ಗ್ರಾಮ ವಾಸ್ತವ್ಯಕ್ಕೆ ಉತ್ತಮ ಸ್ಪಂದನೆ

ಕೋಟ: ರಾಜ್ಯ ಸರಕಾರದ ನಿರ್ದೇಶದಂತೆ ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಅಂಗವಾಗಿ ಬ್ರಹ್ಮಾವರ ತಹಶಿಲ್ದಾರ್ ರಾಜಶೇಖರಮೂರ್ತಿ ಶುಕ್ರವಾರ ಕೋಟ ಗ್ರಾಮಪಂಚಾಯತ್‌ನಲ್ಲಿ ವಾಸ್ತವ್ಯ ಹೂಡಿ ಮಣೂರು ಹಾಗೂ ಗಿಳಿಯಾರು ಗ್ರಾಮದ ಜನಸಾಮಾನ್ಯರ ಅಹವಾಲು ಸ್ವೀಕರಿಸಿದರು.

ಈ ಸಂದರ್ಭದಲ್ಲಿ ಮಾತನಾಡಿ ಸರಕಾರದ ಯೋಜನೆಗಳನ್ನು ಜನಸಾಮಾನ್ಯರಿಗೆ ತಲುಪಿಸುವ ಹೊಣೆಗಾರಿಕೆ ಹಾಗೂ ಸಮರ್ಥವಾಗಿ ಅನುಷ್ಠಾನಗೊಳಿಸಲು ಅಧಿಕಾರಿಗಳ ಮಟ್ಟದಲ್ಲಿ ನಡೆಯಬೇಕಾಗಿದೆ ಈ ನಿಟ್ಟಿನಲ್ಲಿ ಕೋಟ ಗ್ರಾಮಪಂಚಾಯತ್ ಈ ವಾಸ್ತವ್ಯಭರಿತ ಕಾರ್ಯಕ್ರಮದಲ್ಲಿ ಸ್ಥಳದಲ್ಲೆ ಪರಿಹರಿಸಬೇಕಾದ ಸಮಸ್ಯೆಗಳನ್ನು ಅಲ್ಲೆ ಪರಿಹರಿಸಿ ಇನ್ನುಳಿದ ಮನವಿಗೆ ಜಿಲ್ಲಾಡಳಿತದ ಮೂಲಕ ಸರಕಾರಕ್ಕೆ ವರದಿ ಸಿದ್ಧಪಡಿಸುವುದಾಗಿ ತಿಳಿಸಿದರು.
ಅದರಂತೆ ಕೋಟ ಗ್ರಾಮಪಂಚಾಯತ್ ಎರಡು ಗ್ರಾಮಗಳ ಜನಸಾಮಾನ್ಯರು ತಮ್ಮ ಸಮಸ್ಯೆಗಳಾದ ರೇಷನ್ ಕಾಡ್೯,ಜಾತಿ ಮತ್ತು ಆದಾಯ,ಇನ್ನಿತರ ಸಮಸ್ಯೆಗಳನ್ನು ತಹಶಿಲ್ದಾರ್ ಬಳಿ ಮನವಿ ಪತ್ರದ ಮೂಲಕ ನೀಡಿ ಪರಿಹರಿಸಲು ವಿನಂತಿಸಿದರು.
ಕೋಟ ಸಹಕಾರಿ ವ್ಯವಸಾಯಕ ಸಂಘದ ಅಧ್ಯಕ್ಷ ಜಿ. ತಿಮ್ಮ ಪೂಜಾರಿ ಮಾತಮಾಡಿ ಸಾಮಾನ್ಯವಾಗಿ ಅಧಿಕ ಆದಾಯದ ಹಿನ್ನಲೆಯನ್ನು ಮನದಲ್ಲಿ ಇಟ್ಟುಕೊಂಡು ಒಬಿಸಿ ಕೆಟಗೆರಿಯವರಿಗೆ ಜಾತಿ ಪ್ರಮಾಣ ಪತ್ರ ನೀಡಲು ನಿರಾಕರಿಸುವ ವಿಚಾರವನ್ನು ಪ್ರಸ್ತಾಪಿಸಿದರು, ಇದರಿಂದ ಶಾಲಾ ವಿದ್ಯಾರ್ಥಿಗಳಿಗೆ ಬಾರಿ ಸಮಸ್ಯೆ ಉಂಟು ಮಾಡುತ್ತಿದೆ ಈ ಬಗ್ಗೆ ಶೀಘ್ರ ಬಗೆಹರಿಸಲು ಕೇಳಿಕೊಂಡರು.
ಮೂಡುಗಿಳಿಯಾರು ಭಾಗದಲ್ಲಿ ಕೆಲವು ಭಾಗಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಸೃಷ್ಠಿಯಾಗುತ್ತಿದೆ ಕೇಂದ್ರದ ಜಲಜೀವನ್ ಮಿಷನ್ ಯೋಜನೆ ಹೆಸರನ್ನು ವೈಭವಿಕರಿಸಲಾಗಿತ್ತಿದೆ ಇದರ ಅನುಷ್ಠಾನ ವಿಳಂಬ ಹಾಗೂ ಕೆಲವು ಭಾಗಗಳನ್ನು ತಲುಪಿಲ್ಲ ಈ ಬಗ್ಗೆ ನಿವೃತ್ತ ಶಿಕ್ಷಕ ಸೋಮಶೇಖರ ಶೆಟ್ಟಿ ಗಮನ ಸೆಳೆದರು.
ಕೋಟತಟ್ಟು ಗ್ರಾಮಪಂಚಾಯತ್ ವ್ಯಾಪ್ತಿಯ ಸರಕಾರಿ ಸ್ಥಳದಲ್ಲಿ ಖಾಸಗಿ ಕ್ವಾಟ್ರಸ್ ಕಟ್ಟಿಕೊಂಡು ವಾಸ್ತವ್ಯ ಹೂಡಿದ್ದಾರೆ ಸರಕಾರಿ ಸ್ಥಳಗಳ ಬಗ್ಗೆ ಅಧಿಕಾರಿಗಳ ನಿರ್ಲಕ್ಷದ ಬಗ್ಗೆ ಆಕ್ರೋಶ ಹೊರಹಾಕಿದ ಆರತಿ ಗಿಳಿಯಾರು ಮೂಡುಗಿಳಿಯಾರು ಭಾಗದಲ್ಲಿ೪.೮೨ಎಕ್ಕರೆ ಸರಕಾರಿ ಸ್ಥಳಗಳಿದ್ದು ಈ ಬಗ್ಗೆ ಯಾವ ಪ್ರಕ್ರೀಯೆ ಸರಕಾರಿ ಮಟ್ಟದಲ್ಲಿ ಆಗದಿರುವ ಕುರಿತು ಉಲ್ಲೇಖಿಸಿದರಲ್ಲದೆ ಕೋಟ ರಾಷ್ಟಿçÃಯ ಹೆದ್ದಾರಿ ಸರ್ವಿಸ್ ರಸ್ತೆಯಲ್ಲಿ ವಾಹನ ಲ್ಯಾಂಡಿAಗ್ ಪುಟ್‌ಬಾತ್ ಅವ್ಯವಸ್ಥೆ ಸೇರಿದಂತೆ ,ಅಮೃತೇಶ್ವರಿ ಸರ್ಕಲ್ ಬಳಿ ಅಪಘಾತ ಹೆಚ್ಚಾಗಿ ಕಂಡುಬರುತ್ತಿದೆ ಈ ಎಲ್ಲಾ ಕುರಿತು ಮುತುವರ್ಜಿ ವಹಿಸಿ ಪರಿಹರಿಸುವಂತೆ ಮನವಿ ಮಾಡಿದರು.

ಪ್ರತಿಧ್ವನಿಸಿದ ಪಿ.ಡಿ.ಓ ಅನುಪಸ್ಥಿತಿ ಉಲ್ಲೇಖ, ೯/೧೧ರ ಸಮಸ್ಯೆ ಬಗೆಹರಿಸಿ,ಕೋವಿಡ್ ನಿಂದ ಮೃತರ ಸಹಾಯಧನ ಚರ್ಚೆ

ಗ್ರಾಮಪಂಚಾಯತ್ ವ್ಯಾಪ್ತಿಯಲ್ಲಿ ೯/೧೧ನೀಡುವುದರಲ್ಲಿ ಬಾರಿ ವಿಳಂಬವಾಗುತ್ತಿದೆ ಇದರಿಂದ ಮನೆ ನಿರ್ಮಾಣಕ್ಕೆ ಕಂಠಕವಾಗಿ ಪರಿಣಮಿಸುತ್ತಿದೆ ಈ ಬಗ್ಗೆ ಸೂಕ್ತ ಪರಿಹಾರ ನೀಡಿ ಎಂದು ಗ್ರಾಮಸ್ಥರು ತಹಶಿಲ್ದಾರ್ ಬಳಿ ಮನವಿ ಮಾಡಿಕೊಂಡರು.ಈ ಕುರಿತು ತಾ.ಪಂ ಇ ಓ ಎಚ್ ವಿ ಇಬ್ರಾಹಿಂಪುರ ಸರಕಾರದ ಮಟ್ಟದಲ್ಲಿ ಸಾಫ್ಟ್ವೇರ್ ಸಮಸ್ಯೆ ಇದೆ ಶೀಘ್ರದಲ್ಲಿ ಪರಿಹಾರಕ್ಕೆ ಕ್ರಮಕೈಗೊಳ್ಳುವುದಾಗಿ ವಿವರಿಸಿದರು.
ತಹಶಿಲ್ದಾರ್ ಗ್ರಾಮ ವಾಸ್ತವ್ಯ ನಿಗದಿಯಾಗಿ ನಡೆಯುತ್ತಿದ್ದ ಸಭೆಯಲ್ಲಿ ಪಂಚಾಯತ್ ಪಿ.ಡಿ.ಓ ಅನುಪಸ್ಥಿತಿಯ ಬಗ್ಗೆ ಆರತಿ ಗಿಳಿಯಾರು ಉಲ್ಲೇಖಿಸಿ ಪೂರ್ಣಪ್ರಮಾಣದಲ್ಲಿ ಪಂಚಾಯತ್ ಗೆ ಪಿ.ಡಿ.ಓ ನೀಡಬೇಕು ಎಂದು ಆಗ್ರಹಿಸಿದರು.
ಕೋಟ ಗ್ರಾಮಪಂಚಾಯತ್ ಸದಸ್ಯ ಜಯರಾಮ ಶೆಟ್ಟಿ ಮಾತನಾಡಿ ಕಳೆದ ಕೋವಿಡ್ ಸಂದರ್ಭದಲ್ಲಿ ಮೃತರಾದವರಿಗೆ ಸರಕಾರದ ಸಹಾಯಧನ ಸಿಕ್ಕಿಲ್ಲ ಶೀಘ್ರ ಈ ಬಗ್ಗೆ ಮಾಹಿತಿ ಪಡೆದು ಮೃತ ಕುಟುಂಬಕ್ಕೆ ಆಸರೆಯಾಗಿ ಎಂದು ಮನವಿ ಮಾಡಿದರು
ಇನ್ನುಳಿದಂತೆ ಕಂದಾಯ ಇಲಾಖೆಯ ಸಂಬoಧಿಸಿದoತೆ ಕೆಲವು ವಿಷಯಗಳಾದ ರಸ್ತೆ ,ಒಳಚರಂಡಿ ಇನ್ನಿತರ ವಿಷಯಗಳು ಮುನ್ನಲ್ಲೆಗೆ ಬಂದವು.

ಜನಸಾಮಾನ್ಯರೊoದಿಗೆ ಬೆರತ ತಹಶಿಲ್ದಾರ್
ಬೆಳಿಗ್ಗೆಯಿಂದಲೇ ಪಂಚಾಯತ್ ಆವರಣದಲ್ಲಿ ಸಭೆ ನಡೆಸಿ ಅಲ್ಲಿನ ಜನಸಾಮಾನ್ಯರ ಸಮಸ್ಯೆಗಳ ಕುರಿತು ವಿನಯತೆಯಿಂದಲೇ ಆಲಿಸಿ ಸರಕಾರದ ಮಟ್ಟದಲ್ಲಿ ಆಗಬೇಕಾದ ವ್ಯವಸ್ಥೆಯನ್ನು ಮನದಟ್ಟು ಮಾಡಿ ಅಲ್ಲೆ ಪರಿಹಾರ ಕಂಡುಕೊಳ್ಳಬಹುದಾದ ಸಮಸ್ಯೆಗಳನ್ನು ಪರಿಹರಿಸಿ ಶಹಬಾಸ್ ಎನಿಸಿಕೊಂಡರು.
ಈ ಸಂದರ್ಭದಲ್ಲಿ ಬ್ರಹ್ಮಾವರ ತಾ.ಪಂ ಇ ಓ ಎಚ್ ವಿ ಇಬ್ರಾಹಿಂಪುರ್,ಕೋಟ ನಾಡಕಛೇರಿಯ ಉಪತಹಶೀಲ್ದಾರ್ ಭಾಗ್ಯಲಕ್ಷಿ÷್ಮÃ,ಕೋಟ ಗ್ರಾಮಪಂಚಾಯತ್ ಅಧ್ಯಕ್ಷ ಅಜಿತ್ ದೇವಾಡಿಗ ,ಉಪಾಧ್ಯಕ್ಷೆ ಜಯಂತಿ ಪೂಜಾರಿ,ಕೋಟ ಹೋಬಳಿ ಕಂದಾಯ ನಿರೀಕ್ಷಕ ರಾಜು,ಗ್ರಾಮ ಲೆಕ್ಕಾಧಿಕಾರಿ ಚಲುವರಾಜು,ಕೃಷಿ ಅಧಿಕಾರಿ ಸುಪ್ರಭಾ,ತೋಟಗಾರಿಕಾ ಇಲಾಖಾಧಿಕಾರಿ ಮಹಂತೇಶ್ ಮತ್ತಿತರರು ಉಪಸ್ಥಿತರಿದ್ದರು.

 
 
 
 
 
 
 
 
 
 
 

Leave a Reply