ಮಣಿಪಾಲದ ಕಸ್ತೂರ್ಬಾ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಸರ್ಜಿಕಲ್ ಗ್ಯಾಸ್ಟ್ರೋಎಂಟರಾಲಜಿ ವಿಭಾಗದ   ಉದ್ಘಾಟನೆ

ಮಣಿಪಾಲ, 16ನೇ ಮಾರ್ಚ್ 2022: ಮಣಿಪಾಲದ ಕಸ್ತೂರ್ಬಾ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಸರ್ಜಿಕಲ್ ಗ್ಯಾಸ್ಟ್ರೋಎಂಟರಾಲಜಿ ವಿಭಾಗವನ್ನು ಉದ್ಘಾಟಿಸಲಾಯಿತು. ಡಾ ವಿವೇಕ್ ಮಂಗ್ಲಾ, ನಿರ್ದೇಶಕರು  – ಜಠರಕರುಳು  ಮತ್ತು ಹೆಪಟೊಪ್ಯಾಂಕ್ರಿಯಾಟೋಬಿಲಿಯರಿ, ಸರ್ಜಿಕಲ್ ಆಂಕೊಲಾಜಿ, ಮ್ಯಾಕ್ಸ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ, ನವದೆಹಲಿ ಅವರು ಉದ್ಘಾಟಿಸಿದರು.  ಲೆಫ್ಟಿನೆಂಟ್ ಜನರಲ್ (ಡಾ) ಎಂ ಡಿ ವೆಂಕಟೇಶ್, ಉಪಕುಲಪತಿ, ಮಾಹೆ, ಮಣಿಪಾಲ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಡಾ.ಪಿ.ಎಲ್.ಎನ್.ಜಿ.ರಾವ್, ಸಹ ಉಪಕುಲಪತಿ  (ವೈದ್ಯಕೀಯ ಮತ್ತು ದಂತ ವಿಜ್ಞಾನ), ಮಾಹೆ ಮಣಿಪಾಲ, ಡಾ. ನಾಗರಾಜ್ ಪಾಲಂಕರ್ ಮುಖ್ಯ ಸಲಹೆಗಾರರು ಮತ್ತು ಮುಖ್ಯಸ್ಥರು, ಸರ್ಜಿಕಲ್ ಗ್ಯಾಸ್ಟ್ರೋಎಂಟರಾಲಜಿ ವಿಭಾಗ, ಮಣಿಪಾಲ ಆಸ್ಪತ್ರೆ, ಬೆಂಗಳೂರು ಇವರು ಕಾರ್ಯಕ್ರಮದ ಗೌರವಾನ್ವಿತ ಅತಿಥಿಗಳಾಗಿದ್ದರು. ಕೆಎಂಸಿ ಡೀನ್ ಡಾ.ಶರತ್ ಕುಮಾರ್ ರಾವ್, ಕಸ್ತೂರಬಾ ಆಸ್ಪತ್ರೆ ಮಣಿಪಾಲದ ವೈದ್ಯಕೀಯ ಅಧೀಕ್ಷಕ ಡಾ.ಅವಿನಾಶ್ ಶೆಟ್ಟಿ, ಸರ್ಜಿಕಲ್ ಗ್ಯಾಸ್ಟ್ರೋಎಂಟರಾಲಜಿ ವಿಭಾಗದ ಮುಖ್ಯಸ್ಥರಾದ  ಡಾ.ಭರತ್ ಕೆ.ಭಟ್, ಸರ್ಜಿಕಲ್ ಗ್ಯಾಸ್ಟ್ರೋಎಂಟರಾಲಜಿ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ.ಜೆಗನ್ ಮೋಹನ್ ಎಸ್ ಉಪಸ್ಥಿತರಿದ್ದರು.
ತಮ್ಮ ಉದ್ಘಾಟನಾ ಭಾಷಣದಲ್ಲಿ ಡಾ ವಿವೇಕ್ ಮಂಗಲ್  ಅವರು, “ಸರ್ಜಿಕಲ್ ಗ್ಯಾಸ್ಟ್ರೋಎಂಟರಾಲಜಿ ವಿಭಾಗವು 1980 ರ ದಶಕದಲ್ಲಿ ಪ್ರಾರಂಭವಾಯಿತು, ಕ್ರಮೇಣ ಮೆಟ್ರೋ ನಗರಗಳಲ್ಲಿ ಅಭಿವೃದ್ಧಿಗೊಂಡಿತು. ಇಂದು ಮಣಿಪಾಲದಂತಹ ಸಣ್ಣ  ನಗರದಲ್ಲಿ  ಪ್ರಾರಂಭವಾಗುತ್ತಿರುವುದು  ತುಂಬಾ ಸಂತೋಷದ  ವಿಷಯವಾಗಿದೆ.   ಇದರಿಂದ  ಅಂಗಾಂಗ ಆಧಾರಿತ ವಿಶೇಷತೆಗಳಲ್ಲಿ ಒಂದಾದ ವಿಶೇಷ ವೈದ್ಯಕೀಯ ಸೌಲಭ್ಯವು  ಸಮಾಜದ  ಮನೆ ಬಾಗಿಲಲ್ಲಿ ದೊರೆತಂತಾಗಿದೆ” ಎಂದರು.

ಡಾ. ನಾಗರಾಜ್ ಪಾಲಂಕಾರ್  ಮಾತನಾಡಿ,  “ಕೆಎಂಸಿ ಆಸ್ಪತ್ರೆಯು   ಕರ್ನಾಟಕ ಮಾತ್ರವಲ್ಲದೆ ಕೇರಳ, ಗೋವಾ ಸೇರಿದಂತೆ ನೆರೆಯ ರಾಜ್ಯಗಳ ಜನತೆಗೆ ಆರೋಗ್ಯ ಸೇವೆ ಒದಗಿಸುತ್ತಿದೆ.    ಅಲ್ಲದೇ ಕೆಎಂಸಿ ಇತರ ಸಂಸ್ಥೆಗಳಂತಲ್ಲ, ಅದಕ್ಕೂ ಮಿಗಿಲಾಗಿ ಸಮಾಜಕ್ಕೆ ಹಲವಾರು ಸಾಮಾಜಿಕ ಪರಿಣಾಮ ಬೀರುವ ಕೆಲಸ ಮಾಡುತ್ತಿದೆ” ಎಂದರು

ಡಾ.ಪಿ.ಎಲ್.ಎನ್.ಜಿ.ರಾವ್ ಅವರು ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಯಲ್ಲಿ  ಹೊಸ ವಿಭಾಗಕ್ಕೆ ಕಾರಣರಾದ ಇಡೀ ತಂಡವನ್ನು ಅಭಿನಂದಿಸಿದರು ಮತ್ತು  ಮೊದಲಿನಿಂದಲೂ ಹೊಸ ಸೇವೆಗಳನ್ನು ಪ್ರಾರಂಭಿಸುವಲ್ಲಿ  ಮತ್ತು ಒದಗಿಸುವಲ್ಲಿ ಕೆಎಂಸಿ ಮುಂಚೂಣಿಯಲ್ಲಿದೆ ಎಂದು ಹೇಳಿದರು.

ಅಧ್ಯಕ್ಷೀಯ ಭಾಷಣದಲ್ಲಿ ಡಾ ವೆಂಕಟೇಶ್ ಅವರು ಹೊಸ ವಿಶೇಷ ವಿಭಾಗಗಳು  ಮತ್ತು ಉಪ ವಿಶೇಷ ವಿಭಾಗಗಳು  ಪ್ರಾರಂಭಿಸುವ ಪ್ರಾಮುಖ್ಯತೆಯ ಕುರಿತು ಮಾತನಾಡಿದರು ಮತ್ತು ಇಂತಹ ಉಪ ವಿಶೇಷ ವಿಭಾಗಗಳುಬೆಳೆಯಲು ಸಾಮಾನ್ಯ ವಿಶೇಷ ವಿಭಾಗಗಳು  ಮಾತೃ ಇಲಾಖೆಯಾಗಿದೆ ಮತ್ತು ಯಾವುದೇ ಉಪ ವಿಶೇಷ ವಿಭಾಗಗಳ  ಯಶಸ್ಸಿಗೆ ನಿವಾಸಿ ವೈದ್ಯರು  ಮತ್ತು ಶುಶ್ರೂಷಾ ಶಕ್ತಿಯು ಬಹಳ ಮುಖ್ಯ ಎಂದು ಹೇಳಿದರು.

ಕೆಎಂಸಿ ಮಣಿಪಾಲದ ಡೀನ್ ಡಾ.ಶರತ್ ಕುಮಾರ್ ಸ್ವಾಗತಿಸಿ, ಕಸ್ತೂರ್ಬಾ ಆಸ್ಪತ್ರೆ ಮಣಿಪಾಲದ ವೈದ್ಯಕೀಯ ಅಧೀಕ್ಷಕರಾದ  ಡಾ.ಅವಿನಾಶ್ ಶೆಟ್ಟಿ ವಂದಿಸಿದರು. ಡಾ. ಭರತ್ ಭಟ್ ವಿಭಾಗದ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದರು.  ಡಾ. ಶ್ರೀದೇವಿ ಕಾರ್ಯಕ್ರಮ ನಿರೂಪಿಸಿದರು. 

 
 
 
 
 
 
 
 
 
 
 

Leave a Reply