​ಕೊಡವೂರು ಹಾಲು ಉತ್ಪಾದಕರ ಸಹಕಾರಿ ಸಂಘದ  ವಾರ್ಷಿಕ ಮಹಾಸಭೆ 

ಕೊಡವೂರು ಹಾಲು ಉತ್ಪಾದಕರ ಸಹಕಾರಿ ಸಂಘದ  ವಾರ್ಷಿಕ ಮಹಾಸಭೆ ಶನಿವಾರದಂದು ಶ್ರೀ ಶಂಕರ ದೇವಸ್ಥಾನದ ವಠಾರ ದಲ್ಲಿ ಸಂಘದ ಅಧ್ಯಕ್ಷರಾದ ಕೆ.ಟಿ. ಪ್ರಸಾದ್ ಅವರ ಅಧ್ಯಕ್ಷತೆಯಲ್ಲಿ ಜರಗಿತು. 
ಒಕ್ಕೂಟದ ಅಧ್ಯಕ್ಷರು ಸಂಘದ ಮಾಜಿ ಅಧ್ಯಕ್ಷ, ಪ್ರಸ್ತುತ ನಿರ್ದೇಶಕ ಸಂಘಕ್ಕೆ ಮಾರ್ಗದರ್ಶಿಯಾಗಿರುವ  ರವಿರಾಜ ಹೆಗ್ಗಡೆಯವರು ಪ್ರಾಸ್ತಾವಿಕ ಮಾತನಾಡಿ ಸಂಘವು ಬೆಳೆದು ಬಂದ ವಿಷಯ ಸಂಘದ ಸದಸ್ಯರಿಗೆ ಹಲವಾರು ಕೊಡುಗೆಯ ಬಗ್ಗೆ ರಿಯಾಯಿತಿ ದರದಲ್ಲಿ ಜಾನುವಾರು ವಿಮೆಯ ಬಗ್ಗೆ ಸವಿಸ್ತಾರವಾದ ಮಾಹಿತಿಯನ್ನು ತಿಳಿಸಿದರು.  
2019ನೇ ಸಾಲಿನಲ್ಲಿ ನಿವ್ವಳ ಲಾಭ 5,49,028 ಸಾವಿರ ರೂಪಾಯಿ ಗಳಿಸಿದ್ದು, ಉತ್ಪಾದಕರಿಗೆ ಬೋನಸ್ 2,48,495-00 ನೀಡಲಾಯಿತು ವಿಶೇಷ ಬಹುಮಾನಗಳೊಂದಿಗೆ ಹಾಗೂ 180 ಉತ್ಪಾದಕರಿಗೆ ಉತ್ತೇಜನ ಬಹುಮಾನ ನೀಡಲಾಯಿತು . ಸದಸ್ಯರಿಗೆ 15% ಡಿವಿಡೆಂಟ್ ನೀಡಲಾಯಿತು.  ಸದಸ್ಯರ 11ಮಕ್ಕಳಿಗೆ ವಿದ್ಯಾರ್ಥಿ ವೇತನ ಉತ್ತೇಜನ ಕೊಡುಗೆಯನ್ನು ನೀಡಲಾಯಿತು. 
ಸಂಘದ ವತಿಯಿಂದ ಹಾಲು ಉತ್ಪಾದಕರಿಗೆ ಆರು ತಿಂಗಳು ಹೆಚ್ಚುವರಿಯಾಗಿ ಲೀಟರಿಗೆ 2 ರೂಪಾಯಿ ನೀಡಲಾಗಿದೆ.  ಅವಘಡಗಳಿಗೆ ತುತ್ತಾದ ರಾಸುಗಳಿಗೆ ಒಬ್ಬರಿಗೆ ರೂಪಾಯಿ 2000 ದಂತೆ 5 ಮಂದಿಗೆ ನೀಡಲಾಯಿತು. ಒಕ್ಕೂಟದ ಮುಖಾಂತರ 135 ಜಾನುವಾರುಗಳಿಗೆ ಜಾನುವಾರು ವಿಮೆ ಮಾಡಿಸಿ,  ಅದರ ಮುಖಾಂತರ ಮೂರು ಮಂದಿಗೆ ತಲಾ 30 ಸಾವಿರ ರೂ. ದಂತೆ ಅವರ ಖಾತೆಗೆ ಜಮಾ ಮಾಡಿಸಲಾಯಿತು. 
ಒಕ್ಕೂಟದ ರೈತ ಕಲ್ಯಾಣ ಕೃಷ್ಣ ವತಿಯಿಂದ 29,900-00 ಅನುದಾನ ಬಂದ ಬಗ್ಗೆ ಮಾಹಿತಿ ನೀಡಲಾಯಿತು.  ಒಕ್ಕೂಟದ ಸಹಾಯಕ ವ್ಯವಸ್ಥಾಪಕ ಶಂಕರ ನಾಯಕ ಮಾತಾಡಿ ಸಂಘವು ಪಾರದರ್ಶಕವಾಗಿ ಕೆಲಸ ಮಾಡುವುದರ ಬಗ್ಗೆ ಮೆಚ್ಚುಗೆ ವ್ಯಕ್ತ ಪಡಿಸುತ್ತಾ ಸದಸ್ಯರಿಗೆ ಸಿಗುವ ಸವಲತ್ತಿನ ಬಗ್ಗೆ ತಿಳಿಸಿದರು.  ಸಂಘದ ನಿರ್ದೇಶಕರಾದ ಗೋಪಾಲಶೆಟ್ಟಿ, ಗಣೇಶ್ ಪೂಜಾರಿ, ರಾಜ ಸೇರಿಗಾರ, ಇಂದಿರಾ ಶೆಟ್ಟಿ, ಸದಾನಂದ ಸೇರಿಗಾರ, ಇಂದಿರಾ ಬಾಧ್ಯ,  ಸರಸ್ವತಿ, ಅಣ್ಣಪ್ಪ ಶೆಟ್ಟಿ, ಲೀಲಾವತಿ, ಜಯಂತಿ ಸಿಬ್ಬಂದಿಗಳಾದ ಸುಮಿತ್ರಾ, ಸುಧಾ, ಸುಜಯ ಉಪಸ್ಥಿತರಿದ್ದರು. 

ಸಂಘದ ಕಾರ್ಯದರ್ಶಿ ಸಂತೋಷ್ ಸ್ವಾಗತಿಸಿ, ವರದಿ ವಾಚಿಸಿದರು. ಸಂಘದ ಆಂತರಿಕ ಲೆಕ್ಕಪರಿಶೋಧಕ ರಾಮ ಸೇರಿಗಾರ್ ನಿರೂಪಿಸಿದರು    

 
 
 
 
 
 
 
 
 
 
 

Leave a Reply