ಕಾರ್ಕಳದ ಹಿಂದು ಜಾಗರಣ ವೇದಿಕೆಯು ತನ್ನ ನಿರಂತರ ಸಾಮಾಜಮುಖಿ ಕಾರ್ಯಕ್ರಮದಂಗವಾಗಿ ಬೈಲೂರು ಮತ್ತು ಹೊಸ್ಮಾರಿನಲ್ಲಿ ರಕ್ತ ನೆರವು ಎಂಬ ಕಾರ್ಯಕ್ರಮವನ್ನು ಆಯೋಜಿಸಿತ್ತು.
ಹಿಂದು ಜಾಗರಣ ವೇದಿಕೆಯ ಕಾರ್ಯಕರ್ತರು ಮತ್ತು ಹಿಂದು ಜಾಗರಣ ವೇದಿಕೆಯ ಹಿತೈಷಿ ಬಂಧುಗಳು ಸ್ವಯಂಪ್ರೇರಿತವಾಗಿ ರಕ್ತದಾನ ಮಾಡಿ ದಾಖಲೆಯ ಸುಮಾರು 240 ಯುನಿಟ್ ರಕ್ತ ಸಂಗ್ರಹ ಆಗುವಲ್ಲಿ ತಮ್ಮ ಅಭೂತಪೂರ್ವ ಕೊಡುಗೆ ನೀಡಿದರು.