ಕೊಡವೂರಿನಲ್ಲಿ ಆಟಿದ ಅಟ್ಟಿಲ್ ಸಂಭ್ರಮ

‘ಸಾಂಸ್ಕೃತಿಕ ಸಂಘಟನೆ ಸುಮನಸಾ ಕೊಡವೂರು ವತಿಯಿಂದ ಸುಮನಸಾದ ಕಾರ್ಯಾಲಯದಲ್ಲಿ ಆಟಿದ ಒಟ್ಟಟ್ಟಿಲ್ ಕಾರ್ಯಕ್ರಮ ರವಿವಾರ ಸಂಭ್ರಮದಿAದ ನಡೆಯಿತು. 

ಪತ್ರೊಡೆ, ತೊಜಂಕ್ ಬೋಳೆ ಸುಕ್ಕ, ತಿಮರೆ ಚಟ್ನಿ, ಕುಡುತ ಸಾರ್, ಎಟ್ಟಿ ಚಟ್ನಿ, ರ‍್ವೊಳಿ ತೊಪ್ಪು ದೋಸೆ, ಮಾನಕ್ನೂಂಡೆ, ತೇಟ್ಲ ಗಸಿ, ಪೆಲಕಾಯಿ ಗಟ್ಟಿ, ಉರ್ಪೆಲ್ ಅರಿತ ಪುಂಡಿ, ಉರ್ಪೆಲ್ ಅರಿತ ನುಪ್ಪು, ಬೊಳಂತೆರಿತ ಪುಂಡಿ, ಕೋರಿ ಸುಕ್ಕ, ಕೊಯೆಲ್ ಸುಕ್ಕ, ಕೋರಿ ಸಾರ್, ಕಡ್ಲೆಬೇಳೆ ಪಾಯಸ, ಮೆಂತೆ ಗಂಜಿ, ಉಪ್ಪಡ್ ಪಚ್ಚೀರ್, ಅತ್ತರಸ, ಬಜಿಲ್ ಕೋರಿ.. ಹೀಗೆ ತುಳುನಾಡಿನಲ್ಲಿ ಆಟಿ (ಆಷಾಢ) ತಿಂಗಳಿನಲ್ಲಿ ಹಿಂದೆ ಮಾಡುತ್ತಿದ್ದ ಸುಮಾರು 21 ಬಗೆಯ ಖಾದ್ಯಗಳು ಹಾಗೂ ಇತ್ತೀಚಿನ ಅಡುಗೆ ಎರಡೂ ರೀತಿಯಲ್ಲಿ ಮಾಡಲಾಯಿತು.

ಸುಮನಸಾ ಸಾಂಸ್ಕೃತಿಕ ಸಂಘಟನೆಯ ಹೆಣ್ಣು ಮಕ್ಕಳೇ ಸೇರಿ ಅಡುಗೆ ಮಾಡಿ ಬಡಿಸಿದರು. ಸುಮನಸಾ ಬಳಗ ಎಲ್ಲ ಸದಸ್ಯರು ಈ ಭಿನ್ನ ರುಚಿಯನ್ನು ಉಂಡು ಖುಷಿ ಪಟ್ಟರು. ಗೌರವಾಧ್ಯಕ್ಷ ಎಮ್.ಎಸ್.ಭಟ್ ಹಾಗೂ ಅಧ್ಯಕ್ಷ ಪ್ರಕಾಶ್ ಜಿ. ಕೊಡವೂರು ಅಟ್ಟಿಲ್‌ದ ಅಟ್ಟಣೆಗೆ ಚಾಲನೆ ನೀಡಿದರು. ಆಟಿ ತಿಂಗಳ ಹಿಂದಿನ ಜೀವನ ಶೈಲಿಯ ಉದ್ದೇಶಗಳ ಬಗೆ ಮಾಹಿತಿ ನೀಡದರು. ಬಳಿಕ ಎಲ್ಲರೂ ವಿವಿಧ ಮನರಂಜನಾ ಕಾರ್ಯಕ್ರಮಗಳಲ್ಲಿ ಭಾಗವಹಿಸಿದರು. 

ಸುಮನಸಾ ಸಂಚಾಲಕ ಭಾಸ್ಕರ್ ಪಾಲನ್ ಬಾಚನಬೈಲು , ಪ್ರಧಾನ ಕಾರ್ಯದರ್ಶಿ ಚಂದ್ರಕಾAತ ಕುಂದರ್ ಸಹಿತ ಅನೇಕರು ಭಾಗವಹಿಸಿ ಮೆಚ್ಚುಗೆ ವ್ಯಕ್ತಪಡಿಸಿದರು. ಉಪಾಧ್ಯ

Leave a Reply