ಕನ್ನಡ ನಾಡು-ನುಡಿ ,ಸಂಸ್ಕೃತಿ ಸಾಹಿತ್ಯ ಹಾಗೂ ವೈದ್ಯಕೀಯ ಸೇವೆಗಾಗಿ ವೈದ್ಯ ದಂಪತಿಗಳಿಗೆ ಗೌರವ ಪುರಸ್ಕಾರ

ಕನ್ನಡ ಸಾಹಿತ್ಯ ಪರಿಷತ್ತು ಉಡುಪಿ ಜಿಲ್ಲೆ ,ಉಡುಪಿ ತಾಲೂಕು ಘಟಕ, ಸಂಸ್ಕೃತಿ ವಿಶ್ವ ಪ್ರತಿಷ್ಠಾನ (ರಿ) ಉಡುಪಿ , ಮಲಬಾರ್ ಗೋಲ್ಡ್ ಆಂಡ್ ಡೈಮಂಡ್ಸ್ ಉಡುಪಿ ಆಶ್ರಯದಲ್ಲಿ

ಕನ್ನಡ ನಾಡು-ನುಡಿ ,ಸಂಸ್ಕೃತಿ ಸಾಹಿತ್ಯ ಹಾಗೂ ವೈದ್ಯಕೀಯ ಸೇವೆಗಾಗಿ ವೈದ್ಯ ದಂಪತಿಗಳಿಗೆ ಗೌರವ ಪುರಸ್ಕಾರ- 2022

ಡಾII ಕ್ಯಾಪ್ಟನ್‌ ಹೇಮಚಂದ್ರ ಹೊಳ್ಳ 

ಡಾll ಸುಲೋಚನ ಹೆಚ್.ಹೊಳ್ಳ

ಬಹುಮುಖ ಪ್ರತಿಭೆಯ ವೈದ್ಯ ದಂಪತಿಗಳಾದ ಇವರ ಸಾಧನೆಗಳನ್ನು ವಿವರಿಸಲು ಪದಗಳೇ ಸಾಲದು.

ಡಾII ಹೇಮಚಂದ್ರ ಹೊಳ್ಳ ರವರು ಜನಿಸಿದ್ದು, ದ.ಕ ಜಿಲ್ಲೆಯ ಪುತ್ತೂರು- ಇವರ ತಾಯಿ ಗೌರಿ ದೇವಿ ಮಹಾನ್ ದೇಶಪ್ರೇಮಿಯಾಗಿದ್ದರು ಗಾಂಧೀಜಿಯವರು ಸ್ವಾತಂತ್ರ್ಯ ಹೋರಾಟ ದ ಕಹಳೆ ಊದಲು ಪುತ್ತೂರಿಗೆ ಬಂದಾಗ ಇವರು ತನ್ನ ಚಿನ್ನದ ಆಭರಣಗಳನ್ನು ಗಾಂಧೀಜಿಯವರಿಗೆ ದಾನವಾಗಿ ನೀಡಿದ್ದರು.

ಈ ಮಹಾನ್ ತಾಯಿಯ ಸುಪುತ್ರರಾದ ಡಾII ಹೇಮಚಂದ್ರ ಹೊಳ್ಳ ಕನಾ೯ಟಕ ಮೆಡಿಕಲ್ ಕಾಲೇಜಿನಿಂದ ವೈದ್ಯಕೀಯ ಶಿಕ್ಷಣ ಪೂರೈಸಿ , ಎಂ.ಎಸ್ ಪದವಿಯನ್ನು ಕೆ.ಎಂ.ಸಿ ಮಂಗಳೂರಿನಲ್ಲಿ ಪೂರೈಸಿದರು.

ಸೇನೆಯಲ್ಲಿ ದೇಶ ಸೇವೆ: – ದೇಶ ಸೇವೆಯನ್ನು ಮಾಡಬೇಕೆಂಬ ಇಚ್ಚೆಯಿಂದ 1967-1973 ರ ವರೆಗೆ ಭಾರತೀಯ ಸೇನೆಯಲ್ಲಿ ಆಮಿ೯ ಮೆಡಿಕಲ್ ಸ್ಟೋರ್ ನಲ್ಲಿ ಕ್ಯಾಪ್ಟನ್ ಪದವಿಯಲ್ಲಿ ಸೇವೆ ಸಲ್ಲಿಸಿದ್ದರು. ಬಂಗಾಳ ಮುಕ್ತಿ ಯುದ್ಧದ ವೇಳೆ ಅವರು ಸೇವೆಯಲ್ಲಿದ್ದರು.

ನಂತರ 1975-2000 ರವರೆಗೆ 25 ವಷ೯ಗಳ ಕಾಲ ರಾಜ್ಯ ಸಕಾ೯ರದ ಆರೋಗ್ಯ ಇಲಾಖೆಯಲ್ಲಿ ಹಿರಿಯ ಶಸ್ತ್ರಚಿಕಿತ್ಸಕರಾಗಿ ಸೇವೆ ಸಲ್ಲಿಸಿದ್ದರು.

10 ಸಾವಿರ ಲ್ಯಾಪ್ರೋಸ್ಕೊಪಿಕ್ ಸಜ೯ರಿ ‘ಮಾಡಿದ ಅಪೂವ೯ ಸಾಧನೆ ಇವರದ್ದಾಗಿದೆ.

ಬಹುಮುಖ ಪ್ರತಿಭೆ :- ಸಂಗೀತ, ಹಾಡುಗಾರಿಕೆ, ವಾಯಿಲಿನ್, ತಬ್ಲಾ ದಲ್ಲಿ ವಿಶೇಷ ಸಾಧನೆ ಮಾಡಿದ್ದಾರೆ. ಭಾರತೀಯ ವೈದ್ಯ ಸಂಘದ ಮಾಜಿ ಅಧ್ಯಕ್ಷರಾಗಿ, ಭಾರತೀಯ ಸಜ೯ನ್ ಅಸೋಸಿಯೇಶನ್ ನ ಮಾಜಿ ಅದ್ಯಕ್ಷರಾಗಿದ್ದಾರೆ. ಅವರ ಅಧಿಕಾರ ಅವಧಿಯಲ್ಲಿ ಉತ್ತಮ ಜನಪರ ಸೇವೆ ಸಲ್ಲಿಸಿದ್ದು, ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ಡಾ|| ಸುಲೋಚನ ಹೊಳ್ಳ ರವರು ತನ್ನ ವೈದ್ಯಕೀಯ ಶಿಕ್ಷಣ ಇಂಡೋರ್ ನಲ್ಲಿ ಪಡೆದಿದ್ದು, ಎಂ.ಡಿ ಪದವಿಯನ್ನು ಬಳ್ಳಾರಿ ಮೆಡಿಕಲ್ ಕಾಲೇಜಿನಲ್ಲಿ ಪೂರೈಸಿದ್ದಾರೆ.

1971-2008 ರವರೆಗೆ ಸುಮಾರು 37 ವಷ೯ಗಳ ಕಾಲ ಸಕಾ೯ರಿ ಸೇವೆಯಲ್ಲಿದ್ದು, ತನ್ವ ಸುಧೀಘ೯ 53 ವಷ೯ಗಳ ಕಾಲ ವೈದ್ಯ ಸೇವೆ ಸಲ್ಲಿಸಿ 1918 ರಿಂದ ನಿವೃತ್ತಿಯಾಗಿದ್ದಾರೆ.

ಸಂಗೀತ, ಪಾಕಶಾಸ್ತ್ರದಲ್ಲಿ ವಿಶೇಷ ಸಾಧನೆ ಮಾಡಿದ್ದಾರೆ.ಮಗಳು ದಂತ ವೈದ್ಯಯಾಗಿದ್ದಾರೆ.

ಹೀಗೆ ಅಪೂವ೯ ಸೇವೆ ಸಲ್ಲಿಸಿರುವ ಈ ದಂಪತಿಗಳ ಸಾಧನೆ ಅಭಿನಂದನೀಯ.

ಅದೇ ರೀತಿ ಸಾಹಿತ್ಯ ಕಾರ್ಯಕ್ರಮಗಳಿಗೆ ಸಹಾಯ ಹಸ್ತ ನೀಡುತ್ತಿರುವುದು ಸಂತೋಷದ ವಿಷಯ.

ಈ ದಂಪತಿಗಳ ದಣಿವರಿಯದ 5 ದಶಕದ ಈ ಸೇವೆಗೆ ಇದೇ ಬರುವ ಜೂನ್ 30ರಂದು ಉಡುಪಿಯ ಮಲಬಾರ್ ಗೋಲ್ಡ್ ಆಂಡ್ ಡೈಮಂಡ್ಸ್ ಶಾಖೆಯಲ್ಲಿ 2:30ಕ್ಕೆ ನಡೆಯುವ ಸಮಾರಂಭದಲ್ಲಿ ಗೌರವ ಪುರಸ್ಕಾರ 2022 ನ್ನು ನೀಡಿ ಗೌರವಿಸುತ್ತಿದ್ದೇವೆ.

🖋️ ರಾಘವೇಂದ್ರ ಪ್ರಭು ಕರ್ವಾಲು

 
 
 
 
 
 
 
 
 

1 COMMENT

Leave a Reply