ಕ.ಸಾ.ಪದಿಂದ ವೈದ್ಯ ದಂಪತಿಗಳಿಗೆ ಗೌರವ ಪುರಸ್ಕಾರ-2022

ಕನ್ನಡ ಸಾಹಿತ್ಯ ಪರಿಷತ್ತು ಉಡುಪಿ ಜಿಲ್ಲೆ , ಉಡುಪಿ ತಾಲೂಕು ಘಟಕ, ಮತ್ತು ಸಂಸ್ಕೃತಿ ವಿಶ್ವ ಪ್ರತಿಷ್ಠಾನ ರಿ. ಉಡುಪಿ, ಮಲಬಾರ್ ಗೋಲ್ಡ್ ಆಂಡ್ ಡೈಮಂಡ್ಸ್ ಉಡುಪಿ ಇವರ ಸಹಕಾರದೊಂದಿಗೆ ಜೂನ್ 30 ಗುರುವಾರ ವೈದ್ಯರ ದಿನಾಚರಣೆ ಪ್ರಯುಕ್ತ ಉಡುಪಿಯ ಮಲಬಾರ್ ಗೋಲ್ಡ್ ಅಂಡ್ ಡೈಮಂಡ್ಸ್ ಶಾಖೆಯಲ್ಲಿ ಜಿಲ್ಲೆಯ 10 ವೈದ್ಯ ದಂಪತಿಗಳಿಗೆ ಗೌರವ ಪುರಸ್ಕಾರ ನೀಡಿ ಗೌರವಿಸಲಾಯಿತು.

ಉಡುಪಿಯ ಜಿಲ್ಲಾಧಿಕಾರಿಯದ ಕೂರ್ಮರಾವ್ ಎಂ ಅವರು ಉಡುಪಿ ಜಿಲ್ಲೆಯ ಪ್ರಸಿದ್ಧ ವೈದ್ಯ ದಂಪತಿಗಳಾದ ಉಡುಪಿಯ ಡಾ. ಕ್ಯಾಪ್ಟನ್ ಹೇಮಚಂದ್ರ ಹೊಳ್ಳ ಹಾಗೂ ಡಾ. ಸುಲೋಚನ ಹೊಳ್ಳ ,ಮಣಿಪಾಲ ಕೆ.ಎಂ.ಸಿ ಯ ನಿವೃತ್ತ ವಿಭಾಗದ ಮುಖ್ಯಸ್ಥರಾದ ಡಾ. ಭಾಸ್ಕರಾನಂದ ಕುಮಾರ್ ಹಾಗೂ ಡಾ. ನಳಿನೀ ಭಾಸ್ಕರಾನಂದ ಕುಮಾರ್, ಹಿರಿಯಡ್ಕ ಕಾಮತ್ ಆಸ್ಪತ್ರೆಯ ಡಾ. ದೇವದಾಸ್ ಕಾಮತ್ ಹಾಗೂ ಡಾ. ಸುಧಾ ಡಿ. ಕಾಮತ್ , ಡಾ. ಎ. ವಿ ಬಾಳಿಗಾ ಆಸ್ಪತ್ರೆಯ ಆಡಳಿತ ನಿರ್ದೇಶಕರಾದ ಡಾ. ಪಿ . ವಿ ಭಂಡಾರಿ ಹಾಗೂ ಡಾ. ಸುಲತಾ ಭಂಡಾರಿ , ಕಾರ್ಕಳದ ಬೈಲೂರಿನ ಗುರುಕೃಪಾ ನರ್ಸಿಂಗ್ ಹೋಂ ಇದರ ಡಾ. ರಾಮಕೃಷ್ಣ ನಾಯಕ್ ಹಾಗೂ ಡಾ.ಗೀತಾ ನಾಯಕ್, ಕೋಟೇಶ್ವರದ ಎನ್ . ಆರ್ ಆಚಾರ್ಯ ಮೆಮೋರಿಯಲ್ ಆಸ್ಪತ್ರೆಯ ಡಾ. ಭಾಸ್ಕರ ಆಚಾರ್ಯ ಹಾಗೂ ಡಾ. ಸಬಿತಾ ಆಚಾರ್ಯ, ಕುಂದಾಪುರದ ಸರ್ಜನ್ ಆಸ್ಪತ್ರೆಯ ಡಾ. ಹೆಚ್. ವಿಶ್ವೇಶ್ವರ ಹಾಗೂ ಡಾ. ವನಿತಾಲಕ್ಷ್ಮಿ, ಹೆಬ್ರಿಯ ರಾಘವೇಂದ್ರ ಆಸ್ಪತ್ರೆಯ ಡಾ. ರಾಮಚಂದ್ರ ಐತಾಳ್ ಹಾಗೂ ಡಾ. ಭಾರ್ಗವಿ ಐತಾಳ , ಕುಂದಾಪುರದ ಆದರ್ಶ ಆಸ್ಪತ್ರೆಯ ಡಾ. ಆದರ್ಶ ಹೆಬ್ಬಾರ್ ಹಾಗೂ ಮಧು ಮಯೂರಿ, ಉಡುಪಿಯ ಸುನಾಗ್ ಆಸ್ಪತ್ರೆಯ ಡಾ. ನರೇಂದ್ರಕುಮಾರ್ ಹೆಚ್. ಎಸ್ ಹಾಗೂ ಡಾ. ವೀಣಾ ನರೇಂದ್ರ ಕುಮಾರ್ ಇವರನ್ನು ಪ್ರಶಸ್ತಿ ಪತ್ರ, ಫಲಕ ದೊಂದಿಗೆ ಗೌರವ ಪುರಸ್ಕಾರ -2022 ನ್ನು ನೀಡಿ ಗೌರವಿಸಿದರು.

ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನೀಲಾವರ ಸುರೇಂದ್ರ ಅಡಿಗ ಅಧ್ಯಕ್ಷತೆಯನ್ನು ವಹಿಸಿದ್ದರು. ಸಂಸ್ಕೃತಿ ವಿಶ್ವ ಪ್ರತಿಷ್ಠಾನ ಇದರ ಗೌರವಾಧ್ಯಕ್ಷ ಉಡುಪಿ ವಿಶ್ವನಾಥ್ ಶೆಣಿೈ, ಅಧ್ಯಕ್ಷರಾದ ಪ್ರೊಫೆಸರ್ ಶಂಕರ್, ಮಲಬಾರ್ ಗೋಲ್ಡ್ ಅಂಡ್ ಡೈಮಂಡ್ಸ್ ನ ಮುಖ್ಯಸ್ಥರಾದ ಹಫೀಜ್ ರೆಹಮಾನ್, ಕನ್ನಡ ಸಾಹಿತ್ಯ ಪರಿಷತ್ತು ಉಡುಪಿ ತಾಲೂಕು ಘಟಕದ ಅಧ್ಯಕ್ಷ ರವಿರಾಜ್ ಹೆಚ್. ಪಿ ಕ ಸಾ ಪ ಉಡುಪಿ ಜಿಲ್ಲಾ ಕೋಶಾಧ್ಯಕ್ಷರಾದ ಮನೋಹರ್ ಪಿ , ಕಸಾಪ ಉಡುಪಿ ತಾಲೂಕು ಗೌರವ ಕಾರ್ಯದರ್ಶಿ ರಂಜಿನಿ ವಸಂತ್ ,ಮಧು ಸೂದನ್ ಹೇರೂರು, ರಾಘವೇಂದ್ರ ನಾಯಕ್ ಉಪಸ್ಥಿತರಿದ್ದರು . ಹಾಸ್ಯ ಭಾಷಣ ಗಾರ್ತಿ ಸಂಧ್ಯಾ ಶೆಣೆೈ ಸ್ವಾಗತಿಸಿದರು. ವಿಘ್ನೇಶ್ವರ ಅಡಿಗ ಪ್ರಸ್ತಾವನೆ ಮಾಡಿದರು. ರಾಘವೇಂದ್ರ ಪ್ರಭು ಕರ್ವಾಲು ನಿರೂಪಿಸಿ, ಕಸಾಪ ಉಡುಪಿಯ ತಾಲೂಕಿನ ಗೌರವ ಕಾರ್ಯದರ್ಶಿ ಜನಾರ್ದನ್ ಕೊಡವೂರು ಧನ್ಯವಾದ ನೀಡಿದರು.

Leave a Reply