Janardhan Kodavoor/ Team KaravaliXpress
29.6 C
Udupi
Saturday, July 2, 2022
Sathyanatha Stores Brahmavara

ತಂಬಾಕಿನ ಬಂಧನ-ಪರಿಸರದ ರೋಧನ- ವಿಶ್ವ ತಂಬಾಕು ರಹಿತ ದಿನ-2022

ಮಣಿಪಾಲ: ವಿಶ್ವ ತಂಬಾಕು ರಹಿತ ದಿನಾಚರಣೆ-2022ರ ಅಂಗವಾಗಿ ಸಮುದಾಯ ವೈದ್ಯಕೀಯ ವಿಭಾಗ ಕೆ.ಎಂ.ಸಿ‌ ಮಣಿಪಾಲ ಇವರ ಸಹಯೋಗದೊಂದಿಗೆ ಕಲಾವಿದ ಶ್ರೀನಾಥ್ ಮಣಿಪಾಲ ರಚಿಸಿದ ತಂಬಾಕು ಜಾಗೃತಿ ಪ್ರತಿಷ್ಟಾಪನಾ ಕಲಾಕೃತಿಯ ಅನಾವರಣ ಮಂಗಳವಾರ ನಡೆಯಿತು.

ಕೆ.ಎಂ.ಸಿ ಯ ಇಂಟರ್ಯಾಕ್ಟ್ ಆವರಣದಲ್ಲಿ ನಡೆದ ಕಾರ್ಯಕ್ರ‌ಮದಲ್ಲಿ ಕೆ.ಎಂ.ಸಿ ಯ ಡೀನ್ ಡಾ.ಶರತ್ ರಾವ್ ಹಾಗೂ ಕಸ್ತೂರ್ಬಾ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ.ಅವಿನಾಶ್ ಶೆಟ್ಟಿ ವೈದ್ಯಕೀಯ ವಿದ್ಯಾರ್ಥಿಗಳ ಸಮ್ಮುಖದಲ್ಲಿ ‘ತಂಬಾಕಿನ ಬಂಧನ-ಪರಿಸರದ ರೋಧನ’ ಎಂಬ ತಂಬಾಕು ಜಾಗೃತಿ ಕಲಾಕೃತಿಯನ್ನು ಅನಾವರಣಗೊಳಿಸಿದರು.

ಸಮುದಾಯ ವೈದ್ಯಕೀಯ ವಿಭಾಗದ ಮುಖ್ಯಸ್ಥ ಡಾ.ಅಶ್ವಿನಿ ಕುಮಾರ್ ಹಾಗೂ ವಿಭಾಗದ ಪ್ರಾಧ್ಯಾಪಕರು, ಸಿಬ್ಬಂದಿಗಳು ಉಪಸ್ಥಿತರಿದ್ದರು.
ಸಮುದಾಯ ವೈದ್ಯಕೀಯ ವಿಭಾಗದ ಸಹ ಪ್ರಾಧ್ಯಾಪಕ, ಜಿಲ್ಲಾ ತಂಬಾಕು ನಿಯಂತ್ರಣ ವಿಭಾಗದ ಸದಸ್ಯ ಡಾ.ಮುರುಳೀಧರ್ ಕುಲಕರ್ಣಿ ಕಲಾಕೃತಿಯ ಕುರಿತು ಮಾಹಿತಿ ನೀಡಿದರು.

- Advertisement -

ಸಂಬಂಧಿತ ಸುದ್ದಿ

Leave a Reply

ಛಾಯಾಂಕಣ

ಇತ್ತೀಚಿನ ಸುದ್ದಿ

error: Content is protected !!