ಕಾಶ್ಮೀರದ ತಿತ್ವಾಲ್ ನ ಶಾರದಾ ಮಂದಿರಕ್ಕೆ ಶೃಂಗೇರಿಯಿಂದ ಶ್ರೀ ಶಾರದಾ ಮೂರ್ತಿಯು ರವಾನೆಯಾಯಿತು. ಮಧ್ಯಾಹ್ನ ಸುಮುಹೂರ್ತದಲ್ಲಿ ಶ್ರೀಮಠದ ಅಡಳಿತಾಧಿಕಾರಿಗಳು ಶ್ರೀ ಗೌರಿಶಂಕರ್ ಅವರು ಚಾಲನೆ ನೀಡಿದ ನಂತರ ಮೂರ್ತಿಯನ್ನು ಒಳಗೊಂಡಿದ್ದ ನೂತನ ವಾಹನವು ನೂರಾರು ಜನರ ಭಜನೆ, ವಾದ್ಯ ಘೋಷಗಳೊಂದಿಗೆ ಶ್ರೀಮಠದ ರಾಜಗೋಪುರ ದಿಂದ ಹೊರಟಿತು. ಶೃಂಗೇರಿಯ ಭಕ್ತ ಜನರು ಊರ ಗಡಿಯ ತನಕ ಉತ್ಸವದಲ್ಲಿ ಭಾಗವಹಿಸಿ, ನಂತರ ಕಳುಹಿಸಿಕೊಟ್ಟರು.
ಕಾಶ್ಮೀರಕ್ಕೆ ಶೃಂಗೇರಿಯಿಂದ ಶ್ರೀ ಶಾರದಾ ಮೂರ್ತಿಯು ಪಯಣ

- Advertisement -