Janardhan Kodavoor/ Team KaravaliXpress
30.6 C
Udupi
Sunday, October 2, 2022
Sathyanatha Stores Brahmavara

ಕೊಡವೂರಿನ ಅಸಹಾಯಕ ಬ್ರಾಹ್ಮಣ ಕುಟುಂಬಕ್ಕೆ ಬೇಕಿದೆ ಸಹೃದಯರ ನೆರವು

ಉಡುಪಿ: ನೋಡಿಕೊಳ್ಳುವವರಿಲ್ಲದೆ ಅನಿವಾರ್ಯವಾಗಿ ವೃದ್ಧಾಶ್ರಮ ಸೇರಿರುವ ವೃದ್ಧ ತಂದೆ. ಗಂಭೀರ ಕಾಯಿಲೆಗೆ ತುತ್ತಾಗಿ ಹಾಸಿಗೆಯಲ್ಲಿಯೇ ನಿತ್ಯ ಕರ್ಮಗಳನ್ನು ಪೂರೈಸುತ್ತಿರುವ ತಾಯಿ. ಕಣ್ಣಿನ ದೃಷ್ಟಿ ಕಳೆದು ಕೊಂಡು ಅಸಹಾಯಕ ಸ್ಥಿತಿಯಲ್ಲಿರುವ ಮಗ.

ಕುಟುಂಬದ ಪಾಲನೆಯ ನೊಗಕ್ಕೆ ಹೆಗಲು ಕೊಟ್ಟ ಸೊಸೆ ! ಇದು ಸಿನೆಮಾ ಸ್ಟೋರಿ ಅಲ್ಲ, ಉಡುಪಿ ಸಮೀಪದ ಕೊಡವೂರಿನ ಮಧ್ವನಗರದಲ್ಲಿ ವಾಸಿಸುತ್ತಿರುವ ಬಡ ಬ್ರಾಹ್ಮಣ ಕುಟುಂಬದ ಕಥೆ ವ್ಯಥೆಯಿದು.

ಕುಟುಂಬದ ಪರಿಸ್ಥಿತಿ ಬಗ್ಗೆ ಮಾಹಿತಿ ಪಡೆದ ಸಮಾಜ ಸೇವಕ ವಿಶು ಶೆಟ್ಟಿ ಅವರು ತಕ್ಷಣ ಸ್ಥಳಕ್ಕೆ ಧಾವಿಸಿ, ನೆರವಿನ ಹಸ್ತ ಚಾಚಿದ್ದಾರೆ. ವಿಶು ಶೆಟ್ಟಿ ಅವರು 5,೦೦೦ ರೂ., ಅವರ ಸ್ನೇಹಿತ ನಿವೃತ್ತ ಬ್ಯಾಂಕ್ ಮ್ಯಾನೇಜರ್ ಸತೀಶ್ ಶೆಟ್ಟಿ ಅಂಬಲಪಾಡಿ 1೦,೦೦೦ ರೂ. ಹಾಗೂ ವಿಶು ಶೆಟ್ಟಿ ಅವರ ಮೂವರು ಹಿತೈಶಿಗಳು 22,೦೦೦ ರೂ. ನೀಡಿದ್ದು, ಒಟ್ಟು 37,೦೦೦ ರೂ.ನೆರವನ್ನು ಕುಟುಂಬಕ್ಕೆ ಸಮರ್ಪಿಸಿ ಮಾನವೀಯತೆ ಮೆರೆದಿದ್ದಾರೆ.

ಏನಿದು ಪ್ರಕರಣ..? : ಮಧ್ವನಗರದ ವೆಂಕಟರಾಜ ಭಟ್ (80 ವ) ಹಾಗೂ ಇಂದಿರಾ ಭಟ್ (75 ವ) ದಂಪತಿ ಮೂಡೆಯ ಒಲಿ (ಕೊಟ್ಟೆ) ತಯಾರಿಸಿ ಮಾರಾಟ ಮಾಡಿ ಬಂದ ಕಿರು ಆದಾಯದಲ್ಲಿ ಜೀವನ ಸಾಗಿಸುತ್ತಿದ್ದರು. ಮಗ ರಾಮಕೃಷ್ಣ ಭಟ್ ಚಾಕಲೇಟ್ ಕಂಪೆನಿಯೊಂದರಲ್ಲಿ ಕೆಲಸ ಮಾಡಿ ಒಂದಷ್ಟು ಆದಾಯದ ಮೂಲಕ ತಂದೆತಾಯಿಗೆ ನೆರವಾಗಿದ್ದರು.

ಪ್ರಾರಂಭದಲ್ಲಿ ಒಂದು ಕಣ್ಣಿನ ದೃಷ್ಟಿಯನ್ನು ಕಳೆದುಕೊಂಡಿದ್ದ ರಾಮಕೃಷ್ಣ ಭಟ್ (55 ವ) ಅವರ ಎರಡನೆಯ ಕಣ್ಣು ಕೂಡಾ ಇದೀಗ ದೃಷ್ಟಿ ಹೀನವಾಗಿದೆ. ಹೀಗಾಗಿ ದುಡಿಯಲಾಗದ ಅಸಹಾಯಕ ಸ್ಥಿತಿಗೆ ತಲುಪಿದ್ದಾರೆ.
ತಾಯಿ ಇಂದಿರಾ ಭಟ್ ಗಂಭೀರ ಉದರ ಕಾಯಿಲೆಗೆ ತುತ್ತಾಗಿ ಮಲಗಿದ್ದಲ್ಲಿಯೇ ಶೌಚಾದಿಗಳನ್ನು ಪೂರೈಸುವ ಪರಿಸ್ಥಿತಿ ಬಂದೊದಗಿದೆ.

ಮಗ ರಾಮಕೃಷ್ಣ ಭಟ್ ಅವರು ಅಂದಾಜಿನಲ್ಲಿಯೇ ತನ್ನ ತಾಯಿಯ ಆರೈಕೆ ಹಾಗೂ ಮನೆಯ ಕೆಲಸವನ್ನು ಮಾಡುತ್ತಿರುವುದನ್ನು ಕಂಡಾಗ ಅಯ್ಯೋ ಎನಿಸುತ್ತಿದೆ. ತಾಯಿ, ಮಗನ ಸ್ಥಿತಿ ಹೀಗಿದ್ದರೆ, ವೃದ್ಧ ತಂದೆಯನ್ನು ನೋಡಿಕೊಳ್ಳುವವರಿಲ್ಲದೆ ಖಾಸಗಿ ಆಶ್ರಮಕ್ಕೆ ದಾಖಲಿಸಲಾಗಿದೆ. ಅಲ್ಲಿ ಮಾಸಿಕ 10 ರಿಂದ 13 ಸಾವಿರ ರೂ. ಕಟ್ಟುವ ಅನಿವಾರ್ಯತೆಯಿದೆ. ಕುಟುಂಬ ಕೂಡಿಟ್ಟ ಅಲ್ಪಸ್ವಲ್ಪ ಹಣ ಕೂಡಾ ಮೂವರ ಔಷಧೋಪಚಾರಕ್ಕೆ ಖಾಲಿಯಾಗಿದೆ.

ರಾಮಕೃಷ್ಣ ಭಟ್ ಅವರ ಪತ್ನಿ ಖಾಸಗಿ ಮುದ್ರಣಾಲಯದಲ್ಲಿ ಉದ್ಯೋಗ ಮಾಡಿಕೊಂಡಿದ್ದು, ಅವರ ಸಂಬಳದಲ್ಲಿಯೇ ಈ ಕುಟುಂಬದ ನಿರ್ವಹಣೆ ನಡೆಯಬೇಕಾಗಿದೆ. ಈ ರೀತಿಯಲ್ಲಿ ತೀರಾ ಅಸಹಾಯಕ ಸ್ಥಿತಿಯಲ್ಲಿರುವ ಈ ಕುಟುಂಬಕ್ಕೆ ಸಹೃದಯ ದಾನಿಗಳ ನೆರವು ಬೇಕಾಗಿದೆ. ನೆರವಾಗ ಬಯಸುವ ಮಂದಿ ರಾಮಕೃಷ್ಣ ಭಟ್ ಅವರ ಕೆನರಾ ಬ್ಯಾಂಕ್ ಆದಿ ಉಡುಪಿ ಶಾಖೆಯ ಅಕೌಂಟ್ ನಂ. 02072210015449(ಐಎಫ್‌ಎಸ್‌ಸಿ ಕೋಡ್ CNRB0010207) ಗೆ ಹಣ ಕಳುಹಿಸಬಹುದು.
*ವೆಂಕಟರಾಜ ಭಟ್ ಅವರ ಕುಟುಂಬ ತೀರಾ ಅಸಹಾಯಕ ಸ್ಥಿತಿಯಲ್ಲಿದೆ. ಸಹೃದಯ ದಾನಿಗಳು, ಸಂಘ ಸಂಸ್ಥೆಗಳು ಈ ಕುಟುಂಬದ ನೆರವಿಗೆ ಮುಂದಾಗಬೇಕು.
ವಿಶು ಶೆಟ್ಟಿ ಅಂಬಲಪಾಡಿ, ಸಮಾಜ ಸೇವಕರು.

- Advertisement -

ಸಂಬಂಧಿತ ಸುದ್ದಿ

Leave a Reply

ಛಾಯಾಂಕಣ

ಇತ್ತೀಚಿನ ಸುದ್ದಿ

error: Content is protected !!