Janardhan Kodavoor/ Team KaravaliXpress
28.6 C
Udupi
Thursday, August 11, 2022
Sathyanatha Stores Brahmavara

ಕೊಡವೂರು ವಾರ್ಡ್ 20ನೇ ಬೃಹತ್ ಗ್ರಾಮ ಸಭೆ

ಕೊಡವೂರು ವಾರ್ಡಿನ 20ನೇ ಗ್ರಾಮ ಸಭೆಯ ಕೊಡವೂರು ಶ್ರೀ ಶಂಕರನಾರಾಯಣ ದೇವಸ್ಥಾನದಲ್ಲಿ ಮಲ್ಪೆ ಠಾಣಾಧಿಕಾರಿ ಶಕ್ತಿವೇಲು ದೀಪ ಬೆಳಗಿಸುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಗ್ರಾಮ ಸಭೆಯನ್ನು ಮಾಡುವ ಮುಖಾಂತರ ಜನರ ಕುಂದು ಕೊರತೆಗಳನ್ನು ತಿಳಿದು ಉತ್ತರ ಕೊಡುವ ಪ್ರಯತ್ನ ಮಾಡಬಹುದು. ಈ ಸಂದರ್ಭದಲ್ಲಿ ಮಲ್ಪೆ ಠಾಣಾಧಿಕಾರಿಯಾದ ಶಕ್ತಿವೇಲು ಇವರು ಕ್ರೈಂ ಇಲ್ಲದ ಸಮಾಜ ನಿರ್ಮಿಸಲು ಸಾರ್ವಜನಿಕರು ಪೊಲೀಸರೊಂದಿಗೆ ಸಹಕರಿಸಬೇಕು ಮತ್ತು ನಾವು ನಮ್ಮ ಮಕ್ಕಳ ಬಗ್ಗೆ ಜವಾಬ್ದಾರಿಯಿಂದ ನಡೆಯಬೇಕು ಎಂದರು.

ವಿಜಯ್ ಕೊಡವೂರು ಮಾತಾನಾಡಿ ಕೇಂದ್ರ ಮತ್ತು ರಾಜ್ಯ ಸರಕಾರದ ಯೋಜನೆಯನ್ನು ಮನೆ ಮನೆಗಳಿಗೆ ತಲುಪಿಸಲು ಇಂತಹ ಗ್ರಾಮ ಸಭೆಯಿಂದ ಸಾಧ್ಯವಿದೆ. ಈ ಮುಖಾಂತರ ಸಮಾಜದ ಕಟ್ಟ ಕಡೆಯ ವ್ಯಕ್ತಿಗೆ ಯೋಜನೆಯ ಅರಿವು ಮೂಡಿಸುವ ಪ್ರಯತ್ನ ಎಂದರು.

ಈ ಸಂದರ್ಬದಲ್ಲಿ ವಾರ್ಡ್ ಅಭಿವೃದ್ದಿ ಸಮಿತಿಯ ಅಧ್ಯಕ್ಷರಾದ ಅಶೋಕ್ ಶೆಟ್ಟಿಗಾರ್, ಕೃಷ್ಣಾ .ಎನ್ .ಅಮೀನ್ , ಭೋಜ ಪಾಲೇಕಟ್ಟೆ, ಚಂದ್ರಾವತಿ ಸುರೇಶ್ ಕಾನಂಗಿ , ರವಿ ಸಾಲಿಯಾನ್ ಕೊಡವೂರು,  ಅಜಿತ್ ಕೊಡವೂರು, ಗುಣವತಿ ಯಶೋಧಾ ರಾಜೇಂದ್ರ ಮತ್ತಿತರರು ಉಪಸ್ಥಿತರಿದ್ದರು.

- Advertisement -

ಸಂಬಂಧಿತ ಸುದ್ದಿ

Leave a Reply

ಛಾಯಾಂಕಣ

ಇತ್ತೀಚಿನ ಸುದ್ದಿ

error: Content is protected !!