ಕೋಡಿ ಗ್ರಾ.ಪಂ ವಿವಿಧ ಸಮಸ್ಯೆಗಳ ಕುರಿತು ತಹಶೀಲ್ದಾರ್,ತಾ.ಪಂ ಇಓ ಸಮ್ಮುಖದಲ್ಲಿ ಸಭೆ

ಕೋಟ: ಕೋಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಕಡಲ್ಕೊರೆತ ಸಮಸ್ಯೆಯ ಬಗ್ಗೆ ಕೋಡಿ ಗ್ರಾಮ ಪಂಚಾಯತ್ ಅಧ್ಯಕ್ಷ ಪ್ರಭಾಕರ ಮೆಂಡನ್ ನೇತೃತ್ವದಲ್ಲಿ ಸಭೆ ಇತ್ತೀಚಿಗೆ ಪಂಚಾಯತ್ ಸಭಾಂಗಣದಲ್ಲಿ ನಡೆಯಿತು.

ಬ್ರಹ್ಮಾವರ ತಹಶೀಲ್ದಾರ್ ರಾಜಶೇಖರ್ ಮೂರ್ತಿ ತಹಶೀಲ್ದಾರ್ ಹಾಗೂ ತಾ.ಪಂ ಇಓ ಎಚ್.ವಿ ಇಬ್ರಾಹಿಂಪುರ್ ಸಭೆಯಲ್ಲಿ ಪಾಲ್ಗೊಂಡು ಕಳೆದ ಹಲವಾರು ವರ್ಷಗಳಿಂದ ಈ ಭಾಗದಲ್ಲಿ ತಲೆದೂರುವ ಕಡಲಕೊರೆತಕ್ಕೆ ಶಾಶ್ವತ ಕ್ರಮಗಳ ಕುರಿತು ಮಾಹಿತಿ ಪಡೆದರಲ್ಲದೆ ಕೋಡಿ ಗ್ರಾಮದ ಜನತೆಯ ಬಹುಕಾಲದ ಬೇಡಿಕೆಯಾದ ಹಕ್ಕು ಪತ್ರದ ಕುರಿತು ಚರ್ಚಿಸಲಾಯಿತು. ಆ ಕುರಿತು ತಹಶೀಲ್ದಾರ ಮಾಹಿತಿ ನೀಡಿ ಈಗಾಗಲೇ ಪತ್ರ ಮುಖೇನ ಕಂದಾಯ ಇಲಾಖೆಗೆ ಪತ್ರ ಬರೆದಿದ್ದು, ೨೦೧೨ರ ಆದೇಶದಲಿನ ಕೆಲವು ಶರತ್ತುಗಳ ವಿನಾಯಿತಿಗಾಗಿ ಬೇಡಿಕೆ ಇಡಲಾಗಿದೆ ಎಂದು ತಿಳಿಸಿದರು. ಮುಂದಿನ ದಿನಗಳಲ್ಲಿ ಕೋಡಿ ಗ್ರಾಮದಲ್ಲಿ ಹಕ್ಕು ಪತ್ರದ ಕುರಿತು ಸಭೆಯನ್ನು ಕರೆಯಲಾಗುವುದು ಎಂದು ತಿಳಿಸಿದರು. ಹಾಗೆಯೇ ಪಂಚಾಯತ್ ಅಭಿವೃದ್ದಿ ಅಧಿಕಾರಿಯವರು ಕೋಡಿ ಗ್ರಾಮದ ೨ ಅಂಗನವಾಡಿ ಕೇಂದ್ರಗಳಿಗೆ ಜಾಗದ ಪಹಣಿ ಪತ್ರ ಮಾಡುವ ಕುರಿತು ಹಾಗೂ ಎಸ್.ಎಲ್.ಆರ್.ಎಮ್ ಕಟ್ಟಡ ಮತ್ತು ಕೋಡಿತಲೆ ಸ್ಮಶಾನಕ್ಕೆ ನಿವೇಶನ ಒದಗಿಸುವುದರ ಕುರಿತು ಚರ್ಚಿಸಿದರು. ಪೃಕೃತಿ ವಿಕೋಪ ದಡಿ ಮಂಜೂರಾದ ಮನೆಗಳನ್ನು ಬ್ಲಾಕ್ ಮಾಡಲಾಗಿದ್ದು, ಅದನ್ನು ತೆರವು ಗೊಳಿಸುವುದರ ಬಗ್ಗೆ ಮತ್ತು ಇತರೆ ವಿಷಯಗಳ ಬಗ್ಗೆ ಚರ್ಚಿಸಲಾಯಿತು. ಕೋಟ ಹೋಬಳಿ ಕಂದಾಯ ಅಧಿಕಾರಿ ರಾಜು , ಪಂಚಾಯತ್ ಅಭಿವೃದ್ಧಿ ಅಧಿಕಾರಿ ರವೀಂದ್ರರಾವ್, ಸದಸ್ಯರಾದ ಅಂತೋನಿ ಡಿಸೋಜಾ, ಕೃಷ್ಣ ಪೂಜಾರಿ ಪಿ, ಗೀತಾ ಖಾರ್ವಿ ಸತೀಶ್ ಜಿ ಕುಂದರ್, ಗ್ರಾಮ ಪಂಚಾಯತ್ ಕರ‍್ಯದರ್ಶಿ ಉಷಾಶೆಟ್ಟಿ, ಸಿಬ್ಬಂದಿ ವರ್ಗ ಹಾಗೂ ಗ್ರಾಮ ಸಹಾಯಕಿ ಉಪಸ್ಥಿತರಿದ್ದರು.

 
 
 
 
 
 
 
 
 
 
 

Leave a Reply