ಕನ್ನಡ ನಾಡು-ನುಡಿ ,ಸಂಸ್ಕೃತಿ ಸಾಹಿತ್ಯ ಹಾಗೂ ವೈದ್ಯಕೀಯ ಸೇವೆಗಾಗಿ ವೈದ್ಯ ದಂಪತಿಗಳಿಗೆ ಗೌರವ ಪುರಸ್ಕಾರ

ಕನ್ನಡ ಸಾಹಿತ್ಯ ಪರಿಷತ್ತು ಉಡುಪಿ ಜಿಲ್ಲೆ ,ಉಡುಪಿ ತಾಲೂಕು ಘಟಕ, ಸಂಸ್ಕೃತಿ ವಿಶ್ವ ಪ್ರತಿಷ್ಠಾನ (ರಿ) ಉಡುಪಿ , ಮಲಬಾರ್ ಗೋಲ್ಡ್ ಆಂಡ್ ಡೈಮಂಡ್ಸ್ ಉಡುಪಿ ಆಶ್ರಯದಲ್ಲಿ

ಕನ್ನಡ ನಾಡು-ನುಡಿ ,ಸಂಸ್ಕೃತಿ ಸಾಹಿತ್ಯ ಹಾಗೂ ವೈದ್ಯಕೀಯ ಸೇವೆಗಾಗಿ ವೈದ್ಯ ದಂಪತಿಗಳಿಗೆ ಗೌರವ ಪುರಸ್ಕಾರ- 2022

ಡಾII ನರೇಂದ್ರ ಕುಮಾರ್ ಹೆಚ್.ಎಸ್
ಡಾII ವೀಣಾ ನರೇಂದ್ರ ಕುಮಾರ್

ವೈದ್ಯೋ ನಾರಾಯಣ ಹರಿ
ನಮ್ಮ ಸಮಾಜ ಹಲವಾರು ವೈದ್ಯರು ತಮ್ಮ ಅಮೂಲ್ಯವಾದ ಸೇವೆಯ ಮೂಲಕ ಮನೆಮಾತಾಗಿದ್ದಾರೆ.

ಉಡುಪಿಯ ಪ್ರಸಿದ್ದ ಆಸ್ಪತ್ರೆಗಳಲ್ಲಿ ಒಂದಾದ ಸುನಾಗ್ ಆಸ್ಪತ್ರೆಯ ವೈದ್ಯಕೀಯ ನಿದೇ೯ಶಕರಾದ ಡಾII ನರೇಂದ್ರ ಕುಮಾರ್ ಹೆಚ್.ಎಸ್ ರವರು ಸಾಹಿತಿ,ವಾಗ್ಮಿ ಮತ್ತು ನಾಟಕಗಾರರಾಗಿದ್ದ ದಿ| ಹೆಚ್.ಎಲ್ ಸುಬ್ರಮಣ್ಯ ಹಾಗೂ ನಾಗರತ್ನ ರವರ ತ್ರತೀಯ ಪುತ್ರ. ಸರಕಾರಿ ಕೋಟದಲ್ಲಿ ದಾವಣಗೆರೆಯಲ್ಲಿ ಎಂ.ಬಿ.ಬಿ.ಎಸ್ ಶಿಕ್ಷಣವನ್ನು ಉನ್ನತ ಶ್ರೇಣಿಯಲ್ಲಿ ತೇಗ೯ಡೆ ಹೊಂದಿರುವುದು ಅವರ ಪ್ರತಿಭೆಗೆ ಹಿಡಿದ ಕೈಗನ್ನಡಿಯಾಗಿದೆ.

ತಮ್ಮ ವೃತ್ತಿ ಜೀವನವನ್ನು ಹಿರಿಯಡಕ ಪ್ರಾ.ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಯಾಗಿ ಈ ಆರೋಗ್ಯ ಕೇಂದ್ರವನ್ನು ರಾಜ್ಯದಲ್ಲಿ ಮಾದರಿ ಕೇಂದ್ರ ಮಾಡುವಲ್ಲಿ ಶ್ರಮಿಸಿದ್ದಾರೆ.

ಕೀಮ್ಸ್ ನಲ್ಲಿ ಕೀಲು ಮತ್ತು ಮೂಳೆ ವಿಭಾಗದಲ್ಲಿ ಸ್ನಾತ್ತಕೋತ್ತರ ಪದವಿ ಪಡೆದು, ಕುಂದಾಪುರದ ಸಕಾ೯ರಿ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸಿದ್ದಾರೆ.

ತಮ್ಮ ಆಸ್ಪತ್ರೆಯ ಮೂಲಕ ” ಸುನಾಗ್ ಸುಸ್ಥಿರ ಆರೋಗ್ಯ ” ಎಂಬ ಕನ್ನಡದಲ್ಲಿ ಆರೋಗ್ಯ ಮಾಹಿತಿ ಯನ್ನು ಕೊಡುದರ ಮೂಲಕ ಸಾಹಿತ್ಯ ಸೇವೆ ಮಾಡುತ್ತಿರುವುದು ಗಮನಾಹ೯ –

ಇವರ ಪತ್ನಿ ಡಾ|| ವೀಣಾ ನರೇಂದ್ರ ರವರು ಕೂಡ ಉತ್ತಮ ಅನಸ್ತೇಶಿಯಾ ವೈದ್ಯರಾಗಿ ಪತಿಯ ಯಶಸ್ಸಿಗೆ ತಮ್ಮ ಕೈಜೋಡಿಸಿದ್ದಾರೆ.

ಮಕ್ಕಳಾದ ಸುನವ್ಯ, ಸಂಹಿತಾ ಪ್ರತಿಭಾನ್ವಿತ ವಿದ್ಯಾಥಿ೯ಗಳಾಗಿ ಈಗಾಗಲೇ “ಆಟ್೯ ಅಂಡ್ ಆಟಿ೯ಕಲ್ ” ಎಂಬ ಪುಸ್ತಕ ಹೊರ ತಂದಿರುವುದು ಅಭಿನಂದನಾ ವಿಷಯ.

_ಪರಿಸರ ಸೇವೆ* ಪರಿಸರದ ಕುರಿತು ಅತೀವ ಆಸಕ್ತಿ ಯಿರುವ ಇವರು ತಮ್ಮ ಆಸ್ಪತ್ರೆಯ ಸುತ್ತ ಹಲವಾರು ಗಿಡಗಳನ್ನು ನೆಟ್ಟು ಪೋಷಿಸುತ್ತಿದ್ದಾರೆ.

ಹಕ್ಕಿಗಳ ಬಗ್ಗೆ ವಿಶೇಷ ಅಧ್ಯಯನ ಮಾಡಿರುವ ಇವರು ಉತ್ತಮ ವನ್ಯಜೀವಿ ಛಾಯಾಗ್ರಾಹಕರಾಗಿದ್ದಾರೆ. ಇವರು ಸೆರೆ ಹಿಡಿದ ಅನೇಕ ಹಕ್ಕಿಗಳ ಚಿತ್ರಗಳು ಬಹು ಜನರ ಪ್ರೀತಿಗೆ ವಾಗಿದೆ.
ಅಲ್ಲದೆ ಕನ್ನಡ ಶಾಲೆಗಳಿಗೆ ಸಹಾಯ ಹಸ್ತ ಚಾಚುತ್ತಿರುವುದು ಅಭಿನಂದನೀಯ.
ಕಸಾಪ ದ ಉಡುಪಿ ತಾಲೂಕಿನ ಸಲಹೆಗಾರರಾಗಿಯೂ ಮಾಗ೯ದಶ೯ನ ನೀಡುತ್ತಿದ್ದಾರೆ.

ಈ ವೈದ್ಯ ದಂಪತಿಯ ಸೇವೆ ಹೀಗೆಯೇ ಮುಂದುವರೆಯಲಿ ಎಂಬ ಆಶಯದೊಂದಿಗೆ
ಇವರ ಈ ಸೇವೆಗೆ ಇದೇ ಬರುವ ಜೂನ್ 30ರಂದು ಉಡುಪಿಯ ಮಲಬಾರ್ ಗೋಲ್ಡ್ ಆಂಡ್ ಡೈಮಂಡ್ಸ್ ಶಾಖೆಯಲ್ಲಿ 2:30ಕ್ಕೆ ನಡೆಯುವ ಸಮಾರಂಭದಲ್ಲಿ ಗೌರವ ಪುರಸ್ಕಾರ 2022 ನ್ನು ನೀಡಿ ಗೌರವಿಸುತ್ತಿದ್ದೇವೆ.

🖋️ ರಾಘವೇಂದ್ರ ಪ್ರಭು ಕರ್ವಾಲೋ

 
 
 
 
 
 
 
 
 

Leave a Reply