Janardhan Kodavoor/ Team KaravaliXpress
26.6 C
Udupi
Monday, January 30, 2023
Sathyanatha Stores Brahmavara

ಕೊಡವೂರು : ವಾರ್ಷಿಕ ಕ್ರೀಡಾಕೂಟ

ಕೊಡವೂರು ಹಳೆ ವಿದ್ಯಾರ್ಥಿ ಸಂಘ ಹಾಗು ಯುವಕ ಸಂಘ ಇದರ 58 ನೇ ವಾರ್ಷಿಕ ಕ್ರೀಡಾಕೂಟವು ಡಿ.7 ರಂದು ಸ್ಥಳೀಯ ಶಾಲಾ ಮೈದಾನದಲ್ಲಿ ಜರುಗಿತು

   ಕರಾವಳಿ ಕಾವಲು ಪಡೆಯ ನಿರೀಕ್ಷಕ ಪ್ರಮೋದ್ ಕುಮಾರ್ ಇವರು ಪಾರಿವಾಳವನ್ನು ಮೇಲಕ್ಕೆ ಹಾರಿ ಬಿಡುವುದರ ಮೂಲಕ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಕ್ರೀಡೆ ಮನುಷ್ಯನನ್ನು ಕ್ರಿಯಾಶೀಲನನ್ನಾಗಿಸಿ,ಆತನ ಬದುಕು ಸುಂದರವಾಗಿ ರೂಪುಗೊಳ್ಳುವಂತೆ ಮಾಡುವುದಲ್ಲದೆ ಭೇದಭಾವಗಳನ್ನು ತೊಡೆದು ಹಾಕುತ್ತದೆ.ಹಾಗೆಯೇ ಕ್ರೀಡಾ ಮನೋಭಾವದಿಂದ ಸೋಲು ಗೆಲುವುಗಳನ್ನು ಸಮಾನವಾಗಿ ಸ್ವೀಕರಿಸುವಂತೆ ಮಾಡಿ ಆತ್ಮಸ್ಥೈರ್ಯವನ್ನು ಉದ್ದೀಪನಗೊಳಿಸುತ್ತದೆ ಎಂದರು.

ನಗರಸಭಾ ಸದಸ್ಯ ವಿಜಯ ಕೊಡವೂರು, ಉಡುಪಿ ಬ್ಲಾಕ್ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಮಮತಾ ಶೆಟ್ಟಿ,ಶ್ರೀ ಶಂಕರನಾರಾಯಣ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಟಿ.ರಾಘವೇಂದ್ರ ರಾವ್, ಕೊಡವೂರು ವ್ಯ.ಸೇ. ಸಂಘದ ಅಧ್ಯಕ್ಷ ನಾರಾಯಣ ಬಲ್ಲಾಳ್, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ರಾಧಾಕೃಷ್ಣ ಪೈ,ನಗರಸಭಾ ಮಾಜಿ ಅಧ್ಯಕ್ಷೆ ಮೀನಾಕ್ಷಿ ಮಾಧವ, ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ಅಧ್ಯಕ್ಷ ಕೃಷ್ಣ ದೇವಾಡಿಗ ಸ್ಥಳೀಯ ಗಣ್ಯರಾದ ವಾದಿರಾಜ ಸಾಲ್ಯಾನ್ ಉದ್ದಿನಹಿತ್ಲು,ಭಾಸ್ಕರ ಪಾಲನ್ ಬಾಚನಬೈಲು, ಶ್ರೀನಿವಾಸ ಬಾಯರಿ,ರತ್ನಾಕರ್ ಅಮೀನ್, ಹರೀಶ್ ಕೊಡವೂರು, ಕೃಷ್ಣ .ಎಸ್ ಅಮೀನ್ ರಾಯರತೋಟ,ಶೇಖರ ಮಾಬ್ಯಾನ್,ಶೈಲಜಾ, ಅಶೋಕ್ ಶೆಟ್ಟಿಗಾರ್, ಶರತ್ ಚಂದರ್ , ಉಪಸ್ಥಿತರಿದ್ದರು.ನೂರಕ್ಕೂ ಅಧಿಕ ಕ್ರೀಡಾಳುಗಳು ವಿವಿಧ ಸ್ಪರ್ಧೆ ಗಳಲ್ಲಿ ಭಾಗವಹಿಸಿದರು.ಕ್ರೀಡಾಕೂಟ ಆರಂಭದ ಮುನ್ನ ಸ್ಥಳೀಯ ದೇವಾಲಯದ ಮುಂಭಾಗದಿಂದ ಶಾಲಾ ಮೈದಾನ ದವರೆಗೆ ಕ್ರೀಡಾಪಥ ಸಂಚಲನ ನಡೆಯಿತು.

ಯುವಕ ಸಂಘದ ಅಧ್ಯಕ್ಷ ಪ್ರಭಾತ್ ಕೋಟ್ಯಾನ್ ಸ್ವಾಗತಿಸಿದರು.ಕಾರ್ಯದರ್ಶಿ ಜಗದೀಶ್ ಶೆಟ್ಟಿ ವಂದಿಸಿದರು.ಹಳೆವಿದ್ಯಾರ್ಥಿ ಸಂಘದ ಅಧ್ಯಕ್ಷ ಸತೀಶ್ ಕೊಡವೂರು ನಿರೂಪಿಸಿದರು.

- Advertisement -

ಸಂಬಂಧಿತ ಸುದ್ದಿ

Leave a Reply

ಛಾಯಾಂಕಣ

ಇತ್ತೀಚಿನ ಸುದ್ದಿ

error: Content is protected !!