ತಾಲ್ಲೂಕು ಮಟ್ಟದ ಅಂತರ್ ವಲಯ ಆನ್ ಲೈನ್ ಪ್ರತಿಭಾ ಸ್ಪರ್ಧೆಯ ಫಲಿತಾಂಶ.

ಬ್ರಾಹ್ಮಣ ಮಹಾಸಭಾ ಕೊಡವೂರು ತನ್ನ ರಜತಪಥದ ಕಾರ್ಯಕ್ರಮದ ಅಂಗವಾಗಿ ಹಮ್ಮಿಕೊಂಡ, ಉಡುಪಿ ತಾಲ್ಲೂಕು ಮಟ್ಟದ  ಅಂತರ್ ವಲಯ ಆನ್ ಲೈನ್ ಮೂಲಕ ವೈವಿಧ್ಯ ಪ್ರತಿಭಾ ಸ್ಪರ್ಧೆಯ (Variety Talent competition) ಬಹುಮಾನ ವಿಜೇತರ ಪಟ್ಟಿ ಈ ರೀತಿ ಇದೆ:

*ಪ್ರಥಮ ಸ್ಥಾನ ದೊಂದಿಗೆ 5,000/- ನಗದು ಬಹುಮಾನ ವಿಜೇತ ತಂಡ: ಕಿನ್ನಿಮುಲ್ಕಿ – ಕನ್ನರಪಾಡಿ ವಲಯ, ದ್ವಿತೀಯ ಸ್ಥಾನ ದೊಂದಿಗೆ 3,000/- ನಗದು ಬಹುಮಾನ ವಿಜೇತ ತಂಡ:  ಕೊರಂಗ್ರಪಾಡಿ ವಲಯ, *ತೃತೀಯ ಸ್ಥಾನ ದೊಂದಿಗೆ 2,000/- ನಗದು ಬಹುಮಾನ ವಿಜೇತ ತಂಡ: ಪುತ್ತೂರು ವಲಯ  *ಸಮಾಧಾನಕರ ಬಹುಮಾನ: ಕರಂಬಳ್ಳಿ ವಲಯ.


ಬಹುಮಾನ ವಿತರಣಾ ಕಾರ್ಯಕ್ರಮ ದಿ. 8/8/2021 ರಂದು ಕೊಡವೂರಿನ “ವಿಪ್ರಶ್ರೀ” ಸಭಾಂಗಣದಲ್ಲಿ ಮಧ್ಯಾಹ್ನ 3.00 ಗಂಟೆಗೆ ಬ್ರಾಹ್ಮಣ ಮಹಾಸಭಾ ಕೊಡವೂರು ಹಾಗೂ ಉಡುಪಿ ತಾಲ್ಲೂಕು ಬ್ರಾಹ್ಮಣ ಮಹಾಸಭಾ ಜಂಟಿಯಾಗಿ ಆಯೋಜಿಸುವ “ಆಟಿಡೊಂಜಿ ದಿನ” ಕಾರ್ಯಕ್ರಮದಲ್ಲಿ ನಡೆಯಲಿದೆ.  ಸಭಾ ಕಾರ್ಯಕ್ರಮದ ನಂತರ ಬಹುಮಾನ ವಿಜೆತ ವಲಯದಿಂದ ಕಲಾ ಪ್ರತಿಭೆಯ ಪ್ರದರ್ಶನಕ್ಕೂ ಅವಕಾಶ ಕಲ್ಪಿಸಲಾಗಿದೆ.

ಬಹುಮಾನ ವಿಜೇತ ಎಲ್ಲಾ ವಲಯಗಳಿಗೆ ಹಾಗೂ ಸ್ಪರ್ಧೆಯಲ್ಲಿ ಭಾಗವಹಿಸಿದ ಎಲ್ಲವಲಯಗಳಿಗೆ  ರಜತೋತ್ಸವ ಸಮಿತಿ ಕಾರ್ಯಾಧ್ಯಕ್ಷ ಶ್ರೀ ಮಂಜುನಾಥ ಭಟ್ ಹಾಗು ಕೊಡವೂರು ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ಕೆ ನಾರಾಯಣ ಬಲ್ಲಾಳ್ ಅಭಿನಂದನೆಯನ್ನು ತಿಳಿಸಿದ್ದಾರೆ.  

 
 
 
 
 
 
 
 
 
 
 

Leave a Reply