ಹಿರಿಯರು ಸಾಂಸ್ಕೃತಿಕ ಚಿಂತಕರು ಆದ ಸಾಧುರಾಮರಿಗೆ ಸನ್ಮಾನ

ಕನ್ನಡ ನಾಡು ನುಡಿ ಸಂಸ್ಕೃತಿ ಮತ್ತು ಜನಪದ ಇವುಗಳ ಸಂರಕ್ಷಣೆ ಅಭಿವೃದ್ಧಿ ಮತ್ತು ಅನುಭವ ಹೊಂದಿರುವ ಶ್ರೀ ಸಾಧುರಾಮ ಸಾಂಸ್ಕೃತಿಕ ಚಿಂತಕರು ಬೈಂದೂರು ರವರನ್ನು ಸಾಹಿತಿ ಉಪೇಂದ್ರ ಸೋಮಯಾಜಿಯವರು ಸನ್ಮಾನಿಸಿ, “ಬಡತನವನ್ನೇ ಹಾಸುಹೊದ್ದು ಬದುಕಿದ ನಮ್ಮ ಗ್ರಾಮೀಣರ ಜನಪದರ ಸಾಹಿತ್ಯ ಶ್ರೀಮಂತವಾದದ್ದು ಅವುಗಳಲ್ಲಿ ಕಾಣುವ ಜೀವನ ಪ್ರೀತಿ ನಮ್ಮ ಬದುಕಿಗೆ ಸದಾ ಸ್ಫೂರ್ತಿ ನೀಡುವಂಥದ್ದು” ಎಂದು ನುಡಿದರು.

ಕನ್ನಡ ಸಾಹಿತ್ಯ ಪರಿಷತ್ತು ಉಡುಪಿ ಜಿಲ್ಲಾ ಘಟಕ ಗೀತಾನಂದ ಫೌಂಡೇಶನ್ ಮಣೂರು ಮತ್ತು ಕನ್ನಡ ಸಾಹಿತ್ಯ ಪರಿಷತ್ತು ಬೈಂದೂರು ತಾಲ್ಲೂಕು ಘಟಕ ಮತ್ತು ಮುಕ್ತಿ ಧಾಮ ಟ್ರಸ್ಟ್ (ರಿ) ಬೈಂದೂರು ಇವರ ಸಹಯೋಗದೊಂದಿಗೆ ಕನ್ನಡ ರಾಜ್ಯೋತ್ಸವದ ಅಂಗವಾಗಿ ಸಂಪದ ತಿಂಗಳ ಸಡಗರ ಕಾರ್ಯಕ್ರಮದಡಿಯಲ್ಲಿ ಜರುಗಿದ ಹಿರಿಯರೆಡೆಗೆ ನಮ್ಮ ನಡಿಗೆ ಕಾರ್ಯಕ್ರಮ ದಲ್ಲಿ ಶ್ರೀ ಸಾಧುರಾಮ್ ಸಾಂಸ್ಕೃತಿಕ ಚಿಂತಕರನ್ನ ಸನ್ಮಾನಿಸಲಾಯಿತು

ಕನ್ನಡ ಸಾಹಿತ್ಯ ಪರಿಷತ್ತು ಉಡುಪಿ ಜಿಲ್ಲಾ ಘಟಕದ ಅಧ್ಯಕ್ಷರಾದ ನೀಲಾವರ ಸುರೇಂದ್ರ ಅಡಿಗ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ,” ನಮ್ಮ ಮಹಾಕಾವ್ಯಗಳ, ಪೌರಾಣಿಕ ಕಥಾನಕಗಳ, ಅಪಾರ ಜ್ಞಾನ ಹೊಂದಿದ ಸರಳ ಬದುಕನ್ನು ನಡೆಸುತ್ತ ಬಂದಿರುವ ಸಾಧುರಾಮ್, ಯುವಪೀಳಿಗೆಗೆ ಪ್ರೇರಣಾದಾಯಿಯಾಗಿದ್ದಾರೆ ಎಂದು ನುಡಿದರು.

ಕನ್ನಡ ಸಾಹಿತ್ಯ ಪರಿಷತ್ತು ಬೈಂದೂರು ತಾಲ್ಲೂಕು ಘಟಕದ ಅಧ್ಯಕ್ಷರಾದ ಡಾ ರಘು ನಾಯ್ಕ ಗಣ್ಯರನ್ನು ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಬೈಂದೂರು ಚಂದ್ರಶೇಖರ ನಾವಡ ಕೋಶಾಧ್ಯಕ್ಷರು ಕಸಾಪ ಬೈಂದೂರು ರವರು ಪ್ರಾಸ್ತಾವಿಕ ನುಡಿಗಳನ್ನಾಡಿದರು.

ಲಾವಣ್ಯ ನಾಟಕ ನಿರ್ದೇಶಕರಾದ ಗಣೇಶ್ ಕಾರಂತ್ , ಇನ್ನರ್ ವೀಲ್ ಕ್ಲಬ್ ಅಧ್ಯಕ್ಷರಾದ ಶ್ರೀಮತಿ ಭಾನುಮತಿ, ಪಟ್ಟಣ ಪಂಚಾಯ್ತಿ ಮುಖ್ಯಾಧಿಕಾರಿ ಶ್ರೀ ನವೀನ್ ಕುಮಾರ್ , ನಿವೃತ್ತ ಶಿಕ್ಷಕರಾದ ರಾಮ, ಹಾಗೂ ಮುಕ್ತಿ ಧಾಮ ಟ್ರಸ್ಟ್ ನ ಪದಾಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Leave a Reply