ಕೊಡವೂರು ಯಶಸ್ವಿ ಬಂದ್

ಹಿಂದೂ ಕಾರ್ಯಕರ್ತ ದೇಶ ಧರ್ಮದ ಉಳಿವಿಗಾಗಿ ಕೆಲಸ ಮಾಡುವ ಪ್ರವೀಣ್ ನೆಟ್ಟಾರ್ ಅವರ ಕೊಲೆಯನ್ನು ಖಂಡಿಸಿ ಕೊಡವೂರಿನ ಗ್ರಾಮಸ್ಥರು ಸ್ವಯಂ ಇಚ್ಛೆಯಿಂದ ಕೊಡವೂರು ಬಂದ್ ಮಾಡಿರುತ್ತಾರೆ.

ಪ್ರತಿ ಸಮಯವೂ ಈ ರೀತಿಯ ಘಟನೆಗಳಾದಾಗ ಖಂಡಿಸುತ್ತೇವೆ, ಪ್ರತಿಭಟನೆ ಮಾಡುತ್ತೇವೆ, ಉಗ್ರ ಹೋರಾಟ ಮಾಡುತ್ತೇವೆ ಎಂದೆಲ್ಲಾ ಮಾತುಗಳನ್ನು ಆಡಿ ಸುಸ್ತಾಗಿದ್ದೇವೆ. ಆದರೆ ಇನ್ನು ಮುಂದಿನ ದಿನಗಳಲ್ಲಿ ಈ ರೀತಿ ಆಗಬಾರದು ಅಂತಾದರೆ ನಾವು ಬೀದಿಗಿಳಿದು ಅವಶ್ಯಕತೆ ಇದೆ. ಅದಕ್ಕೆ ಪೂರ್ವ ಸೂಚನೆಯಾಗಿ ನಾವು ದಿನಾಂಕ 30-07-2022 ರ ಶನಿವಾರ ಬಂದ್ ಗೆ ಕರೆಕೊಟ್ಟು ನಾವೇ ಸ್ವಯಂಘೋಷಿತವಾಗಿ ಅಂಗಡಿ ಮುಂಗಟ್ಟುಗಳನ್ನು ಬಂದು ಮಾಡಿರುತ್ತೇವೆ ಎಂದು ಕೊಡವೂರಿನ ಹಿರಿಯರು ಮತ್ತು ಅಂಗಡಿ ಮಾಲಕರು ಇದಕ್ಕೆ ಧ್ವನಿ ಆಗಿರುತ್ತಾರೆ.

ರಿಕ್ಷಾ ಚಾಲಕರು ಮತ್ತು ಮಾಲೀಕರು ಈ ಬಂದ್ ಗೆ ಕೈ ಜೋಡಿಸಿರುತ್ತಾರೆ. ಈ ಹೋರಾಟಕ್ಕೆ ನ್ಯಾಯ ಸಿಕ್ಕಿಲ್ಲವಾದರೆ ಖಂಡಿತವಾಗಿಯೂ ಉಡುಪಿ ಬಂದ್ ಗೆ ನಾವು ಕರೆ ಕೊಟ್ಟು ನಾವು ಸೇರಿಕೊಳ್ಳುತ್ತವೆ ಎಂದು ಕೊಡವೂರಿನ ಸಮಸ್ತ ನಾಗರಿಕರು ತಿಳಿಸಿದ್ದಾರೆ.

Leave a Reply