ಶಿಕ್ಷಕ ಗುರುವಾದಾಗ ಶಿಕ್ಷಣ ಪರಿಪೂರ್ಣ- ಡಾ.ಕರುಣಾಕರ್ ಕೋಟೆಗಾರ್.

ಇಪ್ಪತ್ತೊಂದನೇ ಶತಮಾನದಲ್ಲಿ ಶಿಕ್ಷಕರು ವಿದ್ಯಾರ್ಥಿಗಳ ಜೊತೆಗೆ ಹೊಂದಿಕೊಳ್ಳಬೇಕಾದ ಅನಿವಾರ್ಯತೆ ಎದುರಾಗಿದ್ದು ದಿನನಿತ್ಯದ ಸಮಸ್ಯೆಗಳನ್ನು ಸಮರ್ಥವಾಗಿ ನಿಭಾಯಿಸಿ ಪರಿಹಾರ ಕಂಡುಕೊಂಡು ಮುನ್ನಡೆದಾಗ ಸದೃಢ ಶಿಕ್ಷಕರಾಗಿ ಹೊರಹೊಮ್ಮಬಹುದು. ವಿದ್ಯಾರ್ಥಿಯ ಸರ್ವತೋಮುಖ ಬೆಳವಣಿಗೆ ರಾಷ್ಟ್ರೀಯ ಶಿಕ್ಷಣ ನೀತಿಯ ಮುಖ್ಯ ಉದ್ದೇಶವಾಗಿದ್ದು ಗುರುಕುಲ ಮಾದರಿಯಲ್ಲಿ ನವೀನ ಶಿಕ್ಷಣವನ್ನು ಒದಗಿಸಿದಾಗ ಮಾತ್ರ ಇದು ಸಾಧ್ಯವಾಗುವುದು. ಶಿಕ್ಷಕನು ಮಹಾಗುರುವಾಗುವುದು ಒಂದು ಸುದೀರ್ಘ ಪಯಣವಾಗಿದ್ದು ಇದನ್ನು ಸಾಧಿಸಿದಾಗ ಮಾತ್ರ ವಿದ್ಯೆಯ ಜೊತೆಗೆ ಸಂಸ್ಕಾರಗಳು ಮೂಡಿ ವಿದ್ಯಾರ್ಥಿಯು ಪರಿಪೂರ್ಣನಾಗುವನು ಎಂಬುದಾಗಿ ಮಣಿಪಾಲದ ಎಂ.ಐ.ಟಿ ಯ ಡಾಟಾ ಸೈನ್ಸ್ ಹಾಗೂ ಕಂಪ್ಯೂಟರ್ ಅಪ್ಲಿಕೇಶನ್ ವಿಭಾಗದ ಮುಖ್ಯಸ್ಥರು ಹಾಗೂ ಮಂಗಳೂರು ವಿಶ್ವವಿದ್ಯಾನಿಲಯದ ಸಿಂಡಿಕೇಟ್ ಸದಸ್ಯರಾದ ಡಾ.ಕರುಣಾಕರ್ ಕೋಟೆಗಾರ್ ಹೇಳಿದರು.
ಅವರು ಕುಂಜಿಬೆಟ್ಟು ಉಪೇಂದ್ರ ಪೈ ಮೆಮೋರಿಯಲ್ ಕಾಲೇಜಿನಲ್ಲಿ ಇತ್ತೀಚೆಗೆ ಹಮ್ಮಿಕೊಂಡ ಪರಿಣಾಮಕಾರಿ ತರಗತಿ ನಿರ್ವಹಣೆ- ತರಬೇತಿ ಶಿಬಿರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಪ್ರವಚನ ನೀಡುತ್ತಿದ್ದರು.
ಕಾಲೇಜಿನ ಪ್ರಾಚಾರ್ಯರಾದ ಡಾ.ಮಧುಸೂದನ್ ಭಟ್ ಅಧ್ಯಕ್ಷರಾಗಿದ್ದರು. ಉಪನ್ಯಾಸಕಿ ಶ್ರೀಮತಿ ಪ್ರಭಾ ಕಾಮತ್ ಅತಿಥಿಗಳನ್ನು ಪರಿಚಯಿಸಿದರು, ಉಪನ್ಯಾಸಕಿ ಶ್ರೀಮತಿ ಸಿಬಿ ಪೌಲ್ ವಂದಿಸಿದರು.

 
 
 
 
 
 
 
 
 
 
 

Leave a Reply