ಕೋಟ ಹೋಬಳಿ ಮಟ್ಟದ ಪರಿಸರ ಜಾಗೃತಿಯ ಪ್ರಬಂಧ ಸ್ಪರ್ಧೆಯ ಬಹುಮಾನ ವಿತರಣೆ

ಕೋಟ: ಪಂಚವರ್ಣ ಯುವಕ ಮಂಡಲ ಹಾಗೂ ಪಂಚವರ್ಣ ಮಹಿಳಾ ಮಂಡಲದ ಇದರ ನೇತ್ರತ್ವದಲ್ಲಿ ರಜತ ಮಹೋತ್ಸವದ ಅಂಗವಾಗಿ ಕೋಟ ಹೋಬಳಿ ಮಟ್ಟದ ಪರಿಸರ ಜಾಗೃತಿಯ ಪ್ರಬಂಧ ಸ್ಪರ್ಧೆ ಇತ್ತೀಚಿಗೆ ಆಯೋಜಿಸಿದ್ದು ಈ ಸ್ಪರ್ಧೆಯಲ್ಲಿ ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿಭಾಗ ಮಟ್ಟದಲ್ಲಿ ಇತ್ತೀಚಿಗೆ ಕೋಟ ವಿವೇಕ ವಿದ್ಯಾಸಂಸ್ಥೆಯಲ್ಲಿ ಆಯೋಜಿಸಿದ್ದು ಅದರಂತೆ ಪ್ರಬಂಧ ಸ್ಪರ್ಧೆಯಲ್ಲಿ ಒಟ್ಟು 29 ಶಾಲೆಗಳ 100ಕ್ಕೂ ಅಧಿಕ ವಿದ್ಯಾರ್ಥಿಗಳು ಭಾಗವಹಿಸಿದ್ದು ಅದರಲ್ಲಿ ಪ್ರಥಮ ಬಹುಮಾನ ಪ್ರಾಥಮಿಕ ವಿಭಾಗದಲ್ಲಿ ಕೋಟತಟ್ಟು ಪಡುಕರೆ ಮೈತ್ರಿ, ದ್ವಿತೀಯ ಶಾಂಭವೀ ಶಾಲೆ ಗಿಳಿಯಾರು ಪ್ರಥಮ್ ಕೆ,ತೃತೀಯ ಬಹುಮಾನ ಚಿತ್ರಪಾಡಿ ಶಾಲೆಯ ಅಮೃತಾ,ಫ್ರೌಢಶಾಲಾ ವಿಭಾಗದಲ್ಲಿ ವಿವೇಕ ಬಾಲಕೀಯರ ವಿಭಾಗದ ಕೇಶವ ಉಪಾಧ್ಯ,ದ್ವಿತೀಯ ಬಹುಮಾನ ಸಂಯುಕ್ತ ಫ್ರೌಢಶಾಲೆ ಮಣೂರು ಪಡುಕರೆ ಇದರ ಪ್ರಗತಿ,ತೃತೀಯ ಗುಂಡ್ಮಿ ಪ್ರೌಢಶಾಲೆಯ ಸ್ನೇಹ ಬಹುಮಾನಗಳಿಗೆ ಆಯ್ಕೆಯಾಗಿ ಪ್ರಮಾಣಪತ್ರ ಹಾಗೂ ನಗದು ಬಹುಮಾನವನ್ನು ಸದ್ಭಾವನಾ ಕಾಯ್ಕçಮದಲ್ಲಿ ನೀಡಲಾಯಿತು.

ಇದರ ಭಾಗವಾಗಿ ಭಾಗವಹಿಸಿದ ಶಾಲೆಗಳ ವಿದ್ಯಾರ್ಥಿಗಳಿಗೆ ಅಭಿನಂದನಾ ಪತ್ರವನ್ನು ಶಾಲಾ ಮುಖ್ಯ ಶಿಕ್ಷಕರಿಗೆ ಶನಿವಾರ ಹಸ್ತಾಂತರಿಸಲಾಯಿತು. ಈ ಸಂದರ್ಭದಲ್ಲಿ ಸಂಸ್ಥೆಯ ಪದಾಧಿಕಾರಿಗಳು ಮತ್ತಿತರರು ಉಪಸ್ಥಿತರಿದ್ದರು.

 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 

Leave a Reply