ಮೂರೂ ಕೃಷಿ ಕಾಯ್ದೆ ವಾಪಾಸ್ -ಅನ್ನದಾತನ ಹೋರಾಟಕ್ಕೆ ಸಿಕ್ಕ ಜಯ: ಗೀತಾ ವಾಗ್ಳೆ

ಕೇಂದ್ರದಲ್ಲಿರುವ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರವು ಈ ಮೊದಲು ಜಾರಿಗೆ ತರಲು ನಿರ್ಧರಿಸಿರುವ ಮೂರೂ ಕೃಷಿ ಕಾಯ್ದೆ ಗಳನ್ನು ವಾಪಾಸ್ ಪಡೆಯಲು ಕೊನೆಗೂ ನಿರ್ಧರಿಸಿರುವುದು ಸ್ವಾಗತಾರ್ಹ.ಇದು ಅನ್ನದಾತನ ಅವಿರತವಾದ ಹೋರಾಟಕ್ಕೆ ಸಂದ ಜಯ ಎಂಬುದಾಗಿ ಉಡುಪಿ ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ  ಗೀತಾ ವಾಗ್ಳೆ ಅಭಿಪ್ರಾಯ ಪಟ್ಟಿದ್ದಾರೆ.

ಉಳುವವನೇ ಹೊಲದೊಡೆಯ ಕಾನೂನನ್ನು ಜಾರಿಗೆ ತರುವುದರ ಮೂಲಕ ರೈತರ ನಾಡಿ ಮಿಡಿತವನ್ನು ಚೆನ್ನಾಗಿ ಅರಿತಿದ್ದ ಮಾಜಿ ಪ್ರಧಾನಿ ದಿ. ಇಂದಿರಾ ಗಾಂಧಿ ಅವರ ಜನ್ಮದಿನದಂದೇ ಈ ಕಾಯ್ದೆ ಗಳನ್ನು ವಾಪಾಸ್ ಪಡೆಯಲುನಿರ್ಧರಿಸಿರುವುದು ,ರೈತಹೋರಾಟಕ್ಕೆ ಬೆಂಬಲ ನೀಡುತ್ತಾ ಬಂದಿರುವ ಕಾಂಗ್ರೆಸ್ ಪಕ್ಷಕ್ಕೆ ಸಂತಸ ತಂದಿದೆ.ಆದರೆ ಕೇಂದ್ರ ಸರ್ಕಾರವು ಈ ವಿಷಯದಲ್ಲಿ ಅನುಸರಿಸಿರುವ ನಿರ್ಲಕ್ಷ್ಯ, ಬೇಜವಾಬ್ದಾರಿ ಹಾಗೂ ವಿಳಂಬ ಧೋರಣೆಗಳನ್ನು ಎಂದಿಗೂ ಮರೆಯುವಂತಿಲ್ಲ.

ಆರಂಭದಲ್ಲಿ ಭುಗಿಲೆದ್ದ ಆಕ್ರೋಶ,ರೈತರ ಸಾವು ನೋವುಗಳು,ಹೋರಾಟ ನಿರತ ರೈತರ ಮೇಲಿನ ಗೋಲಿಬಾರ್, ಲಾಠಿಚಾರ್ಜ್ ಗಳು,ರೈತರನ್ನು ಉಗ್ರವಾದಿಗಳೆಂದು ಕರೆದಿರುವ ವಿಚಾರ,ಮುಷ್ಕರದಲ್ಲಿ ನಿರತರಾದವರು ರೈತರೇ ಅಲ್ಲ ಎನ್ನುವ ವರೆಗೆ ಸರ್ಕಾರದ ಪ್ರತಿನಿಧಿಗಳು ಮುಂದುವರಿದಿದ್ದು ಇವೆಲ್ಲಾ ಸರ್ಕಾರಕ್ಕೆ ರೈತರ ಮೇಲೆ ಅದೆಷ್ಟು ಪ್ರೀತಿ,ಅಭಿಮಾನ,ಗೌರವಗಳು ಇವೆ ಎನ್ನುವುದಕ್ಕೆ ಕೆಲವು ಉದಾಹರಣೆಗಳಷ್ಟೇ.

ಇನ್ನೂ ಅದೆಷ್ಟೋ ವಿದ್ಯಮಾನಗಳ ಮೂಲಕ ಹೋರಾಟ ನಿರತ ರೈತರನ್ನು ದಮನಿಸುವ ಮಟ್ಟಕ್ಕೆ ಸರ್ಕಾರವು ಇಳಿದಿರುವುದು ಇದೀಗ ಇತಿಹಾಸ.ಏನೇ ಇರಲಿ,ಕೊನೆಗೂ ಸರ್ಕಾರ ಎಚ್ಚೆತ್ತುಕೊಂಡು ಈ ಮೂರೂ ಕೃಷಿ ಕಾಯ್ದೆ ಗಳನ್ನು ವಾಪಾಸ್ ಪಡೆಯಲು ನಿರ್ಧರಿಸಿದೆ.ಈ ನಿರ್ಧಾರವನ್ನು ಬಹಳಷ್ಟು ಹಿಂದೆಯೇ ತೆಗೆದುಕೊಂಡಿದ್ದರೆ ಅನೇಕ ರೈತರು ,ಹಾಗೂ ಅವರ ಕುಟುಂಬದವರ ಪ್ರಾಣಗಳು ಉಳಿಯುವುದು ಸಾಧ್ಯವಾಗುತ್ತಿತ್ತೇನೋ.ಹೆಚ್ಚು ಕಡಿಮೆ ಒಂದು ವರ್ಷದಿಂದ ನಡೆಯುತ್ತಿದ್ದ ರೈತರ ಹೋರಾಟಕ್ಕೆ ಕ್ಯಾರೇ ಅನ್ನದ ಕೇಂದ್ರ ಸರ್ಕಾರಕ್ಕೆ ಈಗಲಾದರೂ ಜ್ಞಾನೋದಯ ವಾಗಿರುವುದು ಸಂತಸ ತಂದಿದೆ.

ಆದರೆ ರೈತರು ನಡೆಸಿರುವ ಈ ಹೋರಾಟದಿಂದ ಸರ್ಕಾರವು ಒಂದು ವಿಚಾರವನ್ನು ನೆನಪಿಡಬೇಕು.ಯಾವುದೇ ಕಾಯ್ದೆ ಗಳನ್ನು ಅದರ ಸಾಧಕ ಬಾಧಕಗಳ ಬಗ್ಗೆ ಯೋಚಿಸದೇ, ಮನಬಂದಂತೆ ಏಕಾಏಕಿ ಜಾರಿಗೆ ತರುವುದರ ಮೊದಲು ಹತ್ತು ಬಾರಿ ಯೋಚಿಸಬೇಕು.ದೇಶದ ಜನತೆಗೆ ಮಾರಕವಾದ ಕಾಯ್ದೆ ಗಳನ್ನು ತಂದಲ್ಲಿ ಅದು ಭಸ್ಮಾಸುರನ ಕೈಯಂತೇ ಸರ್ಕಾರವನ್ನೇ ಸುಟ್ಟು ಬೂದಿ ಮಾಡಬಹುದು .ಆದ್ದರಿಂದ ಸರಕಾರವು ಇನ್ನಾದರೂ ಸ್ವಲ್ಪ ಎಚ್ಚರಿಕೆ ವಹಿಸಲಿ ಎಂದು ಗೀತಾ ವಾಗ್ಳೆ ಹೇಳಿದ್ದಾರೆ.

 
 
 
 
 
 
 
 
 

Leave a Reply