Janardhan Kodavoor/ Team KaravaliXpress
23.4 C
Udupi
Saturday, February 4, 2023
Sathyanatha Stores Brahmavara

ಹಾಸ್ಯ ನಟ ಕಾರ್ತಿಕ್ ಬ್ರಹ್ಮಾವರ ಇನ್ನಿಲ್ಲ

ಬ್ರಹ್ಮಾವರ: ಉದಯೋನ್ಮುಖ ರಂಗಭೂಮಿ ಕಲಾವಿದ ಹಾಗೂ ಹಾಸ್ಯ ನಟರಾಗಿದ್ದ ಕಾರ್ತಿಕ್ ಬ್ರಹ್ಮಾವರ (31) ಕುಸಿದು ಬಿದ್ದು ಮೃತಪಟ್ಟಿದ್ದಾರೆ.

ಕಾರ್ತಿಕ್ ಬ್ರಹ್ಮಾವರ್ ಕೆಲವು ತಿಂಗಳುಗಳಿಂದ ವಿಪರೀತ ಕೆಮ್ಮಿನಿಂದ ಬಳಲುತ್ತಿದ್ದರು ಎನ್ನಲಾಗಿದೆ. ಸಹೋದರಿ ಮನೆಯಲ್ಲಿ ಕಾರ್ಯಕ್ರಮದಲ್ಲಿ ಕುಳಿತಿದ್ದ ವೇಳೆ ಏಕಾಏಕಿ ಕುಸಿದುಬಿದ್ದಿದ್ದಾರೆ.

ಕೂಡಲೇ ಅವರನ್ನು ಮಣಿಪಾಲ್ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಚಿಕಿತ್ಸೆ ಫಲಕಾರಿ ಯಾಗದೆ ಮೃತಪಟ್ಟಿದ್ದಾರೆ. ಮೃತರು ತಾಯಿ ಮತ್ತು ಸಹೋದರನನ್ನು ಅಗಲಿದ್ದಾರೆ.

ಕಾರ್ತಿಕ್ ಬ್ರಹ್ಮಾವರ್ ಹಲವಾರು ಹಾಸ್ಯ ಪಾತ್ರಗಳಲ್ಲಿ ಅಭಿನಯಿಸುವ ಮೂಲಕ ಅಪಾರ ಅಭಿಮಾನಿಗಳನ್ನು ಗಳಿಸಿದ್ದರು.

ಖ್ಯಾತ ಕಲಾವಿದ ಮನು ಹಂದಾಡಿ ತಂಡದಲ್ಲಿ ಕಾರ್ತಿಕ್ ಗುರುತಿಸಿಕೊಂಡಿದ್ದರು. ಅಲ್ಲದೆ ಖ್ಯಾತ ನಿರ್ದೇಶಕ ರಾಜ್ ಗುರು ಹೊಸಕೋಟೆ ಅವರೊಂದಿಗೂ ಗುರುತಿಸಿಕೊಂಡಿದ್ದರು.

- Advertisement -

ಸಂಬಂಧಿತ ಸುದ್ದಿ

Leave a Reply

ಛಾಯಾಂಕಣ

ಇತ್ತೀಚಿನ ಸುದ್ದಿ

error: Content is protected !!