ಸಂಪದ-ತಿಂಗಳ ಸಡಗರ..ಯೋಧರೆಡೆಗೆ ನಮ್ಮ ನಡಿಗೆ ಕಾರ್ಯಕ್ರಮ

ಕನ್ನಡ ಸಾಹಿತ್ಯ ಪರಿಷತ್ತು ಉಡುಪಿ ಜಿಲ್ಲಾ ಘಟಕ ಮತ್ತು ಹೆಬ್ರಿ ತಾಲೂಕು ಘಟಕ ,ಗೀತಾನಂದ ಪೌಂಡೇಶನ್ ಮಣೂರು ಇವರ ಆಶ್ರಯದಲ್ಲಿ
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಕಾರದೊಂದಿಗೆ
ರಾಜ್ಯೋತ್ಸವದ ಅಂಗವಾಗಿ ತಿಂಗಳ ಸಡಗರ ಕಾರ್ಯಕ್ರಮ ಯೋಧರೆಡೆಗೆ ನಮ್ಮ ನಡಿಗೆ ನಾಡ್ಪಾಲು ಗ್ರಾಮದ ಹಳೆಸೋಮೇಶ್ವರದಲ್ಲಿ ಜರುಗಿತು. ನಿವೃತ್ತ ಯೋಧರಾದ ಭಾಸ್ಕರ ಪೂಜಾರಿ ಇವರನ್ನು ಅವರ ಮನೆಯಲ್ಲಿ ಅಭಿನಂದಿಸಲಾಯಿತು.

ಕಸಾ.ಪ ಹೆಬ್ರಿ ತಾಲೂಕು ಘಟಕದ ಅಧ್ಯಕ್ರ ಶ್ರೀನಿವಾಸ ಭಂಡಾರಿ ಮುದ್ದೂರು ಅಧ್ಯಕ್ಷತೆ ವಹಿಸಿದ್ದರು. ಗ್ರಾಮ ಪಂಚಾಯತ್ ನಾಡ್ಪಾಲು ಇದರ ಸದಸ್ಯರಾದ ರಾಘವೇಂದ್ರ ಹೆಗ್ಡೆ, ಕ.ಸಾ.ಪ ಗೌರವ ಕಾರ್ಯದರ್ಶಿ ಗಳಾದ ಮಂಜುನಾಥ ಕೆ ಶಿವಪುರ , ಡಾ. ಪ್ರವೀಣ ಕುಮಾರ್ ಎಸ್ , ಸದಸ್ಯರಾದ ಉದಯ ಆಚಾರ್ ತಣ್ಣೀರು. ವೆಂಕಟೇಶ ಶೆಟ್ಟಿ, ಮತ್ತು ಊರಿನವರು ಕ.ಸಾ.ಪ ಸದಸ್ಯರು ಉಪಸ್ಥಿತರಿದ್ದರು.
ಪ್ರೀತೇಶ್ ಕುಮಾರ್ ಶೆಟ್ಟಿ ಸ್ವಾಗತಿಸಿದರು ಪುಷ್ಪಾವತಿ ಶೆಟ್ಟಿ ಪ್ರಾರ್ಥಿಸಿದರು, ಮಹೇಶ್ ಹೈಕಾಡಿ ನಿರೂಪಿಸಿದರು ಉದಯ ಆಚಾರ್ ವಂದಿಸಿದರು.

ಸೈನಿಕರಾಗಿ ತನ್ನ ಅನುಭವವಗಳನ್ನು ಹಂಚಿಕೊಂಡ ಭಾಸ್ಕರ ಪೂಜಾರಿಯವರು ಪರಿಷತ್ತು ನಮ್ಮ ಮನೆಗೆ ಬಂದು ಅಭಿನಂದಿಸಿರುವುದು ನನಗೆ ತುಂಬಾ ಖುಷಿಯಾಗಿದೆ. ಇಂತಹ ಕಾರ್ಯಕ್ರಮ ಬಹಳ ಅಪರೂಪ ಎಂದು ಕೃತಜ್ಞತೆ ತಿಳಿಸಿದರು.ದೇಶ ಸೇವೆಯನ್ನು ಮಾಡುವುದು ನಮ್ಮ ಕರ್ತವ್ಯವಾಗಿದ್ದು ಅದನ್ನು ಗುರುತಿಸಿ ಗೌರವಿಸುವ ಮೂಲಕ ಕಸಾಪ ಹಿರಿಮೆಯನ್ನು ಮೆರೆದಿದೆ. ಸ್ವಚ್ಚತೆ ,ಪರಿಸರ ಪ್ರಜ್ಞೆ ಮತ್ತು ಶಿಸ್ತುಬದ್ಧ ಜೀವನಕ್ಕೆ ಎಲ್ಲರೂ ಗಮನ ನೀಡಬೇಕು ಎಂದರು

ನಾಡ್ಪಾಲು ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರಾದ ರಾಮಣ್ಣ ಪೂಜಾರಿಯವರು ಮಾತನಾಡಿ ಕನ್ನಡ ಸಾಹಿತ್ಯ ಪರಿಷತ್ತು ನಮ್ಮೂರಿನ ಯೋಧರನ್ನು ಅಭಿನಂದಿಸಿರುವುದು ಬಹಳ ಉತ್ತಮ ಕಾರ್ಯಕ್ರಮ ಇದರಿಂದ ಇತರರಿಗೂ ಪ್ರೇರಣೆ ಸಿಗುತ್ತದೆ.ಎಂದು ತಮ್ಮ ಮಾತಿನಲ್ಲಿ ಹೇಳಿದರು.

ಕನ್ನಡ ಸಾಹಿತ್ಯ ಪರಿಷತ್ತು ಉಡುಪಿ ಜಿಲ್ಲಾಧ್ಯಕ್ಷರಾದ ನೀಲಾವರ ಸುರೇಂದ್ರ ಅಡಿಗ ಮಾತನಾಡಿ ನವಂಬರ್ ತಿಂಗಳು ಪೂರ್ತಿ ಇಂತಹ ಕಾರ್ಯಕ್ರಮಗಳನ್ನು ಎಲ್ಲಾ ತಾಲೂಕುಗಳಲ್ಲಿ ಹಮ್ಮಿಕೊಂಡಿರುವುದಾಗಿ ತಿಳಿಸಿದರು.ಯೋಧರಾದ ಭಾಸ್ಕರ ಪೂಜಾರಿ ಯವರು ನಿವೃತ್ತರಾದ ಮೇಲೂ ಸಮಾಜಕ್ಕೆ ಉಪಯೋಗವಾಗುವ ಕಾರ್ಯದಲ್ಲಿ ತೊಡಗಿಸಿಕೊಂಡಿರುವುದು ಸಂತೋಷದ ವಿಷಯ ಎಂದರು.

ಹಸಿರಿನ ನಡುವೆ ಹಳ್ಳಿಮನೆಯಲ್ಲಿ ನಡೆದ ಕಾರ್ಯಕ್ರಮ ಸೊಗಸಾಗಿ ಮತ್ತು ಅರ್ಥಪೂರ್ಣವಾಗಿ ಮೂಡಿಬಂತು.

 
 
 
 
 
 
 
 
 
 
 

Leave a Reply