ಕೊಡವೂರು ವಾರ್ಡ್ ನಲ್ಲಿ 17 ನೆಯ ಬ್ರಹತ್ ಗ್ರಾಮ ಸಭೆ

ಈ ಹಿಂದೆ ಕೊಡವೂರು ವಾರ್ಡ್ ನಲ್ಲಿ ಬೇರೆಬೇರೆ ಪಕ್ಷದಿಂದ ಸೂಚಿಸಿ ಜನರಿಂದ ಆಯ್ಕೆಯಾದ ಮಾಜಿ ಪಂಚಾಯತ್ ಸದಸ್ಯರುಗಳಿಗೆ ನಗರ ಸಭೆಯ ಸದಸ್ಯರುಗಳನ್ನು ಗ್ರಾಮ ಸಭೆಯಲ್ಲಿ ಗೌರವಿಸಲಾಯಿತು. ರೋಡು, ತೂಡು ಸ್ವಚ್ಛತೆಯ ಜೊತೆಯಲ್ಲಿ ಅನೇಕ ಸಮಸ್ಯೆಗಳನ್ನು ಮೆಲುಕು ಹಾಕುವ ಪ್ರಯತ್ನ ಈ ಗ್ರಾಮ ಸಭೆಯಲ್ಲಿ ನಡೆಯಿತು.
ನಗರ ಸಭಾ ಸದಸ್ಯ  ವಿಜಯ್ಮುಂ ಕೊಡವೂರು ದೆ ಅನೇಕ ಸಮಸ್ಯೆಗಳು ಇದೆ, ಇದಕ್ಕೆ ನಾವು ಜೊತೆಯಾಗಿ ಎದುರಿಸಲು ಸಾಧ್ಯವಿದೆ.ಈ ಹಿಂದೆ ಎಲ್ಲಾ ಸಂಘ ಸಂಸ್ಥೆಗಳು ಮತ್ತು ನಾಗರಿಕರ ಸಹಾಯದಿಂದ ಒಟ್ಟು 28,92515 ರೂಪಾಯಿಯ ಸೇವಾ ಕಾರ್ಯ ನಡೆದಿದೆ ಎಂದು ಗೌರವದಿಂದ ಹೇಳಲು ಇಷ್ಟ ಪಡುತ್ತೇನೆ. 
ಮತಾಂತರ, ಗೋ ಸಂರಕ್ಷಣೆ, ಇಂದ್ರಾಣಿ ನದಿಯ ರಕ್ಷಣೆ, ಕೆಮಿಕಲ್ ಮಿಶ್ರಿತ ಆಹಾರ ಪದ್ಧತಿಯಿಂದ ರಕ್ಷಣೆ, ಡ್ರಗ್ ಸೇವನೆ, ಎಲ್ಲಾ ಸಮಸ್ಯೆಗಳಿಗೂ ಉತ್ತರಿಸಬೇಕು ಎಂದರು. ನಮ್ಮ ನಮ್ಮ ಸಂಘ ಸಂಸ್ಥೆಗಳ ಜವಾಬ್ದಾರಿಯನ್ನು ತಿಳಿದುಕೊಳ್ಳಬೇಕು ಕಾವಾಗಬೇಕು ಸಂಸ್ಕಾರ ತುಂಬಿದ ಶಿಕ್ಷಣ ವಾಗಬೇಕು ಕೇವಲ ಹಣ ಮಾತ್ರವಲ್ಲ ಸಮಾಜಕ್ಕೆ ಎಲ್ಲಾ ಪ್ರಾಣಿ-ಪಕ್ಷಿಗಳ ಜೊತೆಯಲ್ಲಿ ಬೆರೆಯಬೇಕು ಮತ್ತು ಎಲ್ಲರಿಗೂ ಸಹಾಯ ಮಾಡುವ ಜೀವನ ಪದ್ಧತಿ ನಮ್ಮದಾಗಬೇಕು ಎಂದರು.
ಒಬ್ಬ ನಗರ  ಸಭಾ ಸದಸ್ಯನಿಂದ ಎಲ್ಲವೂ ಮಾಡಲು ಸಾಧ್ಯವಿಲ್ಲ.  ಅವರ ಜೊತೆಯಲ್ಲಿ ನಾವೆಲ್ಲಾ ಕೈಜೋಡಿಸುವ ಅಗತ್ಯವಿದೆ.  ಆಗ ಮಾತ್ರ ನಮ್ಮ ವಾರ್ಡ್ ಬಲಿಷ್ಠವಾಗವ ಮೂಲಕ ರಾಜ್ಯಕ್ಕೆ ಮತ್ತು ದೇಶಕ್ಕೆ ಮಾದರಿಯಾಗಲು ಸಾಧ್ಯವಿದೆ ಎಂದು ನಗರಸಭಾ ಸದಸ್ಯರಾದ ವಿಜಯ್ ಕೊಡವೂರು ತಿಳಿಸಿದರು.ಈ ಸಂದರ್ಭದಲ್ಲಿ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿದಂತಹ ಕರಕುಶಲಕರ್ಮಿಗಳ ಪರಿಶಿಷ್ಟ ಪಂಗಡದ ಹಿರಿಯರಾದ ಶ್ರೀ ಕಾವೇರಿಯಮ್ಮ , ಎಂ ಸುರೇಶ್ ಕೊಡವೂರು, ತಾರಾನಾಥ್ ಶೆಟ್ಟಿ ಗರ್ಡೆ, ಸುಧಾಕರ್ ಲಕ್ಷಣ್ಯ, ಗೋವಿಂದ ಐತಾಳ್, ಟಿ.ಎಸ್. ಕಾರಂತ್ ಕೊಡವೂರು , ಹರೀಶ್ ಕೊಪ್ಪಲ ತೋಟ, ಕಾಳು ಶೇರಿಗಾರ್, ನಾರಾಯಣ ಬಳ್ಳಾಲ್, ವಿಜಯ್ ಬಂಗೇರ, ಮತ್ತಿತರರು ಉಪಸ್ಥಿತರಿದ್ದರು.

ವಾರ್ಡ್ ಅಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ಪ್ರಭಾತ್ ಸ್ವಾಗತಿಸಿ, ಪ್ರಧಾನ ಕಾರ್ಯದರ್ಶಿ ಅಮಿತಿ ಗರ್ಡೆ ವಂದಿಸಿದರು. ಈ ಸಂದರ್ಭದಲ್ಲಿ ವಾರ್ಡ್ ಅಭಿವೃದ್ಧಿ ಸಮಿತಿಯ ಹೊಸ ಸಮಿತಿ ರಚನೆಯಾಗಿದ್ದು, ಈ ಸಂದರ್ಭದಲ್ಲಿ ಮುಂದಿನ ವಾರ್ಡ್ ಅಭಿವೃದ್ಧಿ ಸಮಿತಿಯ ಅಧ್ಯಕ್ಷರನ್ನು ಮತ್ತು ಎಲ್ಲಾ ಸದಸ್ಯರುಗಳು ಶಾಲು ಧರಿಸಿ ಸ್ವಾಗತಿಸಲಾಯಿತು.
 
 
 
 
 
 
 
 
 
 
 

Leave a Reply