ಕಾರ್ಕಡ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವನಮಹೋತ್ಸವ

ಕೋಟ: ಪ್ರತಿಯೊರ್ವರಲ್ಲೂ ಪರಿಸರ ಕಾಳಜಿ ಇದ್ದರೆ ಮುಂದಿನ ತಲೆಮಾರಿಗೆ ಪ್ರತಿಫಲ ಖಂಡಿತಾ ಲಭಿಸುತ್ತದೆ ಎಂದು ರೋಟರಿ ಕ್ಲಬ್ ಹಂಗಾರಕಟ್ಟೆ ಸಾಸ್ತಾನ ಇದರ ನಿಕಟಪೂರ್ವಾಧ್ಯಕ್ಷ ಮುರುಳಿಧರ ನಾಯರಿ ಹೇಳಿದರು.
ಕಾರ್ಕಡ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಇಲ್ಲಿ ಸಾಲಿಗ್ರಾಮದ ಮಹಾಲಸಾ ಎಂಟರ್ಪ್ರೈಸಸ್ ವತಿಯಿಂದ ಹಮ್ಮಿಕೊಳ್ಳಲಾದ ವನಮಹೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿ ಪರಿಸರ ಕಾಳಜಿಯ ಕುರಿತು 50 ವರ್ಷ ಹಿಂದೆಯೇ ಸರಕಾರ ಜನಸಾಮಾನ್ಯರನ್ನು ಜಾಗೃತಗೊಳಿಸಿತ್ತು ಆದರೆ ಅರ್ಥೈಸಿಕೊಳ್ಳದ ಜನರು ಕಾಡು ಕಡಿದು ನಾಡು ಮಾಡುವ ತವಕದಲ್ಲೆ ತಲ್ಲಿನರಾಗಿದ್ದಾರೆ, ಅಲ್ಲದೆ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಸಾಕಷ್ಟು ಮರಗಳನ್ನು ತೆರವುಗೊಳಿಸಲಾಗಿದೆ ಈ ಹಿನ್ನಲ್ಲೆಯಲ್ಲಿ ಶಾಲಾ ಮಕ್ಕಳಿಗೆ ಪರಿಸರ ಜಾಗೃತಿ ಮೂಲಕ ಗಿಡಗಳನ್ನು ಬೆಳೆಸುವ ಉದ್ಯಮಿಗಳ ಕಾರ್ಯ ಶ್ಲಾಘನೀಯ ಎಂದು ಅಭಿಪ್ರಾಯಪಟ್ಟರು.

ಮಹಾಲಸಾ ಎಂಟರ್ಪ್ರೈಸಸ್ ಸಾಲಿಗ್ರಾಮ ಇದರ ಮಾಲಿಕ ನಿತ್ಯಾನಂದ ಶ್ಯಾನುಭಾಗ್ ಗಿಡ ವಿತರಿಸಿ ಪರಿಸರ ಸಂದೇಶವನ್ನು ವಿದ್ಯಾರ್ಥಿಗಳಿಗೆ ನೀಡಿದರು.
ಶಾಲಾ ಎಸ್‌ಡಿಎಂಸಿ ಅಧ್ಯಕ್ಷ ಅರುಣ್ ಅಡಿಗ ಅಧ್ಯಕ್ಷತೆ ವಹಿಸಿದ್ದರು.
ಸಿಂಡಿಕೇಟ್ ಬ್ಯಾಂಕ್ ನಿವೃತ್ತ ಅಧಿಕಾರಿ ಮನೋಹರ್ ಭಟ್,ಎಸಿಸಿ ಲಿ.ಉಡುಪಿ ಇದರ ಗಣೇಶ್ ಶೆಣೈ,ಉದ್ಯಮಿ ಕೇಶವ ಶ್ಯಾನುಭಾಗ್,ರಾಮಚಂದ್ರ ಶ್ಯಾನುಭಾಗ್,ಅವಿನಾಶ್ ಶ್ಯಾನುಭಾಗ್, ನಿವೇದಿತಾ ಎನ್ ಶ್ಯಾನುಭಾಗ್, ಶಿಕ್ಷಕ ವೃಂದ ಮತ್ತಿತರರು ಉಪಸ್ಥಿತರಿದ್ದರು.ಕಾರ್ಯಕ್ರಮವನ್ನು ಶಾಲಾ ಮುಖ್ಯ ಶಿಕ್ಷಕಿ ಲಲಿತಾ ಸ್ವಾಗತಿಸಿ ನಿರೂಪಿಸಿ ವಂದಿಸಿದರು.

 
 
 
 
 
 
 
 
 
 
 

Leave a Reply