ಕೋಟತಟ್ಟು – ಸಿಂಧೂರ ಸಂಜೀವಿನಿ ಒಕ್ಕೂಟದ ವಾರ್ಷಿಕ ಸಭೆ

ಕೋಟ: ಕೋಟತಟ್ಟು ಗ್ರಾಮಪಂಚಾಯತ್ ನ ಸಿಂಧೂರ ಸಂಜೀವಿನಿ ಒಕ್ಕೂಟದ ಇದರ ವಾರ್ಷಿಕ ಸಭೆ ಇತ್ತೀಚಿಗೆ ಪಂಚಾಯತ್ ಸಭಾಂಗಣದಲ್ಲಿ ನಡೆಯಿತು.
ಸಿಂಧೂರ ಸಂಜೀವಿನಿ ಒಕ್ಕೂಟದ ಅಧ್ಯಕ್ಷೆ ಮಾಲತಿ ರವಿ ಅಧ್ಯಕ್ಷತೆ ವಹಿಸಿದ್ದರು.
ಬ್ರಹ್ಮಾರ ತಾಲೂಕು ಪಂಚಾಯತ್ ಸಂಪನ್ಮೂಲ ವ್ಯಕ್ತಿ ಅನಿತಾ ಭಾಗವಹಿಸಿ ಮಹಿಳೆಯರು ಪ್ರಸ್ತುತ ಕಾಲಘಟ್ಟದಲ್ಲಿ ಸ್ವಾವಲಂಬಿ ಬದುಕಿಗೆ ಮುನ್ನುಡಿ ಬರೆಯಬೇಕಾದರೆ ಮನೆಯಲ್ಲೆ ಇದ್ದು ಸ್ವುದ್ಯೋಗ ಸೃಷ್ಠಿಸಿಕೊಳ್ಳಬೇಕು ಆ ಮೂಲಕ ಪುರುಷ ಪ್ರದಾನ ಸಮಾಜದಲ್ಲಿ ಸರಿಸಮಾನರಾಗಿ ನಿಲ್ಲಲು ಸಾಧ್ಯವಿದೆ.
ಸಂಜೀವಿನಿ ಒಕ್ಕೂಟಗಳ ಮೂಲಕ ಮಹಿಳೆ ಮುಂಚೂಣಿಗೆ ಬರಬೇಕು ಎಂದು ಕರೆ ಇತ್ತರು.
ಈ ಸಂದರ್ಭದಲ್ಲಿ ನೂನತವಾಗಿ ಬ್ರಹ್ಮಾವರ ಸಂಜೀವಿನಿ ಸಂಘಗಳ ಆರ್ಥಿಕ ಸಾಕ್ಷರತಾ ಸಂಪನ್ಮೂಲ ವ್ಯಕ್ತಿ ನೇಮಕಗೊಂಡಿರುವ ವಸಂತಿ ಉಮೇಶ್ ಪೂಜಾರಿ ಇವರನ್ನು ಗುರುತಿಸಿ ಗೌರವಿಸಲಾಯಿತು.

ಸಿಂಧೂರ ಸಂಜೀವಿನಿ ಒಕ್ಕೂಟದ ಕಾರ್ಯದರ್ಶಿ ಸುಜಾತ ಉದಯ್ ತಿಂಗಳಾಯ, ಕೋಶಾಧಿಕಾರಿ ವಿನೂತ, ಪಂಚಾಯತ್ ನ ಕಾರ್ಯದರ್ಶಿ ಶೇಖರ್ ಮರವಂತೆ ಉಪಸ್ಥಿತರಿದ್ದರು. ಸಂಜೀವಿನಿ ಒಕ್ಕೂಟಗಳ ಎಂ.ಬಿ.ಕೆ ವಾಣಿಶ್ರೀ ನಿರೂಪಿಸಿದರು.ಎಲ್ ಸಿ ಆರ್ ಪಿ ಪ್ರತಿನಿಧಿಗಳಾದ ಶ್ಯಾಮಲ ಸಿ ಪುತ್ರನ್ ಸ್ವಾಗತಿಸಿದರು. ವಸಂತಿ ವಂದಿಸಿದರು.

 
 
 
 
 
 
 
 
 
 
 

Leave a Reply