Janardhan Kodavoor/ Team KaravaliXpress
24.6 C
Udupi
Monday, November 28, 2022
Sathyanatha Stores Brahmavara

ತಿಂಗಳ ಸಡಗರ ಸಂಪದ ಕಾರ್ಯಕ್ರಮ

ಬೈಂದೂರು: “ಕನ್ನಡ ಭಾಷೆಯ ಬಗೆಗಿನ ಕಾಳಜಿ ಹೋರಾಟ ಮತ್ತು ಬೆಳವಣಿಗೆಯಿಂದ ಕನ್ನಡಿಗರು ಭಾರತೀಯ ಆಡಳಿತ ಸೇವೆ ಯಂತಹ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಿ ಅನೇಕ ಮಂದಿ ಕನ್ನಡಿಗರೇ ಆಡಳಿತ ಚುಕ್ಕಾಣಿಯನ್ನು ಹಿಡಿಯುವಂತಾಗಬೇಕು” ಎಂದು ಸಿ ಎ ರಮಾನಂದ ಪ್ರಭುಗಳು ಕರೆಕೊಟ್ಟರು.

ಕನ್ನಡ ಸಾಹಿತ್ಯ ಪರಿಷತ್ತು ಉಡುಪಿ ಜಿಲ್ಲೆ ಮತ್ತು ತಾಲ್ಲೂಕು ಘಟಕ ಬೈಂದೂರು ಹಾಗೂ ಸರಕಾರಿ ಪ್ರಥಮ ದರ್ಜೆ ಕಾಲೇಜು ಬೈಂದೂರು ಇದರ ಸಹಯೋಗದಲ್ಲಿ ತಿಂಗಳ ಸಡಗರ ಸಂಪದ ಕಾರ್ಯಕ್ರಮ ಅಂಗವಾಗಿ ನಡೆದ ಕವಿಗೋಷ್ಠಿ ಮತ್ತು ಕನಕದಾಸ ಜಯಂತಿ ಆಚರಣೆಯನ್ನು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಬೈಂದೂರಿನಲ್ಲಿ ಉದ್ಘಾಟಿಸಿ , “ಸಾಹಿತ್ಯ ಸಮ್ಮೇಳನಗಳು ಕವಿಗೋಷ್ಠಿಗಳು ಸಾಹಿತ್ಯಾಭಿರುಚಿಯನ್ನು ಮೂಡಿಸುವುದಲ್ಲದೆ ಜ್ಞಾನ ಮತ್ತು ವಿಜ್ಞಾನ ವೃದ್ಧಿಗೂ ಪೂರಕ” ಎಂದು ನುಡಿದರು.

ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿಗಳಾದ ನರೇಂದ್ರ ಕುಮಾರ್ ಕೋಟ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಪ್ರಾಂಶುಪಾಲ ಹಾಗೂ ಬೈಂದೂರು ತಾಲ್ಲೂಕು ಘಟಕದ ಅಧ್ಯಕ್ಷರಾದ ಡಾ ರಘು ನಾಯ್ಕ ಕವಿಗೋಷ್ಠಿ ಮತ್ತು ಕನಕದಾಸರ ಜಯಂತಿ ಆಚರಣೆಯ ಕುರಿತು ಪ್ರಾಸ್ತಾವಿಕ ನುಡಿಗಳನ್ನಾಡಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಸಮಿತಿಯ ಗೌರವ ಸಂಘಟನಾ ಕಾರ್ಯದರ್ಶಿಗಳಾದ ಸತೀಶ್ ವಡ್ಡರ್ಸೆ , ಕಸಾಪ ಬೈಂದೂರು ಘಟಕದ ಖಜಾಂಚಿ ಗಳಾದ ಚಂದ್ರಶೇಖರ ನಾವಡ , ಕವಿಗೋಷ್ಠಿಯ ಸಮನ್ವಯಕಾರರಾದ ಪುಂಡಲೀಕ ನಾಯಕ್ ಉಪಸ್ಥಿತರಿದ್ದರು.

ವಿದ್ಯಾರ್ಥಿಗಳು ನಾಡಗೀತೆ ಯೊಂದಿಗೆ ಪ್ರಾರ್ಥನೆಗೈದರು . ಕಾರ್ಯದರ್ಶಿ ಸುಧಾಕರ್ ಪಿ ಬೈಂದೂರು ಸ್ವಾಗತಿಸಿದರು. ಕನ್ನಡ ವಿಭಾಗದ ಮುಖ್ಯಸ್ಥರಾದ ನಾಗರಶೆಟ್ಟಿ ವಂದನಾರ್ಪಣೆಗೈದರು. ಕನ್ನಡ ಸಹಾಯಕ ಪ್ರಾಧ್ಯಾಪಕ ರಾದ ನವೀನ್ ಎಚ್ ಜೆ ನಿರೂಪಿಸಿದರು. ಬೈಂದೂರು ತಾಲ್ಲೂಕಿನ ವಿವಿಧ ಭಾಗಗಳಿಂದ ಆಗಮಿಸಿದ ನಲವತ್ತುಕ್ಕೂ ಅಧಿಕ ಕವಿಗಳು ಸ್ವರಚಿತ ಕವನಗಳನ್ನು ವಾಚಿಸಿದರು

- Advertisement -

ಸಂಬಂಧಿತ ಸುದ್ದಿ

Leave a Reply

ಛಾಯಾಂಕಣ

ಇತ್ತೀಚಿನ ಸುದ್ದಿ

error: Content is protected !!