೋಳ, ವಿಶ್ವನಾಥ ಶೆಟ್ಟಿ ಸಾಣೂರು, ಹರೀಶ್ ಅಮೀನ್, ಕರುಣಾಕರ್ ಎಸ್.ಕೋಟ್ಯಾನ್ ಸಾಣೂರು, ಪದ್ಮ ಪ್ರಸಾದ್ ಜೈನ್, ರೋಹಿತ್ ಶೆಟ್ಟಿ, ಶಿವಾನಂದ್ ಉಪಸ್ಥಿತರಿದ್ದರು.

Leave a Reply