ಡಾ। ಕೋಟ ಶಿವರಾಮ ಕಾರಂತರ ಸ್ಮರಣಾರ್ಥ ಬೃಹತ್ ಉಚಿತ ಆರೋಗ್ಯ ಶಿಬಿರ

ಸಾಲಿಗ್ರಾಮ ಶ್ರೀ ಗುರುನರಸಿಂಹ ದೇವಸ್ಥಾನದ ಜ್ಞಾನಮಂದಿರದಲ್ಲಿ ಮಹೇಶ್ ಆಸ್ಪತ್ರೆ, ಬ್ರಹ್ಮಾವರ, ಗೆಳೆಯರ ಬಳಗ(ರಿ.)ಕಾರ್ಕಡ ಹಾಗೂ ಬ್ರಾಹ್ಮಣ ಮಹಾಸಭಾ ಸಾಲಿಗ್ರಾಮ ವಲಯ ಸಂಯುಕ್ತ ಆಶ್ರಯದಲ್ಲಿ ಡಾ। ಕೋಟ ಶಿವರಾಮ ಕಾರಂತರ ಸ್ಮರಣಾರ್ಥ ಬೃಹತ್ ಉಚಿತ ಆರೋಗ್ಯ ಶಿಬಿರ ಸೆ 4 ರ ಆದಿತ್ಯವಾರ ಬೆಳ್ಳಿಗ್ಗೆ 10ರಿಂದ 1 ರ ವರೆಗೆ ಹಮ್ಮಿಕೊಳ್ಳಲಾಗಿದೆ.

ಆಸ್ಪತ್ರೆಯ ತಜ್ಞ ವೈದ್ಯರುಗಳು, ಕಣ್ಣು, ಕಿವಿ, ಮೂಗು , ಮಕ್ಕಳ ಖಾಯಲೆ, ಹೃದ್ರೋಗ, ಸ್ರೀ ರೋಗ, ಹಾಗೂ ಸಾಮಾನ್ಯರೋಗಗಳ ತಪಾಸಣೆ ನಡೆಸಲಿದ್ದಾರೆ ಹಾಗೂ ರಕ್ತ ಪರೀಕ್ಷೆ, ಇಸಿಜಿ , ಮತ್ತು ಲಭ್ಯವಿರುವ ಔಷಧವನ್ನು ಉಚಿತವಾಗಿ ನೀಡಲಾಗುವುದು.

ಶಿಬಿರವನ್ನು ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ಶ್ರೀ ಡಾ ಕೆ. ಎಸ್ ಕಾರಂತರು ಉದ್ಘಾಟಿಸಲಿದ್ದಾರೆ. ಶಿಬಿರದ ಸಂಪೂರ್ಣ ಪ್ರಯೋಜನ ಸಾರ್ವಜನಿಕರು ಪಡೆಯಬೇಕಾಗಿ ಸಂಘಟಕರು ವಿನಂತಿಸಿದ್ದಾರೆ

Leave a Reply