ಕೋಟ- ವಿಶ್ವ ಪರಿಸರ ದಿನಾಚರಣೆ

ಕೋಟ: ಕೋಟ ಗ್ರಾಮಪಂಚಾಯತ್ ಇದರ ಆಶ್ರಯದಲ್ಲಿ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಕಾಸನಗುಂದು ಅಂಗನವಾಡಿಯಲ್ಲಿ ಗಿಡವಿತರಣೆ ಹಾಗೂ ನಡುವ ಕಾರ್ಯಕ್ರಮ ಜರಗಿತು.

ಕಾರ್ಯಕ್ರಮದಲ್ಲಿ ಕೋಟ ಅಮೃತೇಶ್ವರಿ ದೇವಳದ ಆಡಳಿತ ಮಂಡಳಿಯ ಅಧ್ಯಕ್ಷ ಆನಂದ್ ಸಿ ಕುಂದರ್ ಗಿಡ ವಿತರಿಸಿ ಮಾತನಾಡಿ ಪ್ರಸ್ತುತ ವಾತಾವರಣದ ಅವ್ಯವಸ್ಞೆಗೆ ನಾವುಗಳೇ ಕಾರಣವಾಗಿದ್ದೇವೆ ಅತಿಯಾದ ಉಷ್ಣಮಾರುತ ಭೂಮಿಯ ಮೇಲೆ ಆವರಿಸಿಕೊಂಡಿದೆ .ನಮ್ಮ ಹಿರಿಯರು ಸಾಕಿ ಸಲಹಿದ ಮರಗಿಡಗಳನ್ನು ಕಡಿದು ಪ್ರಾಕೃತಿಕ ವಿಕೋಪಗಳಿಗೆ ಕಾರಣರಾಗಿದ್ದೇವೆ.ಅದಕ್ಕೆ ಇಂದೇ ನಮ ಪರಿಸರವನ್ನು ಹಸಿರಾಗಿಸುವ ಕೆಲಸ ನಾವುಗಳು ಮಾಡೋಣ ಅದೇ ಮುಂದಿನ ತಲೆಮಾರಿಗೆ ಬಹುದೊಡ್ಡ ಕೊಡುಗೆ ನೀಡಿದಂತ್ತಾಗುತ್ತದೆ ಎಂದು ಅಭಿಪ್ರಾಯಪಟ್ಟರು.

ಕಾರ್ಯಕ್ರಮದಲ್ಲಿ ಪಂಚಾಯತ್ ಅಧ್ಯಕ್ಷ ಅಜಿತ್ ದೇವಾಡಿಗ,ಉಪಾಧ್ಯಕ್ಷೆ ಜಯಂತಿ ಪೂಜಾರಿ,ಸದಸ್ಯರಾದ ಸಂತೋಷ್ ಪ್ರಭು,ಚಂದ್ರ ಪೂಜಾರಿ,ಸುಚಿತ್ರಾ ಶೆಟ್ಟಿ,ಜಯರಾಮ ಶೆಟ್ಟಿ,ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸುರೇಶ್ ಬಂಗೇರ,ಸoಜೀವಿನಿ ಒಕ್ಕೂಟದ ಪ್ರೇಮ ಆಚಾರ್ಯ, ಲಿಲಿತಾ ಪೂಜಾರಿ ,ಅಂಗನವಾಗಿ ಕಾರ್ಯಕರ್ತೆಯರು ಮತ್ತಿತರರು ಉಪಸ್ಥಿತರಿದ್ದರು.

 
 
 
 
 
 
 
 
 
 
 

Leave a Reply