ಕಸ್ತೂರ್ಬಾ ಆಸ್ಪತ್ರೆ, ಮಣಿಪಾಲಕ್ಕೆ ಸಿ ಎ ಎಚ್ ಒ – 3ಎಂ – ಸಿ ಎಸ್ ಎಸ್ ಡಿ -ಎ ಸಿ ಇ ಪ್ರಮಾಣೀಕರಣ

ಮಣಿಪಾಲ, 17ನೇ ಜೂನ್ 2022: ಕಸ್ತೂರ್ಬಾ ಆಸ್ಪತ್ರೆ, ಮಣಿಪಾಲಕ್ಕೆ ಸಿ ಎ ಎಚ್ ಒ – 3ಎಂ – ಸಿ ಎಸ್ ಎಸ್ ಡಿ -ಎ ಸಿ ಇ ಪ್ರಮಾಣೀಕರಣ ದೊರತಿದೆ . ಆರೋಗ್ಯ ಸೇವೆಗಳ ಗುಣಮಟ್ಟ ಮತ್ತು ಸುರಕ್ಷತೆಯನ್ನು ನಿರಂತರವಾಗಿ ಸುಧಾರಿಸುವ ಗುರಿಯೊಂದಿಗೆ ವಿವಿಧ ಆರೋಗ್ಯ ಸೌಲಭ್ಯಗಳೊಂದಿಗೆ ತೊಡಗಿಸಿಕೊಂಡಿರುವ ಲಾಭೋದ್ದೇಶವಿಲ್ಲದ ಸಂಸ್ಥೆಯಾದ ಮಾನ್ಯತೆ ಪಡೆದ ಹೆಲ್ತ್‌ಕೇರ್ ಸಂಸ್ಥೆಗಳ ಒಕ್ಕೂಟ (CAHO) ಸಂಘವು ಗುಣಮಟ್ಟದ ಸುಧಾರಣೆಯ ಉಪಕ್ರಮವಾಗಿ ಜಾಗೃತಿ ಶ್ರೇಷ್ಠತೆಅನುಸರಣೆ ಜಾಗೃತಿ (ACE) ಕಾರ್ಯಕ್ರಮವನ್ನು ಪ್ರಾರಂಭಿಸಿದೆ. ಈ ಉಪಕ್ರಮದಲ್ಲಿ ತಾಂತ್ರಿಕ ಮಾರ್ಗದರ್ಶನ ಪಾಲುದಾರರಾಗಿ ‘3ಎಂ ಭಾರತ’ ಕಾರ್ಯನಿರ್ವಹಿಸುತ್ತಿದೆ.

ಮಾಹೆ ಮಣಿಪಾಲದ ಸಹ ಕುಲಾಧಿಪತಿ ಡಾ.ಎಚ್.ಎಸ್. ಬಲ್ಲಾಳ್ ಮತ್ತು ಮಾಹೆ ಮಣಿಪಾಲದ ಸಹ ಉಪಕುಲಪತಿ (ಆರೋಗ್ಯ ಮತ್ತು ದಂತ ವಿಜ್ಞಾನ) ಡಾ.ಪಿ.ಎಲ್.ಎನ್.ಜಿ.ರಾವ್ ಅವರು ಜಂಟಿಯಾಗಿ ಕಸ್ತೂರ್ಬಾ ಆಸ್ಪತ್ರೆ, ಮಣಿಪಾಲದ ವೈದ್ಯಕೀಯ ಅಧೀಕ್ಷಕ ಡಾ.ಅವಿನಾಶ್ ಶೆಟ್ಟಿ ಮತ್ತು ಆಸ್ಪತ್ರೆ ಸೋಂಕು ನಿಯಂತ್ರಣ ಸಮಿತಿ ಮುಖ್ಯಸ್ಥರಾದ ಡಾ.ಮುರಳೀಧರ ವರ್ಮ ಮತ್ತು ಗುಣಮಟ್ಟ ಅನುಷ್ಠಾನ ಸಲಹೆಗಾರರಾದ ಡಾ ಸುನೀಲ್ ಸಿ ಮುಂಡ್ಕೂರ್ ಅವರಿಗೆ ಪ್ರಮಾಣಪತ್ರವನ್ನು ಹಸ್ತಾಂತರಿಸಿ ಇಡೀ ತಂಡವನ್ನು ಅಭಿನಂದಿಸಿದರು. ಈ ಸಂದರ್ಭದಲ್ಲಿ ಮಾಹೆ ಮಣಿಪಾಲದ ಸಹ ಉಪ ಕುಲಪತಿ (ಆರೋಗ್ಯ ವಿಜ್ಞಾನ) ಡಾ ವೆಂಕಟ್ರಾಯ ಪ್ರಭು, ಕಸ್ತೂರ್ಬಾ ಆಸ್ಪತ್ರೆಯ ಸಿ ಒ ಒ ಶ್ರೀ ಸಿ ಜಿ ಮುತ್ತಣ್ಣ , ಸಿಎಸ್‌ಎಸ್‌ಡಿ ಸಿಬ್ಬಂದಿ ಮತ್ತು ಆಸ್ಪತ್ರೆಯ ನಿರ್ವಹಣಾ ಸಿಬ್ಬಂದಿಗಳು ಉಪಸ್ಥಿತರಿದ್ದರು.

ತಯಾರಿಕೆಯ ಭಾಗವಾಗಿ, ಆಸ್ಪತ್ರೆಯ ಸೆಂಟ್ರಲ್ ಸ್ಟೀರಯ್ಲ್ ಸಪ್ಲೈ ಡಿಪಾರ್ಟ್ ಮೆಂಟ್ (ಸಿ ಎಸ್ ಎಸ್ ಡಿ) ವಿಭಾಗವು ಮೊದಲಿಗೆ ಸ್ವಯಂ-ಮೌಲ್ಯಮಾಪನ ಮಾಡಿಕೊಂಡಿತು, ನಂತರ 26ನೇ ಅಕ್ಟೋಬರ್ 2021 ರಂದು ವರ್ಚುವಲ್ ಆಡಿಟ್ ಮೂಲಕ ಸುಧಾರಣೆ ಆಗ ಬೇಕಾದುದನ್ನು ಗುರುತಿಸಲಾಯಿತು . ಮುಂದಿನ ಆರು ತಿಂಗಳ ಅವಧಿಯಲ್ಲಿ, ತಾಂತ್ರಿಕ ಮತ್ತು ಶುಶ್ರೂಷಾ ಸಿಬ್ಬಂದಿಗಳು ಮೂಲಭೂತ ಮತ್ತು ಸುಧಾರಿತ ಕೋರ್ಸ್ ಪ್ರಮಾಣೀಕರಣಕ್ಕೆ ಒಳಗಾಗಿದ್ದರು ಮತ್ತು ಅವಶ್ಯ ಪ್ರಕ್ರಿಯೆಗಳ ಸುಧಾರಣೆಗಳನ್ನು ಮಾಡಲಾಯಿತು. ಅಂತಿಮ ಭೌತಿಕ ಪರಿಶೀಲನೆ ಅನ್ನು 5 ನೇ ಮಾರ್ಚ್ 2022 ರಂದು ನಡೆಸಲಾಯಿತು ಮತ್ತು ಆಸ್ಪತ್ರೆಯು ದೊಡ್ಡ ಆರೋಗ್ಯ ಸಂಸ್ಥೆ ಗಳ ವಿಭಾಗದಲ್ಲಿ ಪ್ರಮಾಣೀಕರಣಕ್ಕಾಗಿ ಅರ್ಹತಾ ಅಂಕವನ್ನು ಸಾಧಿಸಲು ಯಶಸ್ವಿಯಾಯಿತು. ಕಸ್ತೂರ್ಬಾ ಆಸ್ಪತ್ರೆ, ಮಣಿಪಾಲವು 3ಎಂ -ಸಿ ಎ ಎಚ್ ಒ – ಸಿ ಎಸ್ ಎಸ್ ಡಿ- ಎ ಸಿ ಇ ಪ್ರಮಾಣೀಕರಣ ಪಡೆದ ಅತೀ ದೊಡ್ಡ ಬೋಧನಾ ಆಸ್ಪತ್ರೆಯಾಗಿದೆ.

 
 
 
 
 
 
 
 
 

Leave a Reply