Janardhan Kodavoor/ Team KaravaliXpress
30 C
Udupi
Saturday, December 5, 2020

ಕಾಪು ಬೀಚ್ ನಲ್ಲಿ ಬೆಂಗಳೂರಿನ ಇಬ್ಬರು ಸಮುದ್ರ ಪಾಲು

ಕಾಪು ಬೀಚ್ ನಲ್ಲಿ ಬೆಂಗಳೂರಿನಿಂದ ಬಂದ ಐವರು ಯುವಕರ ತಂಡದಲ್ಲಿ ಇಬ್ಬರು ಯುವಕರು ​ಸಮುದ್ರ ಪಾಲಾದ ​ದುರ್ಘಟನೆ ರವಿವಾರ ಸಂಜೆ ನಡೆದಿದೆ. ಕಾರ್ತಿಕ್ (23)​ಮತ್ತು ರೂಪೇಶ್​ (21) ಎಂಬವರು ನೀರು ಪಾಲಾಗಿದ್ದು, ರೂಪೇಶ್ ಎಂಬಾತನ ಶವ ಮೇಲಕ್ಕೆತ್ತಲಾಗಿದೆ.​ 
ಬೆಂಗಳೂರಿನಿಂದ ​ಬಂದಿರುವ  5 ಮಂದಿ ಯುವಕರ ತಂಡ ರವಿವಾರ ಸಂಜೆ ಕಾಪು ಬೀಚ್ ನಲ್ಲಿ ಆಟವಾಡುತ್ತಿದ್ದ ಸಂದರ್ಭ ಈ ಘಟನೆ ಸಂಭವಿಸಿದೆ‌.​ ​ಸಮುದ್ರ ಪಾಲಾಗುತ್ತಿದ್ದ ರೂಪೇಶ್ ನನ್ನು ಬೀಚ್ ನಿರ್ವಾಹಕ ಪ್ರಶಾಂತ್ ಕರ್ಕೇರ, ವಿನೀತ್, ಪ್ರಥಮ್, ದಮೋದರ ಪುತ್ರನ್, ಚಂದ್ರಹಾಸ ಜೊತೆಗೂಡಿ ರಕ್ಷಿಸುವ ಪ್ರಯತ್ನ ಮಾಡಿದ್ದಾರೆ.
ಮೇಲಕ್ಕೆ ತಂದು ಆಕ್ಸಿಜನ್ ನೀಡಲಾಯಿತಾದರೂ ಅಷ್ಟರಲ್ಲೇ ರೂಪೇಶ್ ಮೃತಪಟ್ಟಿದ್ದರು ಎನ್ನಲಾಗಿದೆ. ನೀರಿನಲ್ಲಿ ಮುಳುಗಿದ ಕಾರ್ತಿಕ್ ಗಾಗಿ ಶೋಧ ಕಾರ್ಯ ಮುಂದುವರಿದಿದೆ.​ ಕಾಪು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದು, ತನಿಖೆ ಮುಂದುವರಿಸಿದ್ದಾರೆ.
- Advertisement -

ಸಂಬಂಧಿತ ಸುದ್ದಿ

Leave a Reply

ಛಾಯಾಂಕಣ

ಇತ್ತೀಚಿನ ಸುದ್ದಿ

ಭಾರತೀಯ ರೆಡ್ ಕ್ರಾಸ್ ಸಂಸ್ಥೆ, ಉಡುಪಿ ಜಿಲ್ಲಾ​ ಘಟಕದಲ್ಲಿ​ ವಿಕಲಚೇತನರಿಗೆ ಪ್ರಥಮ ​ಪ್ರಾಶಸ್ತ್ಯ 

ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ​ ಮಹತ್ವಾಕಾಂಕ್ಷೆಯ ಯೋಜನೆಯಾದ ಜಿಲ್ಲಾ ವಿಕಲಚೇತನರ ಪುನರ್ವಸತಿ ಕೇಂದ್ರವು ಉಡುಪಿ ಜಿಲ್ಲೆಯಲ್ಲಿ ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಉಡುಪಿ ಜಿಲ್ಲಾ​ ಘಟಕದಲ್ಲಿ ಬಹಳ ಉತ್ತಮ ರೀತಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು...

​ವಾಸ್ತು ವಿನ್ಯಾಸ ತಜ್ಞ ಉಡುಪಿಯ ಜಯಗೋಪಾಲ್ ರನ್ನು ಸಂಪರ್ಕಿಸಿದ ಅಯೋಧ್ಯೆ ಸಮಿತಿ

ಅಯೋಧ್ಯೆಯಲ್ಲಿ ಭವ್ಯ ಶ್ರೀರಾಮಮಂದಿರವನ್ನು ಭಾರತೀಯ ವೈದಿಕ ವಾಸ್ತು ಶಿಲ್ಪದ ಪ್ರಕಾರವೇ ನಿರ್ಮಿಸುವ ಉದ್ದೇಶದಿಂದ ಭಾರತದ ವೈದಿಕ ವಾಸ್ತುತಜ್ಞರ ಸಮಿತಿಗೆ ಮೂಲತಃ ಉಡುಪಿ ಜಿಲ್ಲೆಯ​ಪ್ರಸ್ತುತ ಕೇರಳದ ಜಯಗೋಪಾಲ್ ಅವರನ್ನು ಸಂಪರ್ಕಿ​ಸಿದ್ದಾರೆ​.​  ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಶ್ರೀರಾಮ ಜನ್ಮಭೂಮಿ...

ಕೇಂದ್ರ ನಡೆಸಿದ ಮಾತುಕತೆ ವಿಫಲ: ಡಿ.8ರಂದು ಭಾರತ್ ಬಂದ್ ಗೆ ರೈತರ ಕರೆ

ನವದೆಹಲಿ: ರೈತರು ನೂತನ ಕೃಷಿ ಕಾಯಿದೆಗಳನ್ನು ವಿರೋಧಿಸಿ ದೆಹಲಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ಆದರೆ ಸೂಕ್ತ ರೀತಿಯಲ್ಲಿ ಕೇಂದ್ರ ಸರ್ಕಾರ ಪ್ರತಿಕ್ರಿಯಿಸದ ಹಿನ್ನೆಲೆ ತಮ್ಮ ಹೋರಾಟವನ್ನು ಮತ್ತಷ್ಟು ಬಲಪಡಿಸಲು ರೈತರು ನಿರ್ಧರಿಸಿದ್ದು, ಡಿಸೆಂಬರ್ 8...

ಹಾಸನದಲ್ಲಿ ಪ್ರತಿಭಟನಾಕಾರರ ರಂಪಾಟ

ಹಾಸನ: ಇಂದು ಕನ್ನಡ ಪರ ಸಂಘಟನೆಗಳಿಂದ ಮರಾಠ ನಿಗಮ ಸ್ಥಾಪನೆ ವಿರೋಧಿಸಿ ರಾಜ್ಯಾದ್ಯಂತ ಬಂದ್ ನಡೆಯುತ್ತಿದ್ದೆ. ಹಾಸನದಲ್ಲಿ ಪ್ರತಿಭಟನಾಕಾರರು ಎನ್​.ಆರ್​. ವೃತ್ತದಲ್ಲಿ ಬಸ್ ಸಂಚಾರಕ್ಕೆ ಅಡ್ಡಿಪಡಿಸಿದ್ದು, ಬಸ್ ಗಳಿಗೆ ಅಡ್ಡ ಮಲಗಿ ರಂಪಾಟ...

ಕೋಲ್ಕೊತಾದಲ್ಲಿ ಹೆಲ್ಮೆಟ್ ಇಲ್ಲದಿದ್ದರೆ ಇಂಧನ ಇಲ್ಲ ಎಂಬ ಹೊಸ ನಿಯಮ

ಕೋಲ್ಕೊತಾ: ದ್ವಿಚಕ್ರ ವಾಹನ ಅಪಘಾತದಿಂದ ಆಘಾತಕಾರಿ ಘಟನೆಗಳನ್ನು ತಡೆಯುವ ನಿಟ್ಟಿನಲ್ಲಿ ಡಿಸೆಂಬರ್ 8ರಿಂದ ಫೆಬ್ರವರಿ 5ರವರೆಗೆ ‘ಹೆಲ್ಮೆಟ್ ಇಲ್ಲ ಅಂದರೆ, ಇಂಧನ ಇಲ್ಲ’ ಎಂಬ ವಿಭಿನ್ನ ಅಭಿಯಾನವನ್ನು ಕೋಲ್ಕೊತಾ ಪೊಲೀಸರು ಆಯೋಜಿಸಿದ್ದಾರೆ.  ಈ ದಿನಗಳಲ್ಲಿ...
error: Content is protected !!