ಬೂದು ನೀರು ನಿರ್ವಹಣೆ ಮಾಹಿತಿ ಕಾರ್ಯಗಾರ

ಕೋಟ: ಉಡುಪಿ ಜಿಲ್ಲಾ ಪಂಚಾಯತ್ ಮತ್ತು ತಾಲೂಕು ಪಂಚಾಯತ್ ಬ್ರಹ್ಮಾವರ ಹಾಗೂ ಕೋಡಿ ಗ್ರಾಮ ಪಂಚಾಯತ್ ಸಂಯುಕ್ತ ಆಶ್ರಯದಲ್ಲಿ ಬೂದು ನೀರು ನಿರ್ವಹಣೆ ಮಾಹಿತಿ ಕರ‍್ಯಗಾರ ಇತ್ತೀಚಿಗೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಕೋಡಿ ಕನ್ಯಾಣದ ಸಭಾಂಗಣದಲ್ಲಿ ಜರುಗಿತು.

ಜಿಲ್ಲಾ ಪಂಚಾಯತ್ ನೋಡೆಲ್ ಅಧಿಕಾರಿ ಸುಧೀರ್ ತ್ಯಾಜ್ಯ ನಿರ್ವಹಣೆಯ ಬಗ್ಗೆ ಹಾಗೂ ಅದರಿಂದಾಗುವ ಪ್ರಯೋಜನಗಳ ಕುರಿತು ಸಭೆಯಲ್ಲಿ ತಿಳಿಸಿದರು.
ಜಿಲ್ಲಾ ಪಂಚಾಯತ್ ಜಿಲ್ಲಾ ಸಮಲೋಚಕ ಪ್ರದೀಪ್ ಗಿಡಗಳನ್ನು ನೆಡುವುದರ ಮೂಲಕ ಹೇಗೆ ಬೂದು ನೀರು ನಿರ್ವಹಣೆ ಮಾಡಬಹುದು ಎನ್ನುವುದನ್ನು ತಿಳಿಸಿ ಕೊಟ್ಟರು, ಹಾಗೂ ಕಪ್ಪು ನೀರು ನಿರ್ವಹಣೆಯ ಬಗ್ಗೆಯೂ ತಿಳಿಸಿದರು. ಜಿಲ್ಲಾ ಪಂಚಾಯತ್ ಎನ್.ಆರ್.ಡಿ.ಎಂ.ಎಸ್ ನೋಡೆಲ್ ಅಧಿಕಾರಿ ವಿಕ್ರಂ ಜಿ.ಪಿ.ಎಸ್ ಮಾಡುವುದರಿಂದಾಗುವ ಪ್ರಯೋಜನಗಳ ಕುರಿತು ಸಭೆಯಲ್ಲಿ ತಿಳಿಸಿದರು.

ಗ್ರಾಮ ಪಂಚಾಯತ್ ಅಧ್ಯಕ್ಷ ಪ್ರಭಾಕರ ಮೆಂಡನ್ ಅಧ್ಯಕ್ಷತೆ ವಹಿಸಿದ್ದರು. ಸಭೆಯಲ್ಲಿ ಜೆ ಜೆ ಎಮ್ ಸಮಲೋಚಕರಾದ ರಂಜೀತ್, , ಸಂತೋಷ್ ಮತ್ತು ಜೆ ಜೆ ಎಮ್ ಸಿಬ್ಬಂದಿ ಮಹೇಂದ್ರ ,ಕೋಡಿ ಕನ್ಯಾಣ, ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲೆ ವಿಜಯಲಕ್ಷಿö್ಮÃ ಶಿವರಾಮ. ಸೋಮ ಬಂಗೇರ ಸ್ಮಾರಕ ಸರಕಾರಿ ಪ್ರೌಢಶಾಲೆಯ ಹಿರಿಯ ಸಹಶಿಕ್ಷಕಿ ರಾಧಿಕಾ, ಕೋಡಿ ತಲೆ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಮುಖ್ಯ ಶಿಕ್ಷಕ ಶಂಕರ ಎಮ್, ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಕೋಡಿ ಕನ್ಯಾಣ ಮುಖ್ಯ ಶಿಕ್ಷಕಿ ಸಂಪಾ, ಎನ್,ಆರ್,ಎಲ್,ಎಂ ಸಂಘಟನೆಯ ಅಧ್ಯಕ್ಷೆ ರೇವತಿ, ಗ್ರಾಮ ಪಂಚಾಯತ್ ಸದಸ್ಯರಾದ ಕೃಷ್ಣ ಪೂಜಾರಿ ಪಿ, ಗೀತಾ ಖಾರ್ವಿ, ಅಂತೋನಿ ಡಿಸೋಜಾ, ಸತೀಶ್ ಜಿ ಕುಂದರ್ , ಪ್ರಗತಿ ಯುವಕ ಮಂಡಲ ಕೋಡಿ ಕನ್ಯಾಣ ಅಧ್ಯಕ್ಷ ಜಗನ್ನಾಥ ಅಮೀನ್, ಎಸ್‌ಎಲ್‌ಆರ್‌ಎಮ್ ಕಾರ್ಯಕರ್ತೆಯರು, ಆಶಾಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು, ಹಾಗೂ ಪಂಚಾಯತ್ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು. ಸಭೆಯಲ್ಲಿ ಪಂಚಾಯತ್ ಅಭಿವೃದ್ಧಿ ಅಧಿಕಾರಿ ರವೀಂದ್ರ ರಾವ್ ಸ್ವಾಗತಿಸಿ, ಕರ‍್ಯಕ್ರಮವನ್ನು ನಿರೂಪಿಸಿದರು.

 
 
 
 
 
 
 
 
 
 
 

Leave a Reply