ಕೋಟ ಮಹಿಳಾ ಮಂಡಳದ 57 ನೇ ವಾರ್ಷಿಕೋತ್ಸವ ಕಾರ್ಯಕ್ರಮ

ಕೋಟ: ಸಮಾಜಮುಖಿ ಕಾರ್ಯಕ್ಷೇತ್ರದಲ್ಲಿ ಮಹಿಳೆ ಇಂದು ಮಂಚೂಣಿಗೆ ನಿಲ್ಲುತ್ತಿದ್ದಾರೆ. ಒರ್ವ ಗೃಹಿಣಿಯಾಗಿ, ತಾಯಿಯಾಗಿ ಸಮಾಜದ ಮುಖ್ಯವಾಹಿನಿಯಲ್ಲಿ ಗುರುತಿಸಿಕೊಂಡಿದ್ದಾಳೆ ಎಂದು ಕೋಟ ಅಮೃತೇಶ್ವರಿ ದೇವಳದ ಅಧ್ಯಕ್ಷ ಆನಂದ್ ಸಿ ಕುಂದರ್ ಹೇಳಿದ್ದಾರೆ.

ಕೋಟ ಮಹಿಳಾ ಮಂಡಳದ 57 ನೇ ವಾರ್ಷಿಕೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಸಾಕಷ್ಟು ವರ್ಷಗಳಿಂದ ಕ್ರಿಯಾಶೀಲ ಚಟುವಟಿಕೆಗಳಿಂದ ಕೂಡಿದ ಮಹಿಳಾ ಮಂಡಳ ತನ್ನ ಸಂಸ್ಥೆಯ ಬೆಳೆಯುವ ಜೊತೆಗೆ ಮಹಿಳೆಯರ ಸ್ವಾವಲಂಬಿ ಬದುಕಿಗೆ ಮುನ್ನುಡಿ ಬರೆಯುತ್ತಿದೆ. ಇದು ಸ್ವಾಗತಾರ್ಹ ಇಂಥಹ ಮಹಿಳಾ ಮಂಡಳಗಳು ಗ್ರಾಮ ಗ್ರಾಮಗಳಲ್ಲಿ ಹುಟ್ಟಿಕೊಳ್ಳುವುದರ ಜೊತೆಗೆ ಅಭಿವೃದ್ಧಿಕೆ ಪ್ರೇರಕವಾಗಲಿ ಎಂದು ಅಭಿಪ್ರಾಯಪಟ್ಟರು.

ಕಾರ್ಯಕ್ರಮದಲ್ಲಿ ಉಪನ್ಯಾಸಕಿ ,ಲೇಖಕಿ ಪಾರ್ವತಿ ಐತಾಳ್ ಮಾತನಾಡಿ ಸುಧಿರ್ಘ ಅವಧಿಯ ಮಹಿಳಾ ಮಂಡಳವೊಂದು ಈ ಗ್ರಾಮೀಣ ಭಾಗದಲ್ಲಿ ಕಾರ್ಯಾಚರಿಸುತ್ತಿರುವುದು ಅಚ್ಚರಿಪಡುವ ವಿಚಾರವಾಗಿದೆ.

 ಏಕೆಂದರೆ ಸ್ವಾತಂತ್ರ್ಯ ನಂತರ ಕಾಲಘಟ್ಟದಲ್ಲಿ ಮಹಿಳೆಯರ ಶ್ರೇಯೋಭಿವೃದ್ಧಿಗೆ ಟೊಂಕಕಟ್ಟಿ ಗ್ರಾಮ ಗ್ರಾಮಗಳಲ್ಲಿನ ಮಹಿಳೆಯರನ್ನು ಒಗ್ಗೂಡಿಸಿ ಸ್ವಾವಲಂಬಿ ಬದುಕಿನಡೆಗೆ ಮುನ್ನುಗ್ಗುತ್ತಿರುವುದು ಪ್ರಶಂಸನೀಯ,ಪಾಶ್ಚಿಮಾತ್ಯ ದೇಶಗಳಲ್ಲಿನ ಮಹಿಳೆಯರ ಬದಲಾವಣೆಯಿಂದ ನಮ್ಮ ದೇಶದಲ್ಲೂ ಇದರ ಕ್ರಾಂತಿ ಪಸರಿಸಿಕೊಂಡಿದೆ.ಈ ಮೂಲಕ ಮಹಿಳಾ ಮಂಡಳಗಳು ಹುಟ್ಟಿಕೊಳ್ಳಲು ಸಹಕಾರಿಯಾಗಿದೆ.

ಹಿಂದಿನ ಕಾಲಘಟ್ಟದಲ್ಲಿ ಮಹಿಳೆ ಮನೆಯಲ್ಲೆ ತಾಯ್ತನದ ಜೊತೆಗೆ ಗೃಹಿಣಿಯಾಗಿ ಪುರುಷ ಪ್ರಧಾನ ಸಮಾಜದಲ್ಲಿ ಹೊರಜಗತ್ತಿನಡೆಗೆ ಗುರುತಿಸಿಕೊಂಡಿರಲ್ಲಿಲ್ಲಾ ಆದರೆ ಇಂದು ಪುರುಷನಿಗೆ ಸಮಾನವಾಗಿ ಕಾರ್ಯನಿರ್ವಹಿಸುವ ಜೊತೆಗೆ ಎಲ್ಲಾ ಕ್ಷೇತ್ರದಲ್ಲೂ ಸೈ ಎನಿಸಿಕೊಂಡಿದ್ದಾಳೆ.

ಒಂದು ಸಂಸ್ಥೆ ಕಟ್ಟುವುದು ಸುಲಭ ಆದರೆ ಅದನ್ನು ನಿರಂತವಾಗಿ ಕೊಂಡ್ಯೋಯುವುದು ಕಷ್ಟಕರ ಈ ನಿಟ್ಟಿನಲ್ಲಿ ಸಮಾಜದ ಮುಖ್ಯವಾಹಿನಿಯಲ್ಲಿ ಕಾರ್ಯನಿರ್ವಹಿಸಿ ಎಲ್ಲರನ್ನು ಸಮಾನರಾಗಿ ಕೊಂಡ್ಯೊಯುವ ಕಾರ್ಯ ಶ್ಲಾಘನೀಯ ಎಂದು ಅಭಿಮತ ವ್ಯಕ್ತಪಡಿಸಿದರು.

ಮಹಿಳಾ ವಾರ್ಷಿತೋತ್ಸವದಲ್ಲಿ ಪುರುಷರನ್ನು ಗೌರವಿಸಲಾಯಿತು. ಶನಿವಾರ ನಡೆದ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿನ ಸಾಧಕ ಹಾಗೂ ಮಹಿಳಾ ಮಂಡಳದ ಅಭಿವೃದ್ಧಿಗೆ ಕೈಜೋಡಿಸಿದ ಮಹನಿಯರನ್ನು ಗುರುತಿಸಿ ಸನ್ಮಾನಿಸಲಾಯಿತು.

 ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ವೇ.ಮೂ.ಮಧುಸೂಧನ ಬಾಯಿರಿ, ಕೋಟದ ಸಾಮಾಜಿಕ ಕಾರ್ಯಕರ್ತ ಶ್ರೀಕಾಂತ್ ಶೆಣೈ, ಎಂ.ಸುಬ್ರಾಯ ಆಚಾರ್ಯ, ಆರೋಗ್ಯ ಕ್ಷೇತ್ರದಲ್ಲಿ ಹಿರಿಯ ವೈದ್ಯ ಡಾ.ಎಸ್ ಎನ್ ವಾದಿರಾಜ್,ಎ.ಪಿ.ಎಮ್.ಸಿ ಉಪಾಧ್ಯಕ್ಷ ಕೃಷ್ಣಪೂಜಾರಿ ಪಿ,ಕೋಟ ಗ್ರಾಮಪಂಚಾಯತ್ ಅಧ್ಯಕ್ಷ ಅಜಿತ್ ದೇವಾಡಿಗ,ಸಮಾಜಸೇವಕ ಆನಂದ್ ಸಿ ಕುಂದರ್, ಮಹಿಳಾ ಸಾಧಕಿಯರಾದ ಭಾರತೀ ಮಯ್ಯ,ಲೇಖಕಿ ಪಾರ್ವತಿ ಐತಾಳ್ ಇವರುಗಳನ್ನು ಗೌರವಿಸಲಾಯಿತು.

ಸಮಾರಂಭದ ಅಧ್ಯಕ್ಷತೆಯನ್ನು ಕೋಟ ಮಹಿಳಾಮಂಡಳ ಅಧ್ಯಕ್ಷೆ ಸುಶೀಲಸೋಮಶೇಖರ್ ವಹಿಸಿದ್ದರು. ಅಶಕ್ತ ಅನಾರೋಗ್ಯ ಪೀಡಿತರಿಗೆ ಸಹಾಯಹಸ್ತ ನೀಡಲಾಯಿತು. ಮಹಿಳಾ ಮಂಡಳದ ಉಪಾಧ್ಯಕ್ಷೆ ಗೀತಾ ಎ ಕುಂದರ್ ಉಪಸ್ಥಿತರಿದ್ದರು. ಮಹಿಳಾ ಮಂಡಳದ ಸುಜಾತ ಬಾಯಿರಿ,ವನೀತಾ ಉಪಾಧ್ಯ ಸನ್ಮಾನಪತ್ರ ವಾಚಿಸಿದರು. ಕಾರ್ಯಕ್ರಮವನ್ನು ಮಹಿಳಾ ಮಂಡಳದ ಕೋಶಾಧಿಕಾರಿ ಭಾಗ್ಯವಾದಿರಾಜ್ ನಿರೂಪಿಸಿದರು.

 
 
 
 
 
 
 
 
 
 
 

Leave a Reply