ಕೊಡೇರಿ ಕಿರು ಬಂದರಿನ ಮೀನುಗಾರಿಕ ಜಟ್ಟಿಯಲ್ಲಿ ಪ್ರತಿಭಟನೆ

ಕೊಡೇರಿ ಕಿರು ಬಂದರಿನ ಮೀನುಗಾರಿಕ ಜಟ್ಟಿಯಲ್ಲಿ ಯಾವುದೇ ರೀತಿಯ ಮೂಲಸೌಕರ್ಯ ಕಲ್ಪಿಸಿದೇ ಮೀನು ಮಾರಾಟಕ್ಕೆ ಕಾನೂನು ಬಾಹಿರವಾಗಿ ಮೀನು ಮಾರಾಟ ಮಾಡುತ್ತಿರುವುದನ್ನು ವಿರೋಧಿಸಿ ಕೊಡೇರಿಯ ಮೀನುಗಾರರು ಜಟ್ಟಿಯಲ್ಲಿ ಒಂದು ದಿನದ ಶಾಂತಿಯುತ ಪ್ರತಿಭಟನೆ ನಡೆಸಿದರು.

ಮೀನುಗಾರಿಕೆಗೆ ತೆರಳಿದ ನಾಡದೋಣಿ ಅಥವಾ ಇನ್ಯಾವುದೇ ರೀತಿಯ ಮೀನುಗಾರಿಕಾ ದೋಣಿಗಳು ಮೀನು ತೆಗೆದುಕೊಂಡು ಬಂದರೆ ಕೊಡೇರಿ ಶಾಲೆ ಸಮೀಪದಲ್ಲಿ ಮೀನು ಖಾಲಿ ಮಾಡುವ ಪ್ರತ್ಯೇಕ ವ್ಯವಸ್ಥೆಇದೆ. ಇದನ್ನು ಬಳಸಿಕೊಳ್ಳದೇ ಮೂಲ ಸೌಕರ್ಯವೇ ಇಲ್ಲದ ಅವೈಜ್ಞಾನಿಕವಾಗಿ ನಿರ್ಮಿಸಿರುವ ಜಟ್ಟಿಯಲ್ಲಿ ಅಕ್ರಮವಾಗಿ ಮೀನು ಖಾಲಿ ಮಾಡುತ್ತಿದ್ದಾರೆ.

ಇದರಿಂದ ಕೊಡೇರಿಯ ಜನ ಸಾಮಾನ್ಯರಿಗೆ ಸಮಸ್ಯೆಯಾಗುತ್ತದೆ. ಅಕ್ರಮವಾಗಿ ಮೀನು ಖಾಲಿ ಮಾಡಲು ಅವಕಾಶ ನೀಡಬಾರದು ಎಂದು ಕೊಡೇರಿ ಮೀನುಗಾರು ಆಗ್ರಹಿಸಿದರು. ಶುಕ್ರವಾರ ಬೆಳಗ್ಗೆಯಿಂದ ಸಂಜೆಯವರೆಗೂ ಶಾಂತಿಯುತ ಪ್ರತಿಭಟನೆ ನಡೆಸಿದರು. ಬೈಂದೂರು ತಾಹಸೀಲ್ದಾರ್ ಸ್ಥಳಕ್ಕೆ ಭೇಟಿ ನೀಡಿದ್ದರು.

 
 
 
 
 
 
 
 
 
 
 

Leave a Reply