ಬ್ರಾಹ್ಮಣ ಮಹಾಸಭಾ ಕೊಡವೂರು ಶಿಕ್ಷಕರ ದಿನಾಚರಣೆ, ಪ್ರತಿಭಾಭಿನಂದನೆ, ಶಿಷ್ಯವೇತನ ವಿತರಣೆ : .

ವಿದ್ಯಾರ್ಥಿಗಳ ಮನಸ್ಸನ್ನು ಅರಿತುಕೊಳ್ಳುವ ತಾಕತ್ತು, ಅವರ ಕಷ್ಟಗಳಿಗೆ ಸೂಕ್ತ ಸಮಯದಲ್ಲಿ ಸ್ಪಂದಿಸುವ ಗುಣ ಇದ್ದ ಶಿಕ್ಷಕ ಮಾತ್ರ ಆದರ್ಶ ಶಿಕ್ಷಕ ಎಂದೆನಿಸಿಕೊಳ್ಳುತ್ತಾನೆ.ಅಲ್ಲದೆ ಜಾತಿ ಮತ ಭೇದಗಳಿಲ್ಲದೆ ಮಕ್ಕಳಿಗೆ ವಿದ್ಯೆಯೊಂದಿಗೆ ಉತ್ತಮ ಸಂಸ್ಕಾರ ನೀಡಿ ಸತ್ ಪ್ರಜೆಯನ್ನಾಗಿ ರೂಪಿಸುವ ವಿಶಿಷ್ಟ ವೃತ್ತಿಯೇ ಶಿಕ್ಷಕ ವೃತ್ತಿ. ಎಲ್ಲಾ ವಿದ್ಯಾರ್ಥಿಗಳನ್ನು ತಮ್ಮ ಮಕ್ಕಳೆಂದೇ ಲಾಲಿಸಿ ಪಾಲಿಸುವ ಶಿಕ್ಷಕರು ಸಮಾಜದ ಅಗತ್ಯ ಎಂದು ಆದಿವುಡುಪಿ ಪ್ರೌಢಶಾಲಾ ನಿವೃತ್ತ ಮುಖ್ಯೋಪಾಧ್ಯಾಯರಾದ ಶಂಕರಿ ಬಿ ಭಟ್ ಅಭಿಪ್ರಾಯಪಟ್ಟರು.

 

ಅವರು ಕೊಡವೂರು ಬ್ರಾಹ್ಮಣ ಮಹಾಸಭಾ ಆಯೋಜಿಸಿದ ಶಿಕ್ಷಕರ ದಿನಾಚರಣೆಯಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡುತ್ತಾ
ಶಿಕ್ಷಕರು ಸಮಾಜದಲ್ಲಿ ಮಕ್ಕಳ ಮನವನ್ನು ಬೆಸೆಯುವ ಸೂಜಿಯಂತೆ ಕೆಲಸ ನಿರ್ವಹಿಸಬೇಕು ಅದನ್ನು ಬಿಟ್ಟು ಸಮಾಜವನ್ನು ವಿಭಜಿಸುವ ಕತ್ತರಿ ಆಗಬಾರದು ಎಂದು ಹಿತನುಡಿಗಳನ್ನಾಡಿದರು. ಶಿಕ್ಷಕ ದಿನಾಚರಣೆಯ ಅಂಗವಾಗಿ ನಿವೃತ್ತ ಶಿಕ್ಷಕರಾದ ಕೃಷ್ಣಕುಮಾರ್ ರಾವ್ ಮತ್ತು ನಿವೃತ್ತ ಶಿಕ್ಷಕಿ ಕಾತ್ಯಾಯಿನಿ ಭಟ್ ಬ್ರಹ್ಮಾವರ ಸರಕಾರಿ ಶಾಲೆಯ ಅಧ್ಯಾಪಕಿ ಜಯಶ್ರೀ ಕೆಆರ್ ಇವರನ್ನು ವಿಪ್ರಶಿಕ್ಷಕ ಹಾಗೂ ವಿಪ್ರ ಶಿಕ್ಷಕಿ ಪುರಸ್ಕಾರ ನೀಡಿ ಸನ್ಮಾನಿಸಲಾಯಿತು. ಪಿಯುಸಿಯಲ್ಲಿ ರಾಂಕ್ ವಿಜೇತ ಚಿನ್ಮಯ ಅಡಿಗ ಹಾಗೂ ಎಸ್ ಎಸ್ ಎಲ್ ಸಿ ಯಲ್ಲಿ ರಾಂಕ್ ವಿಜೇತ ಚಿನ್ಮಯಿ ರಾವ್ ಇವರನ್ನು ಈ ಸಂದರ್ಭದಲ್ಲಿ ಅಭಿನಂದಿಸಲಾಯಿತು.

 

ಸಂಸ್ಕೃತ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿಗಳಿಗೆ ಶಿಷ್ಯವೇತನ ನೀಡಲಾಯಿತು. ವಿದ್ಯಾರ್ಥಿ ವೇತನದ ಪ್ರಾಯೋಜಕರನ್ನು ಗುರುತಿಸಲಾಯಿತು .ಸಭೆಯಲ್ಲಿ ಉಪಸ್ಥಿತರಿದ್ದ ಶಿಕ್ಷಕರನ್ನು ಗುರುತಿಸಿ ಗೌರವಿಸಲಾಯಿತು. ಪೂರ್ವಿ ರಾವ್ ಅತಿಥಿಗಳನ್ನು ರಶ್ಮಿ ರಾವ್ ಹಾಗೂ ದೀಪ ರಾವ್ ಅಭಿನಂದಿತರನ್ನು ಸಭೆಗೆ ಪರಿಚಯಿಸಿದರು. ರುಕ್ಮಿಣೀ ಬಲ್ಲಾಳ್ ಶಿಕ್ಷಕರನ್ನು ಗುರುತಿಸಿದರು. ಭಾರತಿ ಸುಬ್ರಹ್ಮಣ್ಯ, ಉಮಾ ಶ್ರೀಧರ ಶರ್ಮ ,ನಿರ್ಮಲ ಮಂಜುನಾಥ್ ಸನ್ಮಾನ ಪತ್ರ ವಾಚಿಸಿದರು.

ಕೋಶಾಧಿಕಾರಿ ಶ್ರೀಧರ ಶರ್ಮ ವಿದ್ಯಾರ್ಥಿ ವೇತನದ ಪ್ರಾಯೋಜಕರು ಹಾಗೂ ಫಲಾನುಭವಿಗಳ ಪಟ್ಟಿ ವಾಚಿಸಿದರು. ಗೌರವಾಧ್ಯಕ್ಷರಾದ ಗೋವಿಂದ ಐತಾಳ್ ಉಪಸ್ಥಿತರಿದ್ದರು. ಅಧ್ಯಕ್ಷ ಶ್ರೀನಿವಾಸ್ ಉಪಾಧ್ಯಾಯ ಸ್ವಾಗತಿಸಿ ಚಂದ್ರಶೇಖರ್ ರಾವ್ ಪ್ರಸ್ತಾವಿಸಿದರು. ಶೃತಿ ಸುಕುಮಾರ್ ಪ್ರಾರ್ಥಿಸಿದರು. ಕಾರ್ಯದರ್ಶಿ ಪೂರ್ಣಿಮಾ ಜನಾರ್ದನ್ ಧನ್ಯವಾದವಿತ್ತರು. ಅಶ್ವಿನಿ ಶ್ರೀನಿವಾಸ್ ಕಾರ್ಯಕ್ರಮ ನಿರೂಪಿಸಿದರು.

 
 
 
 
 
 
 
 
 
 
 

Leave a Reply