ಹೋo ಡಾಕ್ಟರ್ ಫೌಂಡೇಶನ್ ಮಾದರಿ ದೀಪಾವಳಿ ಕಾಯ೯ಕ್ರಮ

ಹೋಂಡಾಕ್ಟರ್ ಫೌಂಡೇಶನ್ ಇದರ ವತಿಯಿಂದ ಕೊಳಲಗಿರಿ ಸಂತೆ ಮೈದಾನದಲ್ಲಿ ನ.1 ರಂದು ವಿಶಿಷ್ಟ ದೀಪಾವಳಿ ಕಾಯ೯ಕ್ರಮ ನಡೆಯಿತು.
ಈ ಕಾಯ೯ಕ್ರಮದಲ್ಲಿ ಶಾರದಾ ಅಂಧ ಕಲಾವಿದರ ಬಳಗ ವತಿಯಿಂದ ಸುಗಮ ಸಂಗೀತ ದೊಂದಿಗೆ ಕಾಯ೯ಕ್ರಮಕ್ಕೆ ಚಾಲನೆ ನೀಡಲಾಯಿತು.
ಈ ಸಂದಭ೯ದಲ್ಲಿ 8 ಬಡ ರೋಗಿಗಳಿಗೆ ಸಹಾಯಧನ, ಬಡ ಪ್ರತಿಭಾನ್ವಿತ ವಿದ್ಯಾಥಿ೯ಗಳಿಗೆ ವಿದ್ಯಾರ್ಥಿ ವೇತನ, ಅನಾಥ ರ ದತ್ತು ಸ್ವೀಕಾರ ಉದ್ದೇಶದಲ್ಲಿ 20 ಬಡ ಕುಟುಂಬಕ್ಕೆ ದಿನಸಿ ವಸ್ತುಗಳ ವಿತರಣೆ, ಬಡ ರೋಗಿಯನ್ನು ಡಯಾಲಿಸಿಸ್‌ ಗಾಗಿ ಆಸ್ಪತ್ರೆಗೆ ಸಾಗಿಸಲು ನೆರವಾಗುತ್ತಿರುವ 50 ರಿಕ್ಷಾ ಚಾಲಕರಿಗೆ ಗೌರವ, ಭಾಗ್ಯದ ಜ್ಯೋತಿ ಯೋಜನೆಯ ಫಲಾನುಭವಿ ಕುಟುಂಬಕ್ಕೆ ಗ್ರೈಂಡರ್ ನೀಡಿಕೆ ಅದೇ ರೀತಿ ಅಂಧ ಕಲಾವಿದರಿಗೆ ಟೀ ಶಟ್೯ಗಳನ್ನು ನೀಡಲಾಯಿತು.
ಕಾಯ೯ಕ್ರಮದಲ್ಲಿ ಪ್ರಮುಖವಾಗಿ ಡಾII ಶಶಿಕಿರಣ್ ಶೆಟ್ಟಿ ಯವರು ಬರೆದ ಕಥಾ ಸಂಕಲನ ಬದುಕು ಬದಲಿಸುವ ಕಥೆ ಗಳು ಪುಸ್ತಕ ಬಿಡುಗಡೆ ಮಾಡಲಾಯಿತು.
ಈ ಕಾಯ೯ಕ್ರಮ ಜನ ಮೆಚ್ಚುಗೆ ಪಡೆದಿದ್ದು, ಈ ಸಂದಭ೯ದಲ್ಲಿ ಡಾII ಶಶಿಕಿರಣ್ ಶೆಟ್ಟಿ, ಡಾII ಸುಮಾ ಶೆಟ್ಟಿ, ಬಂಗಾರಪ್ಪ, ರಾಘವೇಂದ್ರ ಪೂಜಾರಿ, ನೈನಾ ನಾಯಕ್, ಸುಜಯ, ಶಶಿಕಲಾ ಶೆಟ್ಟಿ, ಉದಯ ನಾಯ್ಕ, ಮುಂತಾದವರಿದ್ದರು.

 
 
 
 
 
 
 

Leave a Reply