ಮಹಿಳಾ ಮಂಡಳಗಳು ಊರಿನ ಸಾಂಸ್ಕೃತಿಕ  ಪ್ರೇರಕ ಶಕ್ತಿ – ಕುಸುಮಾ ದೇವಾಡಿಗ

ಕೋಟ:ಊರಿನ ಪ್ರೇರಕ ಶಕ್ತಿಯಾಗಿ ಸಾಂಸ್ಕೃತಿಕ  ಚಿಂತನೆಗಳೊAದಿಗೆ ಮಹಿಳಾ ಮಂಡಳಗಳು ಸಹಕಾರಿ ಎಂದು ಮಂಗಳೂರಿನ ಕದ್ರಿ ಮಂಜುನಾಥೇಶ್ಚರ ದೇವಳದ ಟ್ರಸ್ಟಿ ಕುಸುಮಾ ದೇವಾಡಿಗ ಹೇಳಿದ್ದಾರೆ
ಅವರು ಶುಕ್ರವಾರ ಕೋಟ ಮಾಂಗಲ್ಯ ಮಂದಿರದಲ್ಲಿ ಕೋಟದ ಪಂಚವರ್ಣ ಯುವಕ ಮಂಡಲದ ಅಧೀನಕ್ಕೊಳಪಟ್ಟ ಪಂಚವರ್ಣ ಮಹಿಳಾ ಮಂಡಳದ ಸಾಂಕೇತಿಕ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿ ಸಾಮಾಜಿಕ ಹಾಗೂ ಪರಿಸರಸ್ನೇಹಿ ಯುವಕ ಮಂಡಲವಾಗಿ ಪಂಚವರ್ಣ ಎಲ್ಲೆಡೆ ಪ್ರಸಿದ್ಧಿ ಪಡೆಯುತ್ತಿದೆ.ಅದೇ ರೀತಿ ಮಹಿಳಾ ಮಂಡಲ ಅದರ ಭಾಗವಾಗಿ ಕಾರ್ಯನಿರ್ವಹಿಸಿ ಜನಮಾನಸದಲ್ಲಿ ಉಳಿಯುವಂತ್ತಾಗಲಿ ಎಂದರಲ್ಲದೆ ಪ್ರಸ್ತುತ ಕಾಲಘಟ್ಟದಲ್ಲಿ ಮಹಿಳೆ ಎಲ್ಲಾ ರಂಗದಲ್ಲಿ ಮುಂಚೂಣಿಗೆ ನಿಲ್ಲುತ್ತಿದ್ದಾಳೆ ಸಾಮಾಜಿಕ,ಶೈಕ್ಷಣಿಕ ಇನ್ನಿತ ಕ್ಷೇತ್ರದಲ್ಲಿಪುರುಷರಿಗೆ ಸಮನಾಗಿ ನಿಲ್ಲುತ್ತಿದ್ದಾಳೆ ಇದು ಶ್ಲಾಘನೀಯ ಹಾಗೇ ಯುವಕ ಮಂಡಲಗಳOತೆ ಮಹಿಳಾ ಮಂಡಳಗಳು ಗ್ರಾಮದ ಅಭಿವೃದ್ಧಿ ಮುನ್ನುಡಿ ಬರೆಯಲಿ ಎಂದು ಹಾರೈಸಿದರು.
ಈ ಕಾರ್ಯಕ್ರಮದಲ್ಲಿ ೫೦೦ಕ್ಕೂ ಅಧಿಕ ಹೆರಿಗೆಗೈದ ಹೆರಿಗೆ ತಜ್ಞೆ ( ಬಿಜ್ಜಲತ್ತಿ) ಮಣೂರು ಪದ್ದು ಇವರನ್ನು ಸನ್ಮಾನಿಸಲಾಯಿತು.
ಸಭೆಯ ಅಧ್ಯಕ್ಷತೆಯನ್ನು ಪಂಚವರ್ಣ ಮಹಿಳಾ ಮಂಡಳದ ಅಧ್ಯಕ್ಷೆ ಕಲಾವತಿ ಅಶೋಕ್ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಕೋಟ ಗ್ರಾಮಪಂಚಾಯತ್ ಅಧ್ಯಕ್ಷ ಅಜಿತ್ ದೇವಾಡಿಗ,ಕೋಟತಟ್ಟು ಗ್ರಾಮಪಂಚಾಯತ್ ಅಧ್ಯಕ್ಷೆ ಅಶ್ವಿನಿ ದಿನೇಶ್,ಕೋಟ ಗ್ರಾಮಪಂಚಾಯತ್ ಸದಸ್ಯರಾದ ಚಂದ್ರ ಪೂಜಾರಿ ಕದ್ರಿಕಟ್ಟು, ಕೋಟ ಅಮೃತೇಶ್ವರಿ ದೇವಳದ ಟ್ರಸ್ಟಿ ಎಂ.ಸುಬ್ರಾಯ ಆಚಾರ್ಯ, ಕೋಟ ಪಂಚವರ್ಣ ಯುವಕ ಮಂಡಲದ ಸ್ಥಾಪಾಕಾಧ್ಯಕ್ಷ ಸುರೇಶ್ ಗಾಣಿಗ, ಅಧ್ಯಕ್ಷ ಅಮೃತ್ ಜೋಗಿ, ಉಪಾಧ್ಯಕ್ಷ ಮನೋಹರ ಪೂಜಾರಿ ಉಪಸ್ಥಿತರಿದ್ದರು. ಪಂಚವರ್ಣ ಮಹಿಳಾ ಮಂಡಳದ ಪ್ರೇಮ ಸ್ವಾಗತಿಸಿದರು ,ಪಂಚವರ್ಣ ಯುವಕ ಮಂಡಲದ ಕಾರ್ಯಾಧ್ಯಕ್ಷ ರವೀಂದ್ರ ಕೋಟ ಪ್ರಾಸ್ತಾವನೆ ಸಲ್ಲಿಸಿದರು.ಕಾರ್ಯದರ್ಶಿ ಲಲಿತಾ ನಿರೂಪಿಸಿದರು.ಮಹಿಳಾ ಮಂಡಳದ ಸದಸ್ಯೆ ಶಾಲಿನಿ ವಂದಿಸಿದರು.

 
 
 
 
 
 
 
 
 
 
 

Leave a Reply