ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾ.ಯೋ.ಪಾಮಡೇಶ್ವರ ವಲದಿಂದ ವಿಶ್ವಪರಿಸರದಿನ ಆಯೋಜನೆ

ಕೋಟ: ಹಸಿರು ಕ್ರಾಂತಿ ಪಸರಿಸುವ ಮೂಲಕ ಮುಂದಿನ ತಲೆಮಾರಿಗೆ ನಾವುಗಳು ಬಹುದೊಡ್ಡ ಕೊಡುಗೆ ನೀಡಲು ಸಾಧ್ಯ ಎಂದು ಪತ್ರಕರ್ತ ರವೀಂದ್ರ ಕೋಟ ಹೇಳಿದ್ದಾರೆ
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಪಾಂಡೇಶ್ವರ ವಲಯದ ವತಿಯಿಂದ ವಿಶ್ವಪರಿಸರ ದಿನದ ಅಂಗವಾಗಿ ಪಾಂಡೇಶ್ವರ ಶ್ರೀ ಬ್ರಹ್ಮಲಿಂಗೇಶ್ವರ ದೇವಳದ ವಠಾರದಲ್ಲಿ ಹಮ್ಮಿಕೊಂಡ ಗಿಡ ನೆಡುವ ಕಾರ್ಯಕ್ರಮದಲ್ಲಿ ಮಾತನಾಡಿ ಪರಿಸರ ಸಂರಕ್ಷಣೆ ನಮ್ಮೆಲ್ಲ ಆದ್ಯ ಕರ್ತವ್ಯ ,ಪ್ರಸ್ತುತ ವಿದ್ಯಾಮಾನಗಳನ್ನು ಅವಲೋಕಿಸಿದರೆ ಆಗಾಗ ಸಂಭವಿಸುವ ಪ್ರಾಕೃತಿಕ ವಿಕೋಪಗಳಿಗೆ ನಾವುಗಳೇ ಕಾರಣಿಭೂತರಾಗಿದ್ದೇವೆ ಇದಕ್ಕೆ ಪರಿಹಾರ ಕಂಡುಕೊಳ್ಳಬೇಕಾದರೆ ಪರಿಸರ ಸ್ನೇಹಿ ವಾತಾವರಣ ಸೃಷ್ಠಿಸಬೇಕು ನಮ್ಮೂರ ಪರಿಸವನ್ನು ಹಸಿರಾಗಿಸುವ ಜೊತೆಗೆ ತ್ಯಾಜ್ಯ ಮುಕ್ತ ಊರಾಗಿಸಲು ಶ್ರಮಿಸಿ ಎಂದರಲ್ಲದೆ ಮನೆ ಮನೆಯಲ್ಲಿ ಒಂದೊAದು ಗಿಡ ನಡುವ ಸಂಕಲ್ಪ ಮಾಡಬೇಕು ತಮ್ಮೂಲಕ ಕಾವಂದರರು ತಮ್ಮ ಸಂಸ್ಥೆಯ ಮೂಲಕ ಹಮ್ಮಿಕೊಂಡ ಕಾರ್ಯಕ್ಕೆ ಯಶಸ್ಸು ದೊರೆತಂತಾಗುತ್ತದೆ ಎಂದು ಸದಾಶಯ ವ್ಯಕ್ತಪಡಿಸಿದರು.


ಈ ಸಂದರ್ಭದಲ್ಲಿ ಪಾಂಡೇಶ್ವರ ರಕ್ತೇಶ್ವರಿ ದೇವಳದ ಧರ್ಮದರ್ಶಿ ಕೆ.ವಿ ರಮೇಶ್ ರಾವ್ ಪಾಂಡೇಶ್ವರ ವಲಯದ ಮೇಲ್ವಿಚಾರಕ ಗಣೇಶ್ ,ಸಾಸ್ತಾನ ಒಕ್ಕೂಟದ ಅಧ್ಯಕ್ಷೆ ಗಂಗಾವತಿ ಪಿ ರಾವ್ ,ಯಡಬೆಟ್ಟು ಕಾರ್ಯಕ್ಷೇತ್ರದ ಜ್ಯೋತಿ,ಸಾಸ್ತಾನದ ಸೇವಾ ಪ್ರತಿನಿಧಿ ಶೋಭಾ,ಒಕ್ಕೂಟದ ಪದಾಧಿಕಾರಿಗಳು ಮತ್ತಿತರರು ಉಪಸ್ಥಿತರಿದ್ದರು.

 
 
 
 
 
 
 
 
 
 
 

Leave a Reply