Janardhan Kodavoor/ Team KaravaliXpress
23.4 C
Udupi
Saturday, February 4, 2023
Sathyanatha Stores Brahmavara

ಉಡುಪಿ ತಾಲ್ಲೂಕು ಕರ್ನಾಟಕ ರಕ್ಷಣಾ ವೇದಿಕೆ ಘಟಕದ ಉದ್ಘಾಟನೆ

ಮಾನ್ಯ ಟಿ.ಎ.ನಾರಾಯಣ ಗೌಡರ ನೇತೃತ್ವದ ಕರ್ನಾಟಕ ರಕ್ಷಣಾ ವೇದಿಕೆಯ ಉಡುಪಿ ತಾಲೂಕು ಘಟಕದ ಉದ್ಘಾಟನೆಯು ಲಯನ್ಸ್ ಕ್ಲಬ್ ಬ್ರಹ್ಮಗಿರಿ ಇಲ್ಲಿ ನಡೆಯಿತು .ಕಾರ್ಯಕ್ರಮ ಉದ್ಘಾಟನೆಯನ್ನು ಉಡುಪಿ ಪೊಲೀಸ್ ಸಬ್ ಇನ್ಪೆಕ್ಟರ್ ಶ್ರೀ ಪ್ರಮೋದ್ ಕುಮಾರ್ ಪಿ ನೆರವೇರಿಸಿ ಶುಭಾಶಯ ಕೋರಿದರು.ಕಾರ್ಯಕ್ರಮದಲ್ಲಿ ಉಡುಪಿ ತಾಲ್ಲೂಕು ಅಧ್ಯಕ್ಷರಾಗಿ ಅ.ರಾ .ಪ್ರಭಾಕರ್ ರಾಜ್ ಪೂಜಾರಿ ಮತ್ತು ಮಹಿಳಾ ಅಧ್ಯಕ್ಷರಾದ ಶ್ರೀಮತಿ ಮಮತಾ ಪ್ರಭಾಕರ್ ಅವರ ಅಧ್ಯಕ್ಷತೆಯಲ್ಲಿ ನಡೆಯಿತು .ಕಾರ್ಯಕ್ರಮದಲ್ಲಿ ಜಿಲ್ಲಾ ಘಟಕದ ಅಧ್ಯಕ್ಷರಾದ ಶ್ರೀ ಸುಜಯ ಪೂಜಾರಿ , ಗೌರವಾಧ್ಯಕ್ಷರಾಗಿ ಲ।ಡಾ।ನೇರಿ ಕರ್ನೇಲಿಯೊ ,
ಶ್ರೀ ರಾಘವೇಂದ್ರ ನಾಯಕ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ , ಶ್ರೀಮತಿ ಗೀತಾ ಪಾಂಗಳ ಉಪಸ್ಥಿತರಿದ್ದರು.ಕಾರ್ಯಕ್ರಮದಲ್ಲಿ ಶ್ರೀ ಶಾರದಾ ಅಂಧರ ಗೀತಾಗಾಯನ ಕಲಾ ಸಂಸ್ಥೆ ಶಿವಮೊಗ್ಗ ಇವರಿಂದ ಸಂಗೀತ ಕಾರ್ಯಕ್ರಮ ನಡೆಯಿತು .
ಕಾರ್ಯಕ್ರಮದಲ್ಲಿ ಸಮಾಜಸೇವಕ ಹಾಗೂ ಬ್ರಹ್ಮಾವರ ಕರವೇ ಘಟಕದ ಅಧ್ಯಕ್ಷರಾದ ಶ್ರೀ ಫ್ರ್ಯಾಂಕಿ ಡಿಸೋಜ ಕೊಳಲಗಿರಿ , ಸಮಾಜಸೇವಕ ಶ್ರೀ ಮೊಹಮ್ಮದ್ ಅಸಿಫ್ ಆಪಾತ್ಭಂಧಾವ , ಶ್ರೀ ಪ್ರಭಾಕರ್ ಜಿ.ಬೆಳ್ಳಿಸರ ಉರಗ ತಜ್ಞರು ಈ ಮೂವರು ಸಾಧಕರ ಸಮಾಜ ಸೇವೆಯನ್ನು ಗುರುತಿಸಿ ಸನ್ಮಾನಿಸಲಾಯಿತು . ಕಾರ್ಯಕ್ರಮದಲ್ಲಿ ಉಡುಪಿ ತಾಲ್ಲೂಕು ಘಟಕದ ಪದಾಧಿಕಾರಿಗಳು ,ಸದಸ್ಯರು ಜಿಲ್ಲಾ ಘಟಕದ ಸದಸ್ಯರು ಉಪಸ್ಥಿತರಿದ್ದರು . ಸ್ವಾಗತವನ್ನು ಅನುಷಾ ಆಚಾರ್ ನಡೆಸಿದರು . ಪ್ರದೀಪ್ ಡಿ.ಎಮ್.ಹಾವಂಜೆ ನಿರೂಪಿಸಿದರು .

- Advertisement -

ಸಂಬಂಧಿತ ಸುದ್ದಿ

Leave a Reply

ಛಾಯಾಂಕಣ

ಇತ್ತೀಚಿನ ಸುದ್ದಿ

error: Content is protected !!