ಕನ್ನಡ ನಾಡು-ನುಡಿ ,ಸಂಸ್ಕೃತಿ ಸಾಹಿತ್ಯ ಹಾಗೂ ವೈದ್ಯಕೀಯ ಸೇವೆಗಾಗಿ ವೈದ್ಯ ದಂಪತಿಗಳಿಗೆ ಗೌರವ ಪುರಸ್ಕಾರ

ಕನ್ನಡ ಸಾಹಿತ್ಯ ಪರಿಷತ್ತು ಉಡುಪಿ ಜಿಲ್ಲೆ ,ಉಡುಪಿ ತಾಲೂಕು ಘಟಕ, ಸಂಸ್ಕೃತಿ ವಿಶ್ವ ಪ್ರತಿಷ್ಠಾನ (ರಿ) ಉಡುಪಿ , ಮಲಬಾರ್ ಗೋಲ್ಡ್ ಆಂಡ್ ಡೈಮಂಡ್ಸ್ ಉಡುಪಿ ಆಶ್ರಯದಲ್ಲಿ

ಕನ್ನಡ ನಾಡು-ನುಡಿ ,ಸಂಸ್ಕೃತಿ ಸಾಹಿತ್ಯ ಹಾಗೂ ವೈದ್ಯಕೀಯ ಸೇವೆಗಾಗಿ ವೈದ್ಯ ದಂಪತಿಗಳಿಗೆ ಗೌರವ ಪುರಸ್ಕಾರ- 2022

ಡಾ|| ದೇವದಾಸ್‌ ಕಾಮತ್
ಡಾ|| ಸುಧಾ ಡಿ.ಕಾಮತ್

ಡಾ|| ದೇವದಾಸ್‌ ಕಾಮತ್
ಡಾ|| ಸುಧಾ ಡಿ.ಕಾಮತ್
ಇವರು ಹಿರಿಯಡಕ ‘ಕಾಮತ್ ನಸಿ೯೦ಗ್ ಹೋಮ್’ ಇದರ ಮುಖ್ಯಸ್ಥರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಡಾ|| ದೇವದಾಸ್‌ ಕಾಮತ್
ರವರು ಶಾಲಾ ಜೀವನದಲ್ಲಿ ಪ್ರತಿಭಾನ್ವಿತ ವಿದ್ಯಾಥಿ೯ಯಾಗಿದ್ದರು. ಶಾಲಾ ಕಾಲೇಜಿನ ಪ್ರತಿಯೊಂದು ಕಾಯ೯ಕ್ರಮಗಳಲ್ಲಿ ತುಂಬಾ ಆಸಕ್ತಿಯಿಂದ ಭಾಗವಹಿಸಿ ಕ್ರಿಯಾಶೀಲರಾಗಿದ್ದರು. ಈ ಮೂಲಕ ಅವರು ಶಿಕ್ಷಕರ ಪ್ರೀತಿಯ ಶಿಷ್ಯರಾಗಿದ್ದರು.

ತಮ್ಮ ವೈದ್ಯಕೀಯ ಶಿಕ್ಷಣವನ್ನು ಮೈಸೂರು ಮೆಡಿಕಲ್ ಕಾಲೇಜಿನಲ್ಲಿ ಮುಗಿಸಿರುವ ಇವರು, 1977 ರಿಂದ ನಿರಂತರವಾಗಿ ಗ್ರಾಮೀಣ ಭಾಗದಲ್ಲಿ ವೈದ್ಯಕೀಯ ಸೇವೆಯನ್ನು ಮುಂದುವರೆಸುತ್ತಿದ್ದಾರೆ.ಸತತ 45 ವಷ೯ಗಳ ಈ ವೈದ್ಯಕೀಯ ಸೇವೆ ಅಭಿನಂದನೀಯ.
1995 ರಲ್ಲಿ ಉಡುಪಿ ತಾಲೂಕಿನ ಗ್ರಾಮೀಣ ಭಾಗದಲ್ಲಿ ಜನರಿಗೆ ವೈದ್ಯಕೀಯ ಸೇವೆ ಸಿಗಬೇಕೆಂಬ ಮಹಾದಾಸೆಯಿಂದ ಕಾಮತ್ ನಸಿ೯oಗ್ ಹೋಮ್ ಸ್ಥಾಪಿಸಿದರು.ಮುಖ್ಯವಾಗಿ ಬಾಣಂತಿಯರ ಆರೈಕೆ ಸೇರಿದಂತೆ ನಾವಿರಾರು ರೋಗಿಗಳಿಗೆ ಆರೋಗ್ಯ ಸೇವೆ ನೀಡಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಅತೀ ಕಡಿಮೆ ಶುಲ್ಕದಲ್ಲಿ ಉತ್ತಮ ಆರೋಗ್ಯ ಸೇವೆ ನೀಡಿ ಜನರ ಪ್ರೀತಿಯ ವೈದ್ಯರಾಗಿ ಜನಾನುರಾಗಿದ್ದಾರೆ.

ಶಿಕ್ಷಣ, ಕನ್ನಡ ಸೇವೆ: – ಇಲ್ಲಿನ ಸಕಾ೯ರಿಕನ್ನಡ ಶಾಲೆಯ ಉಸ್ತುವಾರಿ ಸಮಿತಿಯ ಅಧ್ಯಕ್ಷರಾಗಿದ್ದ ಸಂದಭ೯ ಶಾಲೆಯ ಸವೊ೯ತೋಮುಖ ಬೆಳವಣಿಗೆಗೆ ಕಾರಣರಾದವರು.
ಶಾಲೆಯ ಬೆಳವಣಿಗೆ ಕನ್ನಡ ಶಾಲೆಯ ಮಕ್ಕಳ ಶಿಕ್ಷಣ ಬೆಳವಣಿಗೆಗೆ ನಿರಂತರ ಕೊಡುಗೆ ನೀಡುತ್ತಿದ್ದಾರೆ.
ಅದೇ ರೀತಿ ಸಾಹಿತ್ಯ ಕಾರ್ಯಕ್ರಮಗಳಿಗೆ ಸಹಾಯ ಹಸ್ತ ನೀಡುತ್ತಿರುವುದು ಅಭಿನಂದನೀಯ ವಿಷಯ.

ಆರೋಗ್ಯ ಮತ್ತು ಸಾಮಾಜಿಕ ಕಾಯ೯: –
ನಿರಂತರವಾಗಿ ಆರೋಗ್ಯ ಶಿಬಿರಗಳನ್ನು ನಡೆಸುದಲ್ಲದೆ, ಅನೇಕ ಆರೋಗ್ಯ ಸಂಬಂಧ ಕಾಯ೯ಕ್ರಮ ನಡೆಸುತ್ತಿದ್ದಾರೆ.
ಹಿರಿಯಡಕ ಗ್ರಾಮದ ಅನೇಕ ಸಂಘ- ಸಂಸ್ಥೆಗಳಿಗೆ ಬೆಂಬಲ ಸೂಚಿಸಿ ತನ್ನಿಂದ ಆದ ಸಹಾಯ ಮಾಡುತ್ತಿದ್ದಾರೆ.

 ಪರಿಸರ ಸೇವೆ: – ಡಾII ಸುಧಾ ಕಾಮತ್ ರವರು ಪರಿಸರ ಪ್ರೀಯರು, ಆರೋಗ್ಯ ಸೇವೆಯೊಂದಿಗೆ ಪರಿಸರ ಸೇವೆ ಮಾಡುತ್ತಿರುವುದು ಉತ್ತಮವಾದ ಕಾಯ೯.
ಆಸ್ಪತ್ರೆಯ ಸುತ್ತಮುತ್ತ ಅನೇಕ ಗಿಡ ಮರಗಳನ್ನು ನೆಟ್ಟು ಪೋಷಿಸುತ್ತಿದ್ದಾರೆ. ಈ ರೀತಿಯಲ್ಲಿ ದಣಿವರಿಯದ ಅವರ ನಗು ಮುಖ ದ ಸೇವೆಗೆ ಅಭಿಮಾನಿ ಬಳಗವೇ ಸಾಕ್ಷಿಯಾಗಿದೆ. 2 ಪುತ್ರಿಯರ ಬೆಂಬಲ ಮತ್ತು ವೈದ್ಯ ಅಳಿಯಂದಿರ ಸಹಾಯದಿಂದ ಈ ಸಂಸ್ಥೆ ಮತ್ತಷ್ಟು ಎತ್ತರಕ್ಕೆ ಬೆಳೆಯುತ್ತಿದೆ. ಇದೀಗ ಡೇ ಕೇರ್ ನೊಂದಿಗೆ ಈ ಸಂಸ್ಥೆ ಕಾಯ೯ಚರಿಸುತ್ತಿದೆ.
ಈ ದಂಪತಿಗಳ ದಣಿವರಿಯದ 4 ದಶಕದ ಈ ಸೇವೆಗೆ
ಇದೇ ಬರುವ ಜೂನ್ 30ರಂದು ಉಡುಪಿಯ ಮಲಬಾರ್ ಗೋಲ್ಡ್ ಆಂಡ್ ಡೈಮಂಡ್ಸ್ ಶಾಖೆಯಲ್ಲಿ 2:30ಕ್ಕೆ ನಡೆಯುವ ಸಮಾರಂಭದಲ್ಲಿ
ಗೌರವ ಪುರಸ್ಕಾರ 2022 ನ್ನು ನೀಡಿ ಗೌರವಿಸುತ್ತಿದ್ದೇವೆ.

🖋️ ರಾಘವೇಂದ್ರ ಪ್ರಭು ಕರ್ವಾಲು

 
 
 
 
 
 
 
 
 
 
 

Leave a Reply