ಕಾರ್ಗಿಲ್ ವಿಜಯೋತ್ಸವವನ್ನು ನೆನೆಯೋಣ- ವಿಜಯ್ ಕೊಡವೂರು

ಕೊಡವೂರು ವಾರ್ಡಿನಲ್ಲಿ ಕಾರ್ಗಿಲ್ ವಿಜಯೋತ್ಸವದ ದಿನವನ್ನು ಪಾಳೆಕಟ್ಟೆಯಲ್ಲಿಆಚರಿಸಲಾಯಿತು.  ಈ ಸಂಧರ್ಬದಲ್ಲಿ ಭಾರತೀಯ ಸೇನೆಯ ನಿವೃತ್ತ ಅಧಿಕಾರಿ ಪದ್ಮನಾಭ ಶೇರಿಗಾರ್ ಇವರನ್ನು ಗೌರವಿಸಲಾಯಿತು. ಈ ಸಂದರ್ಭದಲ್ಲಿ  ಸೇನಾನಿಗಳನ್ನು ಗೌರವಿಸುವುದರೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ಕಾರ್ಗಿಲ್ ವಿಜಯೋತ್ಸವವನ್ನು ನಾವು ಮತ್ತೆ ಮತ್ತೆ ನೆನಪು ಮಾಡಬೇಕು ಏಕೆಂದರೆ ನಮ್ಮ ಮುಂದಿನ ಪೀಳಿಗೆಗೆ ಅದರ ಅರ್ಥವಾಗಬೇಕು. ನಮ್ಮ ಹೃದಯದಲ್ಲಿರುವಂತಹ ದೇಶ ಭಕ್ತಿಯ ಮುಖಾಂತರ ನಮಗೆ ಈ ವಿಜಯೋತ್ಸವ ಪಡೆಯಲು ಸಾಧ್ಯವಾಗಿದೆ ನಮ್ಮ ದೇಶಕ್ಕೆ ಅನೇಕ ಜನ ಆಕ್ರಮಣ ಮಾಡಿದ್ದಾರೆ. 

ಭಾರತ ಯಾವ ದೇಶಕ್ಕೂ ಆಕ್ರಮಣ ಮಾಡಿಲ್ಲ ಈ ವಿಷಯ  ನಮ್ಮ ಮುಂದಿನ ಪೀಳಿಗೆಗೆ ತಿಳಿಯಬೇಕಾದರೆ ನಮ್ಮ ದೇಶದ ಸೇನೆಯಲ್ಲಿ ಕೆಲಸ ಮಾಡುವಂತಹ ಪಡೆಗಳ ಶೌರ್ಯವನ್ನು ನಾವು ಕಾಲಕಾಲಕ್ಕೆ ಇಂತಹ ಕಾರ್ಯಕ್ರಮದ ಮುಖಾಂತರ ತಿಳಿಸುವಂತಹ ಕಾರ್ಯ ಅವಶ್ಯಕತೆ ಇದೆ, ಇದನ್ನು ತಿಳಿಸಿದರೆ ಮುಂದಿನ ಪೀಳಿಗೆಗೂ ದೇಶ ಭಕ್ತಿ ಬರುವ ಸಾಧ್ಯತೆ ಇದೆ ಎಂದು ನಗರಸಭಾ ಸದಸ್ಯ ವಿಜಯ್ ಕೊಡವೂರು ಕಾರ್ಗಿಲ್ ದಿನಾಚರಣೆಯ ಬಗ್ಗೆ ತಿಳಿಸಿದರು. 

 ಈ ಸಂದರ್ಭದಲ್ಲಿ  ಮಲ್ಪೆ ಮೆಸ್ಕಾಂ ಅಧಿಕಾರಿ ಕೃಷ್ಣ ಮೂರ್ತಿ, ಯುವಕ ಸಂಘದ ಅಧ್ಯಕ್ಷ  ಪ್ರಭಾತ್ ಕೊಡವೂರು, ಅಜಿತ್ ಕೊಡವೂರು ಉಪಸ್ಥಿತರಿದ್ದರು. ವಿನಯ್ ಗರ್ಡೆ ಸ್ವಾಗತಿಸಿ ಧನ್ಯವಾದವಿತ್ತರು 

 
 
 
 
 
 
 
 
 
 
 

Leave a Reply