ಕಾರ್ಕಡ ಹೊಸ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಸಂತೋತ್ಸವ ಆಚರಣೆ

ಕಾರ್ಕಡ ಹೊಸ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ದಿ14/04/22 ರಂದು ವಸಂತೋತ್ಸವವನ್ನು ಸಂಭ್ರಮದಿಂದ ಆಚರಿಸಲಾಯ್ತು. ಅಂದು ಬೆಳ್ಳಿಗ್ಗೆಧ್ವಜಾರೋಹಣವನ್ನು ಸಾಲಿಗ್ರಾಮ ಪ. ಪಂಚಾಯ್ತು ಸದಸ್ಯೆ ಶ್ರೀಮತಿ ಗಿರಿಜಾ ಪೂಜಾರ್ತಿ ನೆರವೇರಿಸಿ ಶುಭ ಹಾರೈಸಿದರು. ಡಾ. ಬಿ. ಆರ್. ಅಂಬೇಡ್ಕರ್ ಭಾವ ಚಿತ್ರಕ್ಕೆಗಣ್ಯರು ಪುಷ್ಪನಮನ ಗೈದು ಅವರ ಜನ್ಮದಿನ ಆಚರಿಸಲಾಯ್ತು. ಸಂಜೆಯ ಕಾರ್ಯಕ್ರಮದಲ್ಲಿ ಸಮಾರಂಭದ ಅಧ್ಯಕ್ಷತೆಯನ್ನು ಸಾಲಿಗ್ರಾಮ ಪ. ಪ ಅಧ್ಯಕ್ಷರಾದ ಶ್ರೀಮತಿ ಸುಲತಾ ಹೆಗ್ಡೆ ವಹಿಸಿದ್ದರು. ಶಾಲಾ ಮುಖ್ಯೋಪಾಧ್ಯಾಯ ಶ್ರೀ ಎನ್ ಪ್ರಭಾಕರ ಕಾಮತ್ ಸ್ವಾಗತಿಸಿದರು. ಕರ್ಣಾಟಕ ಬ್ಯಾಂಕ್ ಉಚಿತವಾಗಿ ನೀಡಿದ ವಾಹನದತಂಗುದಾಣದ ಉದ್ಘಾಟನೆಯನ್ನು ಶ್ರೀ ಗುರುನರಸಿಂಹ ದೇವಸ್ಥಾನದ ಧರ್ಮದರ್ಶಿ ಶ್ರೀ ಅನಂತ ಪದ್ಮನಾಭ ಐತಾಳರು ನೆರವೇರಿಸಿ, ಶುಭ ಹಾರೈಸಿದರು. ಮುಖ್ಯ ಅಭ್ಯಾಗತರಾಗಿ ಆಗಮಿಸಿದ ಅಖಿಲ ಬಾರತ ಲೆಕ್ಕ ಪರಿಶೋಧಕರ ಸಂಸ್ಥೆಯ ಮಾಜಿ ಅಧ್ಯಕ್ಷ ಶ್ರೀ CA ಎಸ್. ಎಸ್. ನಾಯಕ್ ಇವರು ದಿ. ಎನ್. ವಾಸುದೇವ ಕಾಮತರ ಭಾವ ಚಿತ್ರ ಅನಾವರಣ ಮಾಡಿ, ಕನ್ನಡ ಮಾಧ್ಯಮದ ಈ ಶಾಲೆ ಮಕ್ಕಳ ಕಲಿಕೆಗಾಗಿ ಹತ್ತು ಹಲವು ಉಪಯುಕ್ತ ವ್ಯವಸ್ಥೆಯನ್ನು ರೂಪಿಸಿ ಕಾರ್ಯಗತ ಗೊಳಿಸುತ್ತಿರುವ ವಿಷಯ ತುಂಬಾ ಶ್ಲಾಘನೀಯ ಎಂದರು . ಕನ್ನಡ ಶಾಲೆಯನ್ನು ಉಳಿಸಿ ಬೆಳಸುವಲ್ಲಿ ಅಧ್ಯಪಕವೃಂದದವರ ಶ್ರಮ ತುಂಬಾ ಸ್ತುತ್ಯಾರ್ಹ ಎಂದರು. ಸಮಾರಂಭದಲ್ಲಿ ಸಾಲಿಗ್ರಾಮ ಪ. ಪಂಚಾಯ್ತು ಸದಸ್ಯರಾದ ಶ್ರೀ ರಾಜು ಪೂಜಾರಿ, ಕೆನರಾಬ್ಯಾಂಕ್ ಡಿವಿಜನಲ್ ಮೇನೇಜರ್ ಆದ ಶ್ರೀ ರಮೇಶ. ಕೆ. ಪೈ, ಕಾರ್ಕಡ ಗೆಳಯರ ಬಳಗ(ರಿ.) ಇದರ ಅದ್ಯಕ್ಷರಾದ ಶ್ರೀ ಕೆ. ತಾರಾನಾಥ ಹೊಳ್ಳ ಹಾಗೂ ಎಸ್.ಡಿ. ಎಮ್. ಸಿ. ಅಧ್ಯಕ್ಷ ಶ್ರೀ ಕೆ. ಶುಕ್ರ ಪೂಜಾರಿ ಉಪಸ್ಥಿತರಿದ್ದು ಶುಭ ಹಾರೈಸಿದರು. ಸಮಾರಂಭದಲ್ಲಿ ಶ್ರೀ ವಿಶ್ವನಾಥ ಶೆಣೈ, ಶ್ರೀ ಎಚ್ ರತ್ನಾಕರ ಶೆಟ್ಟಿ, ಶ್ರೀಮತಿ ರಮಾದೇವಿ, ಹಾಗೂ ನಿವೃತ್ತ ಯೋಧರಾದ ಶ್ರೀ ಶರತ್ ಕುಮಾರ ನಾಯರಿ,ಮತ್ತು ಶ್ರೀ ನಾಗೇಶ ಪೂಜಾರಿ ಯನ್ನು ವೇದಿಕೆಯಲ್ಲಿದ್ದ ಗಣ್ಯರು ಸನ್ಮಾನಿಸಿದರು. ಬಹುಮಾನ, ದತ್ತಿನಿಧಿ ವಿತರಣೆಯನ್ನು ವೇದಿಕೆಯಲ್ಲಿ ಉಪಸ್ಥಿತರಿದ್ದ ಗಣ್ಯರು ನೆರವೇರಿಸಿದರು. ಅಧ್ಯಾಪಕ ಶ್ರೀ ನಾರಾಯಣ ಆಚಾರ್ಯ ಕಾರ್ಯಕ್ರಮ ನೀರ್ವಹಿಸಿದರು. ಕೊನೆಯಲ್ಲಿ ಅಧ್ಯಾಪಕ ಶ್ರೀ ಸತ್ಯನಾರಾಯಣ ವಂದನಾರ್ಪಣೆ ಗೈದರು. ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮ ಜನಮನ ರಂಜಿಸಿತು.

 
 
 
 
 
 
 
 
 
 
 

Leave a Reply