ರಾಜಕೀಯ ಹಾಗೂ ಸಾಮಾಜಿಕ ಕ್ಷೇತ್ರದ ಮಾಣಿಕ್ಯ ಕೊಡ್ಗಿ – ಶಿವರಾಮ ಉಡುಪ

ಕೋಟ: ಕೊಡ್ಗಿ ಎನ್ನುವುದು ರಾಜಕೀಯ ಹಾಗೂ ಸಾಮಾಜಿಕ ಕ್ಷೇತ್ರದ ಮಾಣಿಕ್ಯ ಎಂದರೆ ತಪ್ಪಾಗಲಿಕ್ಕಿಲ್ಲ ಅಂತಹ ವ್ಯಕ್ತಿ ವ್ಯಕ್ತಿಯಲ್ಲ ಅವರೊಂದು ಶಕ್ತಿಯಾಗಿ ಈ ಕರಾವಳಿಯಲ್ಲಿ ಕಂಗೊಳಿಸಿದ್ದಾರೆ ಎಂದು ಬಿಜೆಪಿಯ ಹಿರಿಯ ಮುಖಂಡ ಶಿವರಾಮ ಉಡುಪ ಹೇಳಿದ್ದಾರೆ
ಸಾಲಿಗ್ರಾಮದ ಪಾರಂಪಳ್ಳಿ ಶ್ರೀ ವಿಷ್ಣುಮೂರ್ತಿ ಸಭಾಂಗಣದಲ್ಲಿ ಬಿಜೆಪಿ ಮಹಾಶಕ್ತಿ ಕೇಂದ್ರ ಸಾಲಿಗ್ರಾಮದ ಆಶ್ರಯದಲ್ಲಿ ಕೊಡ್ಗಿಯವರಿಗೆ ಶ್ರದ್ಧಾಂಜಲಿ ನುಡಿನಮನ ಸಭೆಯಲ್ಲಿ ಭಾವಚಿತ್ರಕ್ಕೆ ಪುಷ್ಭಾರ್ಚನೆ ಸಲ್ಲಿಸಿ ಮಾತನಾಡಿ ಈ ಕರಾವಳಿ ಭಾಗದಲ್ಲಿ ಬಿಜೆಪಿ ಕಟ್ಟಿ ಬೆಳೆಸುವಲ್ಲಿ ಬಹುಪಾಲು ಕೊಡ್ಗಿಯವರದ್ದಾಗಿತ್ತು ,ಅವರ ಮನೆತನವು ಕೂಡಾ ಸ್ವಾತಂತ್ರ್ಯ ಹೋರಾಟಗಾರರ ಮನೆತನವಾಗಿದ್ದು ಅಮಾವಾಸ್ಯೆಬೈಲು ಎಂಬ ಕುಗ್ಗ್ರಾಮವನ್ನು ಪ್ರಸಿದ್ಧಿ ಪಡಿಸುವ ಜೊತೆಯಲ್ಲಿ ಸಾಕಷ್ಟು ಅಭಿವೃದ್ಧಿ ಶ್ರಮಿಸಿದ್ದಾರೆ.ಬಿಜೆಪಿ ಸಾಕಷ್ಟು ಕಾರ್ಯಕರ್ತರಿಗೆ ,ಮುಖಂಡರುಗಳಿಗೆ ಸ್ಪೂರ್ತಿ ತುಂಬುವ ಚಿಲುಮೆದಾರರಾಗಿ ಪ್ರತಿಯೊರ್ವ ಕಾರ್ಯಕರ್ತರ ಮನೆಮನದಲ್ಲಿ ನೆಲೆಯೂರಿದ ಮೇರು ವ್ಯಕ್ತಿತ್ವದ ಕೊಂಡಿಯಾಗಿದ್ದರು ಎಂದರು.

ಸಾಲಿಗ್ರಾಮ ಪಟ್ಟಣಪಂಚಾಯತ್ ಅಧ್ಯಕ್ಷೆ ಸುಲತಾ ಹೆಗ್ಡೆ,ಸಾಲಿಗ್ರಾಮದ ಪರಿಸರದ ಗಣ್ಯರಾದ ಮಂಜುನಾಥ ಉಪಾಧ್ಯ,ರಾಮಕೃಷ್ಣ ಐತಾಳ್,ಚಂದ್ರಶೇಖರ ಕಾರಂತ್ ,ಬಿಜೆಪಿ ಕುಂದಾಪುರ ಮಂಡಲ ಅಧ್ಯಕ್ಷ ಶಂಕರ್ ಅಂಕದಕಟ್ಟೆ ನುಡಿನಮನ ಸಲ್ಲಿಸಿದರು.
ಈ ಸಂದರ್ಭದಲ್ಲಿ ಬಿಜೆಪಿ ಕುಂದಾಪುರ ಮಂಡಲ ಪ್ರಧಾನಕಾರ್ಯದರ್ಶಿ ಸುರೇಶ್ ಶೆಟ್ಟಿ, ಪಟ್ಟಣಪಂಚಾಯತ್ ಸದಸ್ಯರಾದ ರಾಜು ಪೂಜಾರಿ,ಸಂಜೀವ ದೇವಾಡಿಗ,ಸ್ಥಳೀಯರಾದ ಪಿ ನರಸಿಂಹ ಐತಾಳ್,ಶ್ರೀನಿವಾಸ ಉಪಾಧ್ಯ,ಕಾಶಿಶ್ವರ ಮಯ್ಯ,ನಾರಾಯಣ ಹೇರ್ಳೇ,ಸತೀಶ್ ಉಪಾಧ್ಯ ,ಗಣೇಶ್ ಅಡಿಗ,ಬಿಜೆಪಿ ಮಹಾಶಕ್ತಿಕೇಂದ್ರ ಸಾಲಿಗ್ರಾಮದ ಅಧ್ಯಕ್ಷ ಜಯೇಂದ್ರ ಪೂಜಾರಿ, ಕಾರ್ಯದರ್ಶಿ ದೇವೇಂದ್ರ ದೇವಾಡಿಗ,ಪಟ್ಟಣಪಂಚಾಯತ್ ಮಾಜಿ ಅಧ್ಯಕ್ಷೆ,ಪಿ ಸಾಧು ,ಪಕ್ಷದ ಮುಖಂಡರುಗಳು ಮತ್ತಿತರರು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಬಿಜೆಪಿ ಕುಂದಾಪುರ ಮಂಡಲ ಪ್ರಧಾನಕಾರ್ಯದರ್ಶಿ ಸತೀಶ್ ಪೂಜಾರಿ ವಕ್ವಾಡಿ ಸ್ವಾಗತಿಸಿ ನಿರೂಪಿಸಿದರು.

 
 
 
 
 
 
 
 
 
 
 

Leave a Reply